ಶಿವಾತ್ಮನಂದ ಮಹಾಸ್ವಾಮಿ ಹಸ್ತಂಗತಃ ಭಾವಪೂರ್ಣ ಶ್ರದ್ಧಾಂಜಲಿ

ಶಿವಾತ್ಮನಂದ ಮಹಾಸ್ವಾಮಿ ಹಸ್ತಂಗತಃ ಭಾವಪೂರ್ಣ ಶ್ರದ್ಧಾಂಜಲಿ
yadgiri, ಶಹಾಪುರಃ ದಾರ್ಶನಿಕರು, ಪರಮ ವೇದಾಧ್ಯಯನ ಪಂಡಿತರು, ಪ್ರಚಂಡ ಜ್ಞಾನಿಗಳು ಆಗಿದ್ದ ಚಿಕ್ಕಬಳ್ಳಾಪುರದ ನಂದಿಗ್ರಾಮದ ಜ್ಞಾನಾನಂದ ಆಶ್ರಮದ ಶ್ರೀಶ್ರೀಶ್ರೀ ಶಿವಾತ್ಮಾನಂದ ಸರಸ್ವತಿ ಮಹಾ ಸ್ವಾಮೀಗಳು ಬುಧವಾರ ವಿಧಿವಶರಾಗಿರುವ ವಿಷಯ ತಿಳಿದು ಅತೀವ ಆಘಾತವನ್ನುಂಟು ಮಾಡಿದೆ ಎಂದು ಪ್ರವಚನಕಾರ, ಏಕದಂಡಗಿ ಮಠದ ಅಜೇಂದ್ರ ಮಹಾಸ್ವಾಮೀಜಿಗಳು ವಿನಯವಾಣಿಗೆ ತಿಳಿಸಿದ್ದಾರೆ.
ಶಿವಾತ್ಮನಂದ ಸರಸ್ವತಿ ಮಹಾಸ್ವಾಮೀಜಿಗಳು ಅನಾರೋಗ್ಯದಿಂದ ಗುಣಮುಖರಾಗಿ ಬರುವ ಹಂಬಲವಿಟ್ಟುಕೊಂಡು ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡಿದ್ದ ನಮಗೆಲ್ಲ ಆ ವಿಶ್ವಕರ್ಮ ಭಗವಂತ ನಿರಾಶೆ ಮಾಡಿದ ಎಂದು ಅಶ್ರುತರ್ಪಣ ವ್ಯಕ್ತಪಡಿಸಿದರು.
ಸದಾ ಸಮಾಜವನ್ನು ಮುನ್ನಡೆಸುವ ದಿವ್ಯ ಚೇತನ ಶಕ್ತಿವೊಂದು ಇಂದು ನಂದಿತು. ಪ್ರಗತಿಪರ ವಿಚಾರಧಾರೆಯ ಚಿಲುಮೆ ಇಂದು ಬತ್ತಿ ಹೋಯಿತು. ವಿಶ್ವಕರ್ಮ ಸಮಾಜಕ್ಕಲ್ಲದೆ ಇಡಿ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಭಗವಂತ ಪೂಜ್ಯರ ಪವಿತ್ರಾತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಮತ್ತು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ರಾಜೂ ಬೊಮ್ಮನಳ್ಳಿ ಸಮಾಜದ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.