ಸುಶಿಕ್ಷಿತ ವರ್ಗದ ಸಂಘದ ನಡೆ ಮಾದರಿಯಾಗಿರಲಿ-ಸ್ಟ್ಯಾನಲಿ
ಅನುದಾನಿತ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸನ್ಮಾನ ಸಮಾರಂಭ

ಸುಶಿಕ್ಷತ ವರ್ಗದ ಸಂಘದ ನಡೆದ ಮಾದರಿಯಾಗಿರಲಿ-ಸ್ಟ್ಯಾನಲಿ
ಅನುದಾನಿತ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸನ್ಮಾನ ಸಮಾರಂಭ
yadgiri, ಶಹಾಪುರಃ ಶಿಕ್ಷಕರ ಸಂಘ ಎಂದ ಮೇಲೆ ಇದು ಸುಶಿಕ್ಷಿತರ ಕೂಟ. ಸಮಾಜದಲ್ಲಿ ಶಿಕ್ಷಕ ವರ್ಗಕ್ಕೆ ಪೌರಾಣಿಕ ಕಾಲದಿಂದ ಅಪಾರ ಗೌರವವಿದೆ. ಹೀಗಾಗಿ ನಮ್ಮ ಸಂಘ ಸಮಾಜಕ್ಕೆ ಮಾದರಿಯಾಗಿರಬೇಕೆಂದು ಸಂತಪಾಲ ಶಾಲೆಯ ಮುಖ್ಯಗುರು ಸ್ಟ್ಯಾನಲಿ ವರದರಾಜ ತಿಳಿಸಿದರು.
ನಗರದ ಸಂತಪಲಾ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ ವೈಮನಸ್ಸಿಗೆ ಎಡೆ ಮಾಡಿಕೊಡದೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತ ನಾವುಗಳೆಲ್ಲ ವಯಕ್ತಿಕ ಹಿತಾಸಕ್ತಿಗೆ ಒತ್ತು ನೀಡಿ ತಪ್ಪು ದಾರಿಗೆ ಇಳಿಯಬಾರದು. ಶಿಕ್ಷಕರ ಸಂಘ ಮಾದರಿ ಸಂಘವಾಗಿ ಬೆಳೆಸಬೇಕಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳೆಲ್ಲ ಎಲ್ಲಾ ಶಿಕ್ಷಕರು ಒಂದಾಗಿ ಸಂಘದ ಬಲವರ್ಧನೆಗೆ ಶ್ರಮಿಸಬೇಕಿದೆ. ಬಾಹುಬಲಿ ಯಾವ ರೀತಿ ತ್ಯಾಗಮಯಿ ನಡೆಯಿಂದ ಗೆಲುವನ್ನು ಸಾಧಿಸುತ್ತಾನೆ ಎಂಬುದನ್ನು ಅರಿಯಬೇಕು. ತ್ಯಾಗ, ಸೋಲು ಮುಂದಿನ ಬೆಳವಣಿಗೆಗೆ ಸಾಕಾರವಾಗಲಿದೆ ಎಂಬುದನ್ನು ಮರೆಯಬಾರದು ಎಂದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶಿವಬಸಪ್ಪ ಮಾಲಿಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಸಾಹು, ಶಹಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಪ್ಪ ಮಲ್ಲಾಬಾದಿ ಹಾಗೂ ತಾಲ್ಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸೂರ್ಯಕಾಂತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹ ಶಿಕ್ಷಕ ನಾಗರಾಜ ನಿರೂಪಿಸಿದರು. ರಾಮೇಶ್ವರ ಸ್ವಾಗತಿಸಿದರು. ಪ್ರಕಾಶ ವಂದಿಸಿದರು.
ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ನಿಮ್ಮೊಂದಿಗೆ ಇದ್ದು ಕೆಲಸ ಮಾಡುವೆ. ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆ ಸಾಕಷ್ಟು ಇವೆ. ಈ ಕುರಿತು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವದು. ಸ್ಟ್ಯಾನಲಿ ಸರ್ ಹೇಳಿದಂತೆ ಒಗ್ಗಟ್ಟಿನಲ್ಲಿ ಬಲವಿದೆ. ಹಿರಿಯ ಅನುದಾನಿತ ಸಂಸ್ಥೆ, ಶಿಕ್ಷಕರ ಸಹಾಯ ಸಹಕಾರ ಸಲಹೆ ಮೇರೆಗೆ ಸಂಘದ ಮುನ್ನಡೆಸೋಣ.
-ಶಿವಬಸಪ್ಪ ಮಾಲಿಪಾಟೀಲ್. ನೂತನ ಜಿಲ್ಲಾಧ್ಯಕ್ಷ. ಕರಾಅಶಾಶಿ ಸಂಘ.
ಅನುದಾನಿತ ಶಾಲಾ ಶಿಕ್ಷಕರ ಸಹಾಯದೊಂದಿಗೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಂಘದ ಚಟುವಟಿಕೆಯಲ್ಲಿ ಸದಾ ಕ್ರಿಯಾಶೀಲನಾಗಿರುವೆ. ತಮ್ಮ ಸಲಹೆ ಸೂಚನೆ ಅನುಸಾರ ಮುಂದಿನ ಸಂಘದ ಚಟುವಟಿಕೆ ನಡೆಸುವ ಭರವಸೆ ನೀಡುತ್ತೇನೆ.
-ಲಕ್ಕಪ್ಪ ಮಲ್ಲಾಬಾದಿ. ನೂತನ ತಾಲೂಕು ಅಧ್ಯಕ್ಷ. ಕರಾಅಶಾಶಿ ಸಂಘ.