ಶಹಾಪುರಃಪ್ರವಾದಿ ಮಹ್ಮದ್‍ರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಮುಸ್ಲಿಂ ಧರ್ಮದ ವಿರುದ್ಧ ಬಿಜೆಪಿ ನಾಯಕ ಹೇಳಿಕೆಗೆ ಆಕ್ರೋಶ

ಪ್ರವಾದಿ ಮಹ್ಮದ್‍ರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ
ಮುಸ್ಲಿಂ ಧರ್ಮದ ವಿರುದ್ಧ ಬಿಜೆಪಿ ನಾಯಕ ಹೇಳಿಕೆಗೆ ಆಕ್ರೋಶ
yadgiri,ಶಹಾಪುರಃ ಬಿಜೆಪಿಯ ರಾಷ್ಟ್ರೀಯ ವಕ್ತಾರ ನೂಪುರ ಶರ್ಮಾ ಹಾಗೂ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ನವೀನ್ ಜಿಂದಾಲ್ ಮುಸ್ಲಿಂ ಧರ್ಮ ಮತ್ತು ಪ್ರವಾದಿ ಮಹ್ಮದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವದು ಖಂಡಿಸಿ ಇಲ್ಲಿನ ಮುಸ್ಲಿಂ ಒಕ್ಕೂಟ ಶುಕ್ರವಾರ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ನಾಯಕ ನೂಪುರ ಶರ್ಮಾ ದೂರದರ್ಶನವೊಂದರಲ್ಲಿ ನಡೆದ ಚರ್ಚೆ ವೇಳೆ ಇಸ್ಲಾಂ ಧರ್ಮದ ಬಗ್ಗೆ ಮತ್ತು ಪ್ರವಾದಿ ಮಹ್ಮದ್‍ರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವದು ಖಂಡನೀಯ. ಅಲ್ಲದೆ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ನವೀನ್ ಜಿಂದಾಲ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ಮಹ್ಮದರÀ್ರ ಬಗ್ಗೆ ಅವಹೇಳನಕಾರಿ ಟ್ವಿಟ್‍ಗಳನ್ನು ಮಾಡಿದ್ದು, ಈ ಇಬ್ಬರ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ದೇಶದಾದ್ಯಂತ ಮುಸ್ಲಿಂ ಸಮುದಾಯ ಪ್ರತಿಭಟನೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ತಯಾರಿ ನಡೆಯಲಿದೆ ಎಂದು ಇಲ್ಲಿನ ಮುಸ್ಲಿಂ ಬಾಂಧವರು ಎಚ್ಚರಿಕೆ ನೀಡಿದರು.
ಧರ್ಮ, ಜಾತಿ ಜಾತಿಗಳ ನಡುವೆ ಸಂಘರ್ಷ ತಂದಿಡುವಂತ ಪಿತೂರಿ ನಡೆಸುವ ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ದೇಶಾಭಿಮಾನದ ಸೋಗಿನಲ್ಲಿ ದೇಶವನ್ನು ಧರ್ಮದ ಹೆಸರಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿರುವದು ಸರಿಯಲ್ಲ. ದೇಶದಲ್ಲಿ ಕೋಮು ಭಾವನೆಗಳನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಇದರಿಂದ ದೇಶಕ್ಕೆ ಅಪಾಯವಿದೆ. ಈ ಕುರಿತು ರಾಷ್ಟ್ರಪತಿಗಳ ಸಮಗ್ರವಾಗಿ ಸಮಾಲೋಚಿಸಿ ಇಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಯ್ಯದ್ ಸೈದುದ್ದೀನ್ ಖಾದ್ರಿ, ಸಯ್ಯದ್ ಮುಸ್ತಫಾ ದರ್ಬಾನ್, ಸಯ್ಯದ್ ಶಫಿವುದ್ದೀನ್, ಇಸ್ಮೈಲ್ ಚಾಂದ್, ನೂರುದ್ದೀನ್ ಖಾದ್ರಿ, ರಫೀಕ್ ಚೌದ್ರಿ, ಸಯ್ಯದ್ ಮುರ್ತುಜಾ, ಬಾಬಾ ಪಟೇಲ್, ತಲಾಕ್ ಚಾಂದ್, ನಯೀಮ್ ಅಫ್ಘಾನ್ ಸೇರಿದಂತೆ ಇತರರಿದ್ದರು.