ಪ್ರಮುಖ ಸುದ್ದಿ
ಶಹಾಪುರಃ ಕೋತಿಗಳ ಹಾವಳಿ ತಡೆಗೆ ಮರೆಪ್ಪ ನಾಯ್ಕೋಡಿ ಮನವಿ
ಶಹಾಪುರಃ ಕೋತಿಗಳ ಹಾವಳಿ ತಡೆಗೆ ಮರೆಪ್ಪ ನಾಯ್ಕೋಡಿ ಮನವಿ
ಶಹಾಪುರಃ ನಗರದ ದೇವಿನಗರ, ಹಳೇ ಬಸ್ ನಿಲ್ದಾಣ ಸಮೀಪ ಕೋತಿಗಳ ಹಾವಳಿ ಜಾಸ್ತಿಯಾಗಿದ್ದು, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೋತಿಗಳನ್ನು ಬೇರಡೆ ಅರಣ್ಯ ಪ್ರದೇಶಕ್ಕೆ ಸಾಗಿಸಬೇಕೆಂದು ವ್ಯಾಪಾರಸ್ಥ ಮರೆಪ್ಪ ನಾಯ್ಕೋಡಿ ಆಗ್ರಹಿಸಿದ್ದಾರೆ.
ಸೋಮವಾರ ಇಲ್ಲಿನ ಸಂಗಮೇಶ್ವರ ಖಾನಾವಳಿಗೆ ನುಗ್ಗಿದ ಕೋತಿಗಳು ಬೆಲೆಬಾಳುವ ಟಿವಿಯೊಂದನ್ನು ಹೊಡೆದು ಹಾಕಿವೆ. ಖಾನಾವಳಿಯಲ್ಲಿದ್ದ ಆಹಾರ ಪದಾರ್ಥಗಳನ್ನು ಮಲೀನಗೊಳಿಸುವೆ. ಇದರಿಂದ ವ್ಯಾಪಾರಕ್ಕೆ ಅಡಚಣೆ ಅಲ್ಲದೆ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.
ಪಾನ್ ಶಾಪ್, ಇತರೆ ತಿಂಡಿ ತಿನಿಸು ಜನರಲ್ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ಕೋತಿಗಳಿಂದ ಕಿರಿಕಿರಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಣ್ಣು ಹಂಪಲ ವ್ಯಾಪಾರಿಗಳಿಗೂ ಕೋತಿಗಳು ಮೂಲಾಗಿವೆ. ಹೀಗಾಗಿ ಕೂಡಲೆ ಅರಣ್ಯ ಸಿಬ್ಬಂದಿ ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.