ಪ್ರಮುಖ ಸುದ್ದಿ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳನ್ನು ಒಂದೂಗೂಡಿಸಿದ ನ್ಯಾಯಾಲಯ

ವಿಚ್ಛೇದನ ಪ್ರಕರಣಃ ಮಾನವೀಯ ಸ್ಪರ್ಶ ನೀಡಿದ ನ್ಯಾಯಾಧೀಶರು.!

ವಿವಾಹ ವಿಚ್ಛೇಧನ ಪ್ರಕರಣ
ಮಾನವೀಯ ಸ್ಪರ್ಶ ನೀಡಿದ ನ್ಯಾಯಾಲಯ…!

Yadgiri, ಶಹಾಪುರ: ಕೌಟಂಬಿಕ ಭಿನ್ನಾಭಿಪ್ರಾಯದಿಂದ

 

ದಂಪತಿಗಳಿಬ್ಬರು ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಿ ದಾಂಪತ್ಯ ಸಹಜೀವನದಿಂದ ದೂರವಾಗಲು ನಿರ್ಧರಿಸಿದ್ರೂ ಆದರೆ ಇಂದು ಇಲ್ಲಿನ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ, ಪರಸ್ಪರ ಇಬ್ಬರನ್ನು ಕೂಡಿಸಿ ನ್ಯಾಯಾಧೀಶರು ಮಾನವೀಯ ಸ್ಪರ್ಶ ನೀಡುವ ಮೂಲಕ ಇಬ್ಬರನ್ನು ಒಂದೂಗೂಡಿಸುವಲ್ಲಿ  ಯಶಸ್ವಿಯಾಗಿದ್ದಾರೆ. ಪರಸ್ಪರ ಒಂದಾಗಿ ಮತ್ತೆ ಜೀವನ ಸಾಗಿಸುವಲ್ಲಿ  ದಂಪತಿಗಳಿಬ್ಬರು ಒಪ್ಪಿರುವದು ನ್ಯಾಯಾಲಯದಲ್ಲಿ ಹೊಸ ‌ಸಂಚಲನ ಮೂಡಿಸಿತು.

ಇದು ಶಹಾಪುರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ನಡೆದ ಪ್ರಕರಣ ಇದಾಗಿದ್ದು, ದಂಪತಿಗಳು ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಾಯಿಸಿ ಸಿಹಿ ಹಂಚಿಕೊಂಡು ಧನ್ಯತೆಯ ಭಾವ ವ್ಯಕ್ತಪಡಿಸಿದರು. ಇಂತಹ ಅಮೃತ ಘಳಿಗೆಗೆ ವಕೀಲರು ಸಾಕ್ಷಿಯಾದರು.

ವಡಗೇರಾ ತಾಲ್ಲೂಕಿನ ಕ್ಯಾತನಾಳ ಗ್ರಾಮದ ಮಲ್ಲಿಕಾರ್ಜುನ ನಾಟೇಕರ್ ಅವರು 2005 ಜೂನ್ 25ರಂದು ಉಳ್ಳೆಸೂಗೂರ ಗ್ರಾಮದ ಮರೆಮ್ಮ ಎನ್ನುವಳ ಜೊತೆ ಮದುವೆಯಾಗಿತ್ತು. ಸುಖ ದಾಂಪತ್ಯ ಜೀವನ ನಡೆಸಿದ ಫಲವಾಗಿ ಮೂವರು ಮಕ್ಕಳು ಜನಿಸಿದ್ದರು.

ಇಬ್ಬರ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು. ಇದರಿಂದ ಪರಸ್ಪರ ದೂರವಾಗಿದ್ದರು. ಕೊನೆಗೆ ವರ್ಷದ ಹಿಂದೆ ಮಲ್ಲಿಕಾರ್ಜುನ ಎನ್ನುವರು ವಿವಾಹ ವಿಚ್ಛೇಧನ ಕೋರಿ ನ್ಯಾಯಾಲಯಲಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದರಾಮ ಟಿ.ಪಿ ಅವರು ಇಬ್ಬರು ದಂಪತಿಗಳಿಗೆ ಬುದ್ದವಾದ ಹೇಳಿ ಜೀವನದಲ್ಲಿ ದ್ವೇಷದಿಂದ ಸಾಧಿಸುದಾದರು ಏನು ಇಲ್ಲ. ಮೂರು ಮಕ್ಕಳ ಭವಿಷ್ಯದ ಗತಿ ಏನು ?. ಯಾವುದೋ ಕೆಟ್ಟ ಘಳಿಗೆಯಿಂದ ಭಿನ್ನಾಭಿಪ್ರಾಯ ಸಂಸಾರದಲ್ಲಿ ಬಂದಿರಬಹುದು. ಅವೆಲ್ಲವನ್ನು ಮರೆತು ಜೀವನವನ್ನು ಮುಂದೆ ಸಾಗಿಸಬೇಕಾಗಿದೆ.

ಕೋವಿಡ್ ನಿಂದ ಜೀವನದಲ್ಲಿ ಸಾಕಷ್ಟ ಜೀವನದ ಪಾಠವನ್ನು ಕಲಿತಿರುವುದನ್ನು ಮರೆತಿಲ್ಲ. ರಾಜಿ ಸಂಧಾನವೇ ಜೀವನ ರಾಜ ಮಾರ್ಗ ಎಂಬುವುದು ಮರೆಯಬೇಡಿ ಎಂದು ಸಲಹೆ ನೀಡಿದಾಗ ದಂಪತಿಗಳು ತಮ್ಮ ದ್ವೇಷವನ್ನು ಮರೆತು ಒಂದಾಗಿ ಜೀವನ ನಡೆಸಲು ಸಮ್ಮತಿಸಿದರು ಎಂದು ಅರ್ಜಿದಾರ ಪರ ವಕೀಲ ಟಿ.ನಾಗೇಂದ್ರ ತಿಳಿಸಿದರು.

ನ್ಯಾಯಾಲಯಕ್ಕೆ ವಿವಾಹ ವಿಚ್ಚೇಧನ ಕೋರಿ ಬಂದ ದಂಪತಿಗಳಿಗೆ ಹಿರಿಯರ ಸ್ಥಾನದಲ್ಲಿ ನಿಂತು ಬುದ್ದಿವಾದ ಹೇಳಿ ಕುಟುಂಬವನ್ನು ಮತ್ತೆ ಬೆಸೆಯುವಂತೆ ಮಾಡುವ ಕಾರ್ಯಕ್ಕೆ ಇಂತಹ ಪ್ರಕರಣ ಸಾಕ್ಷಿಯಾಗಿದೆ ಎಂದು ಹಿರಿಯ ವಕೀಲರಾದ ಶ್ರೀನಿವಾಸರಾವ ಕುಲಕರ್ಣಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರದಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ, ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಕಾರ್ಯದರ್ಶಿ ಮಲ್ಲಿಕಾರ್ಜುನ ಬುಕ್ಕಲ, ಹಿರಿಯ ವಕೀಲ ಚಂದ್ರಶೇಖರ ದೇಸಾಯಿ, ಬಸಮ್ಮ ರಾಂಪುರೆ, ಮಲ್ಲಿಕಾರ್ಜುನ ಪೂಜಾರಿ ಆಯಿಷ್ ಪರ್ವಿನ್ , ಜಯಲಕ್ಷ್ಮಿ ಬಸರಡ್ಡಿ, ಸಂತೋಷ ಪ್ರಭಾಕರ ಇದ್ದರು

Related Articles

Leave a Reply

Your email address will not be published. Required fields are marked *

Back to top button