Home

ಮಡಿವಾಳರಿಗೆ ಎಸ್ಸಿ ಮೀಸಲಾತಿ ಕಲ್ಪಿಸಲಿ – ಮಹೇಶ್

ಡಾ.ಅನ್ನಪೂರ್ಣ ವರದಿ ಜಾರಿಗೆ ಆಗ್ರಹ

ವೀರಗಣಾಚಾರಿ ಮಡಿವಾಳೇಶ್ವರ ಜಯಂತ್ಯುತ್ಸವ

yadgiri, ಶಹಾಪುರಃ  ಮಡಿವಾಳ ಸಮಾಜವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ತೀರ ಹಿಂದುಳಿದಿದೆ. ಸರ್ಕಾರ ಡಾ.ಅನ್ನಪೂರ್ಣ ಆಯೋಗ ವರದಿ ಜಾರಿಗೊಳಿಸುವ ಮೂಲಕ ಮಡಿವಾಳ ಸಮಾಜವನ್ನು ಎಸ್ಸಿ ಮೀಸಲಾತಿಯಡಿ ಸೌಲಭ್ಯ ಕಲ್ಪಿಸುವ ಮೂಲಕ ಅನುಕೂಲ ಕಲ್ಪಿಸಬೇಕೆಂದು ನಗರಸಭೆ ಸದಸ್ಯ ಮಹೇಶ್ ಮಡಿವಾಳ ಆಗ್ರಹಿಸಿದರು.
ವೀರಗಣಾಚಾರಿ ವಚನ ಸಾಹಿತ್ಯ ರಕ್ಷಕ ಶ್ರೀಮಡಿವಾಳೇಶ್ವರ ಜಯಂತ್ಯುತ್ಸವ ಅಂಗವಾಗಿ ನಗರದ ಮಡಿವಾಳೇಶ್ವರ ಬಡಾವಣೆಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಸರ್ಕಾರ ಈಚೆಗೆ ಶರಣ ಮಡಿವಾಳೇಶ್ವರ ಜಯಂತಿ ಆಚರಣೆಗೆ ಆದೇಶ ನೀಡಿದ್ದು, ಸಂತಸದ ವಿಷಯ ಆದರೆ, ಸಮುದಾಯದ ಜನರಿಗೆ ಸರ್ಕಾರಿ ಸಔಲಭ್ಯ ದೊರಕದೆ ತೀರ ಬಡತನಕ್ಕಿಂತ ಕೆಳಗಿನ ರೇಖೆಯಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಸಮರ್ಪಕ ಸೌಲಭ್ಯ ಕಲ್ಪಿಸಬೇಕಾಗಿದೆ.

ದೇಶದ 16 ರಾಜ್ಯಗಳಲ್ಲಿ ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲೂ ಪರಿಶಿಷ್ಟ ಜಾತಿಗೆ ಸೇರಿಸುವ ಹೋರಾಟ ಬಹು ವರ್ಷಗಳಿಂದ ನಡೆಯುತ್ತಿದೆ. ಆದರೆ ಯಾವುದೇ ಸರ್ಕಾರ ಬಂದರೂ ಕ್ಯಾರೆ ಎನ್ನುತ್ತಿಲ್ಲ ನಮ್ಮದು ಸಂಘಟಿತ ಹೋರಾಟ ನಡೆಯುತ್ತಿಲ್ಲವೇ.? ಅಥವಾ ಸಮುದಾಯ ಜನ ಕಡಿಮೆ ಇರುವ ಕಾರಣ ರಾಜಕೀಯದವರು ತಲೆ ಕೆಡಿಸಿಕೊಳ್ಳುತ್ತಿಲ್ಲªವೇ.? ಎಂದು ವಿಷಾಧಿಸಿದರು.

ಸಮಾಜದ ಹಿರಿಯ ಸಾಯಬಣ್ಣ ಮಡಿವಾಳ ಮಾತನಾಡಿ, ಶರಣ ಮಾಚಿದೇವರ ಕುರಿತು ವಿವರಿಸಿದರು. ಉಪನ್ಯಾಸಕ ದೇವಿಂದ್ರಪ್ಪ ಮಡಿವಾಳ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸುಶಿಕ್ಷಿತರಾದಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲುಸಾಧ್ಯ ಎಂದರು.

ಸ್ಥಳೀಯ ಮಡಿವಾಳೇಶ್ವರ ಮಠದ ಶೇಖಪ್ಪ ಸಾಧು, ಸಮಾಜದ ಅದ್ಯಕ್ಷ ಭೀಮರಾಯ ಗುತ್ತಿಪೇಠ, ಚಂದ್ರಪ್ರಕಾಶ ಹಳಿಸಗರ, ಮಲ್ಲಪ್ಪ, ಶಿವಪ್ಪ ನಂದಿಹಳ್ಳಿ, ಸಂಗಣ್ಣ ದಿಗ್ಗಿ, ನಾಗೇಂದ್ರ ವಕೀಲರು, ಬಸವರಾಜ ಮಡಿವಾಳ, ನಾಗು ಮಡಿವಾಳ, ಕಾಂತಪ್ಪ, ಬಲಭೀಮ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button