ಪ್ರಮುಖ ಸುದ್ದಿ
ಕಾಯಾ, ವಾಚಾ ಮನಸಾ ಕೆಲಸ ಮಾಡೋದೆ ನನ್ನ ಕಾಯಕ – ಶ್ರೀರಾಮುಲು
ಕಾಯಾ, ವಾಚಾ ಮನಸಾ ಕೆಲಸ ಮಾಡೋದೆ ನನ್ನ ಕಾಯಕ – ಶ್ರೀರಾಮುಲು
ಚಿತ್ರದುರ್ಗಃ ಬಹು ಎತ್ತರಕ್ಕೆ ಬೆಳೆದ ನಾಯಕರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು ಎಂಬ ನಿಲುವಿಗೆ ಬಂದಿರುವದು ಸರಿಯಲ್ಲ. ಇದರಿಂದ ರಾಜಕಾರಣ ಮೌಲ್ಯ ಕಳೆದುಕೊಳ್ಳಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿಗಳಾದ ವಾಜಪೇಯಿ ಹಾಗೂ ನೆಹರು ಅವರ ಬಗ್ಗೆ ಕೆಟ್ಟದಾಗಿ ಚರ್ಚೆಗೆ ಇಳಿಯುವದು ತಪ್ಪು ಎರಡು ಪಕ್ಷಗಳ ನಾಯಕರು ಇದಕ್ಕೆ ಇತಿಶ್ರೀ ಹಾಡಬೇಕೆಂದರು.
ಇದೇ ವೇಳೆ ಸಚಿವ ಸ್ಥಾನ ಮತ್ತು ಇಲಾಖೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಅವರು, ನಾನು ಏಳು ಬಾರಿ ಶಾಸಕನಾಗಿ, ನಾಲ್ಕು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.
ಎಂದೂ ಇದೇ ಖಾತೆ ಕೊಡಿ ಎಂದು ಕೇಳಿಲ್ಲ. ಕಾಯಾ, ವಾಚಾ ಮನಸಾ ಕೆಲಸ ಮಾಡುವದಷ್ಟೆ ನನ್ನ ಕಾಯಕ. ಕೊಟ್ಟ ಜವಬ್ದಾರಿಯನ್ನು ನಿಭಾಯಿಸುವದಷ್ಟೆ ನನಗೆ ಗೊತ್ತು. ಎಂದುತ್ತಿರಿಸಿದರು.