ಸಾಹಿತ್ಯ
ಅಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಕಾರ್ನಾಡ್ & ಕಂಬಾರರ ಚಿತ್ರ ಕಂಡವರಿಗೆ ಶಾಕ್!
ಸಾಹಿತಿ ಕಾರ್ನಾಡ್, ಕಂಬಾರರ ಭಾವಚಿತ್ರಕ್ಕೆ ವಿಭೂತಿ, ಕುಂಕುಮ, ಮಾಲೆ!
ಧಾರವಾಡ: ನಗರದ ಕಲಾಭವನದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳನ್ನಿರಿಸಲಾಗಿತ್ತು. ಆದರೆ, ಅಧಿಕಾರಿಗಳು ಮಾತ್ರ ಅದ್ಧೂರಿ ಗ್ರಂಥಾಲಯ ಸಪ್ತಾಹ ಮಾಡುವ ಭರದಲ್ಲಿ ಸಾಹಿತಿಗಳ ಭಾವ ಚಿತ್ರ ಗಳಿಗೆ ವಿಭೂತಿ, ಕುಂಕುಮವಿಟ್ಟು ಹೂಮಾಲೆ ಹಾಕೂವ ಮೂಲಕ ಪೂಜೆ ಸಲ್ಲಿಸಿದ್ದಾರೆ. ಆದರೆ, ಜೀವಂತವಿರುವ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರ ಚಿತ್ರಗಳಿಗೂ ಪೂಜೆ ಸಲ್ಲಿಸುವ ಮೂಲಕ ಎಡವಟ್ಟು ಮಾಡಿದ್ದಾರೆ.
ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ತಕ್ಷಣಕ್ಕೆ ಕಾರ್ನಾಡ್ ಮತ್ತು ಕಂಬಾರರ ಚಿತ್ರಗಳಿಗೆ ಹಚ್ಚಿದ್ದ ಕುಂಕುಮ, ವಿಭೂತಿ ಅಳಿಸಿ ಹೂಮಾಲೆ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ತರಲು ಮುಂದಾಗಿರುವ ವೇಳೆ ಈ ಘಟನೆ ನಡೆದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.