ಕೊರೊನಾ ಶಂಕಿತ ವೃದ್ಧನ ಸಾವು ದೃಢ ಪಟ್ಟಿಲ್ಲ- ಶ್ರೀರಾಮುಲು
ಕೊರೊನಾ ಶಂಕಿತ ವೃದ್ಧನ ಸಾವು ದೃಢ ಪಟ್ಟಿಲ್ಲ- ಶ್ರೀರಾಮುಲು
ಬೆಂಗಳೂರಃ ಇಲ್ಲಿವರೆಗೂ ರಾಜ್ಯದಲ್ಲಿ ನಾಲ್ಕು ಕೊರೊನಾ ಸೋಂಕು ಪ್ರಕರಣಗಳ ಮಾತ್ರ ದೃಢ ಪಟ್ಟಿದ್ದು, ಅವರಿಗೂ ಸೂಕ್ತ ಚಿಕಿತ್ಸೆ ನಡೆದಿದೆ. ಆದರೆ ಕಲಬುರ್ಗಿಯಲ್ಲಿ ಕೊರೊನಾ ಸೋಂಕಿತ ವೃದ್ಧನೋರ್ವನ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಅದು ಇನ್ನೂ ಶಂಕಿತ ಕೊರೊನಾ ಇರುವ ಕಾರಣ ಯಾರೊಬ್ಬರು ಭಯ ಪಡುವ ಆತಂಕವಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಕಲಬುರ್ಗಿಯ ಕೊರೊನಾ ಸೋಂಕಿತ ಹೈದ್ರಾಬಾದ್ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆತನಿಗೆ ಕೊರೊನಾ ಸೋಂಕು ತಗುಲಿತ್ತು ಎಂಬುದಕ್ಕೆ ಇದುವರೆಗೂ ರಿಪೋರ್ಟ್ ಬಂದಿಲ್ಲ. ಬೆಂಗಳೂರಿಗೆ ರಕ್ತ ಪರೀಕ್ಷೆಗೆ ಕಳುಹಿಸಲಾಗಿತ್ತು ಎನ್ನಲಾಗಿದೆ. ಇನ್ನು ಕೆಲವೆ ನಿಮಿಷಗಳಲ್ಲಿ ಸ್ಪಷ್ಟ ವರದಿ ಪಡೆದು ತಿಳಿಸುವೆ ಎಂದರು.
ದೃಢವಾಗುವವರೆಗೂ ಅದು ಶಂಕಿತ ಕೊರೊನಾ ಎನ್ನಬೇಕಾಗುತ್ತದೆ. ಈ ಕುರಿತು ಕೂಡಲೇ ಸಮರ್ಪಕ ಮಾಹಿತಿ ಪಡೆದು ರಕ್ತ ಪರೀಕ್ಷೆಯ ಮಾದರಿ ತೆಗೆದುಕೊಂಡು ಮಾಹಿತಿ ನೀಡಿವೆ. ಅದುವರೆಗೂ ಸೋಂಕಿತನ ಶವ ಸಂಸ್ಕಾರಕ್ಕೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದರು.