ಕಥೆಬಸವಭಕ್ತಿ

ಶಿವ ಲಿಂಗುವಿನ‌ ಮೇಲೆ ಚಮ್ಮಾರಿಕೆ ಕಾಯಕ ಯಾರಾತ.? ಅದ್ಭುತ ಭಕ್ತಿ ಕಾಯಕ ಓದಿ

ನಿಜ ಭಕ್ತಿ ಯಾವುದು.? ಸ್ವಾರ್ಥವಿಲ್ಲದ ನಿಸ್ವಾರ್ಥ‌ ಭಕ್ತಿ ಯಾವುದು.? ಶಿವ‌ ಯಾವ ಭಕ್ತರ ಪರ..? ಓದಿ

ದಿನಕ್ಕೊಂದು ಕಥೆ

ಚಮ್ಮಾರನ ಶಿವಭಕ್ತಿ

ಮ್ಮೆ ಶಿವ ಪಾರ್ವತಿ ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಪಾರ್ವತಿ ದೇವಿ ಭೂಲೋಕದ ಕಡೆ ನೋಡಿದಳು. ಭೂಲೋಕದಲ್ಲಿ ಶಿವನ ಭಕ್ತರು ಶಿವನನ್ನು ಪೂಜಿಸುತ್ತಿದ್ದರು. ಶಿವನ ಸ್ತೋತ್ರ ಮಾಡುತ್ತಿರುವವರನ್ನು ಕಂಡು ಪಾರ್ವತಿಗೆ ತುಂಬಾ ಸಂತೋಷವಾಯಿತು. ದೇವಾ ಒಂದು ಭಕ್ತರು ನಿತ್ಯ ನಿನ್ನನ್ನು ಇಷ್ಟ ಪಡುತ್ತಾರೆ.

ಅದಕ್ಕೆ ಶಿವನು, “ಹೌದು ಇವರಲ್ಲಿ ಯಾರೂ ನಿಜವಾದ ಭಕ್ತರಲ್ಲ. ಕೇವಲ ತೋರಿಕೆಗಾಗಿ ಹೀಗೆ ಮಾಡುತ್ತಿದ್ದಾರೆ. ಸ್ವಾರ್ಥ ತುಂಬಿದ ಮನಸ್ಸು ಅವರದು. ಪೂಜಾ ವಿಧಾನಗಳಲ್ಲಿ ತಮಗೆ ಬೇಕಾದುದನ್ನು ಕರುಣಿಸುವಂತೆ ನನ್ನನ್ನು ಪ್ರಾರ್ಥಿಸುತ್ತಾರೆ. ಸ್ವಾರ್ಥ ತುಂಬಿದ ಪೂಜಾ ಭಕ್ತಿಗೆ ನಾನು ಪ್ರೀತನಾಗುವುದಿಲ್ಲ” ಎನ್ನುತ್ತಾನೆ ಶಿವ.

ಭೂಲೋಕದ ಮಾನವರು ಎಷ್ಟು ಕಡೆಯಿಂದ ನೋಡಿದರೂ ತಮ್ಮ ಸ್ವಾರ್ಥ ಆಸೆಗಳಿಗೆ ಬೇಡುವವರನ್ನು ಕಂಡು ಪಾರ್ವತಿ ಆತಂಕಗೊಂಡಳು. ಸ್ವಲ್ಪ ಸಮಯ ಕಳೆದ ನಂತರ ಎಲ್ಲಿಂದಲೋ ಶಿವಶಿವ ಎಂಬ ಸದ್ದು ಕೇಳಿತು. ಪಾರ್ವತಿ ಶಿವನ ಕಡೆ ನೋಡಿದಳು.

ಹೌದು ಅವನು ನನ್ನ ನಿಜವಾದ ಭಕ್ತ ಅನುಮಾನ ಬೇಡ ಎಂದ. ಪಾರ್ವತಿ ಆ ಭಕ್ತನ ಕಡೆ ನೋಡಿದಳು. ಅವನೊಬ್ಬ ಚಮ್ಮಾರ ಅವನು ಶಿವಲಿಂಗದ ಮೇಲೆ ಚಪ್ಪಲಿ ಇಟ್ಟು ಅದನ್ನು ಪಟಪಟನೆ ಕುಟ್ಟುತ್ತ ರಿಪೇರಿ ಮಾಡುತ್ತಿದ್ದ. ಅದನ್ನು ಕಂಡು ಪಾರ್ವತಿಗೆ ಆಶ್ಚರ್ಯವಾಯಿತು. ಮತ್ತು ಕೋಪವೂ ಬಂದಿತು.

ಇದೆನಿದು ಅವನು ಮಾಡುವ ಕೆಲಸ. ಶಿವಲಿಂಗದ ಮೇಲೆ ಚಪ್ಪಲಿ ಮಾಡುವುದು. ಇದು ಶಿವನಿಗೆ ಅವಮಾನ ಮಾಡಿದಂತಲ್ಲವೇ ಇವನು ನಿಮ್ಮ ಭಕ್ತನೇ ಎಂದು ಶಿವನಿಗೆ ಕೇಳುತ್ತಾಳೆ. ಹೌದು ಪಾರ್ವತಿ ಇವನೇ ನಿಜವಾದ ಭಕ್ತ .

ಎಲ್ಲರೂ ಬೂಟಾಟಿಕೆಯಿಂದ ತಮ್ಮ ಸ್ವಾರ್ಥಕ್ಕಾಗಿ ಭಕ್ತಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಈತ ತನ್ನ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದಾನೆ. ಹಾಗೂ ಅವನ ಕೆಲಸದ ನಡುವೆ ಶಿವಶಿವ ಎನ್ನುತ್ತಿದ್ದಾನೆ. ನಿಸ್ವಾರ್ಥ ಭಾವದಿಂದ ಭಕ್ತಿ, ಪ್ರಾರ್ಥನೆ ಹಾಗೂ ಕಾಯಕವನ್ನು ಮಾಡುವವನೇ ನನ್ನ ಭಕ್ತ.

ಯಾರು ಆಡಂಬರದ ಭಕ್ತಿ ಪ್ರದರ್ಶಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ನನ್ನನ್ನು ಕೋರುತ್ತಾರೋ, ಅವರ ನಿಜ ಭಕ್ತರಲ್ಲ. ಚಮ್ಮಾರನ ಕೆಲಸದಿಂದ ಶಿವಲಿಂಗಕ್ಕೆ ಅಪಮಾನವಾಯಿತೆಂದು ಭಾವಿಸಬೇಡ. ಅವನ ಹೃದಯ ನಿಷ್ಕಲ್ಮಶವಾಗಿದೆ. ಶಿವನನ್ನು ಭಜಿಸುವುದನ್ನು ಬಿಟ್ಟು ಅವನಿಗೇನೂ ತಿಳಿದಿಲ್ಲ. ಅವನು ಏನನ್ನೂ ಬಯಸುತ್ತಿಲ್ಲ. ಆದ್ದರಿಂದ ಆ ಭಕ್ತನ ಮನಸ್ಸನ್ನು ನಿಗ್ರಹಿಸಿ ಅವನನ್ನು ಅನುಗ್ರಹಿಸುವ ಎಂದನು ಶಿವ.

ಪಾರ್ವತಿಗೆ ಶಿವನ ಮಾತನ್ನು ಕೇಳಿ ಚಮ್ಮಾರನಲ್ಲಿ ಪ್ರೀತಿ ಹಾಗೂ ನಂಬಿಕೆ ಉಂಟಾಯಿತು. ಚಮ್ಮಾರನಿಗೆ ಮಂಗಳವಾಗಲೆಂದು ಆಶೀರ್ವದಿಸಿದಳು.

🖊️ ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button