ಪ್ರಮುಖ ಸುದ್ದಿ
ಕೆಂಭಾವಿಃ ಧಾರಾಕಾರ ಮಳೆ, ಕೆರೆಯಂತಾದ ಪಟ್ಟಣ, ಜನ ಜೀವನ ಅಸ್ತವ್ಯಸ್ತ
ಕೆಂಭಾವಿಃ ಧಾರಾಕಾರ ಮಳೆ, ಕೆರೆಯಂತಾದ ಪಟ್ಟಣ, ಜನ ಜೀವನ ಅಸ್ತವ್ಯಸ್ತ
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ರವಿವಾರ ತಡ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪಟ್ಟಣ ತುಂಬೆಲ್ಲ ಮಳೆ ನೀರು ಆವರಿಸಿಕೊಂಡಿದ್ದು, ಕೆರೆಯಂತಾಗಿದೆ. ದೇವಾಲಯಗಳು ಸೇರಿದಂತೆ ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿದೆ. ಹಲವು ಮನೆಗಳು ಸಹ ಜಲಾ ವೃತವಾಗಿವೆ. ಧಾರಕಾರ ಮಳೆಯಿಂದ ನೂರಾರು ಕುಟುಂಬ ಕಂಗಾಲಾಗಿವೆ.