ಪ್ರಮುಖ ಸುದ್ದಿ

ಸಂತ್ರಸ್ತರ ನೆರವಿಗೆ ರಾಜ್ಯ, ಕೇಂದ್ರ ಸರ್ಕಾರ ಬದ್ಧ-ಶ್ರೀರಾಮುಲು

ಸಂತ್ರಸ್ತರ ಅಳಲು ಆಲಿಸಿ ಧೈರ್ಯ ತುಂಬಿದ ಸಚಿವ ಶ್ರೀರಾಮುಲು

ಯಾದಗಿರಿಃ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಸ್ಥಿತಿಗತಿ ಅರಿಯಲು ಸೂಚನೆ ನೀಡಿರುವ ಹಿನ್ನೆಲೆ, ನಿನ್ನೆ ರಾಯಚೂರ ಇಂದು ಯಾದಗಿರಿ ಜಿಲ್ಲೆಯಲ್ಲಿ ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿಯಾಗಿ ಸಮಗ್ರ ಮಾಹಿತಿ ಕಲೆ ಹಾಕುತ್ತೇದ್ದೇವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಜಿಲ್ಲೆಯ ಶಹಾಪುರ ತಾಲೂಕಿನ ಯಕ್ಷಿಂತಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಸೇರಿದ್ದ ಸಂತ್ರಸ್ತರೊಂದಿಗೆ ಮಾತನಾಡಿ, ಅವರ ಅಳಲನ್ನು ಆಲಿಸಿ ಧೈರ್ಯ ತುಂಬುವ ಜೊತೆಗೆ ಸಮಗ್ರ ಮಾಹಿತಿ ಕಲೆ ಹಾಕಿದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ರಾಜ್ಯ ನೂತನ ಸರ್ಕಾರದಲ್ಲಿ ನಾನು ಪ್ರಭು ಚವ್ಹಾಣ ಅವರು ಸೇರಿದಂತೆ ಹಲವರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡುತ್ತಿದ್ದಂತೆ, ನೆರೆ ಹಾವಳಿ ಪ್ರದೇಶಕ್ಕೆ ತೆರಳಿ ಅಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಮಾಹಿತಿ ಕಲೆ ಹಾಕುವಂತೆ ಸಿಎಂ ಯಡಿಯೂರಪ್ಪನವರು ಸೂಚಿಸಿದ ಹಿನ್ನೆಲೆ ನಮಗೆ ವಹಿಸಿದ್ದ ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದೇವೆ.

ಕಾರಣ ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ತಕ್ಷಣ ವಸತಿ ರಹಿತ ಸಂತ್ರಸ್ಥರಿಗೆ 10 ಸಾವಿರ ರೂ.ನೀಡಲು ಆದೇಶಿಸಲಾಗಿದೆ. ಅಲ್ಲದೆ ನಾವೆಲ್ಲ ನಿಮ್ಮ ಜೊತೆಗಿದ್ದೇವೆ. ಕೇಂದ್ರ ಸರ್ಕಾರವು ನಮ್ಮ ಜೊತೆಗಿದೆ. ಯಾರು ಭಯ ಪಡುವ ಅಗತ್ಯವಿಲ್ಲ.

ಕೇಂದ್ರ ಸರ್ಕಾರ ಈಗಾಗಲೇ ಸಾವಿರ ಕೋಟಿಗೂ ಅಧಿಕ ಹಣವನ್ನು ನೀಡಿದೆ. ಇನ್ನೂ ಸಮಗ್ರ ಮಾಹಿತಿ ನೀಡಿದ ನಂತರ ಮತ್ತಷ್ಟು ನೆರವು ನೀಡಲಿದೆ. ರಾಜ್ಯ ಸರ್ಕಾರವು ತಮಗಾದ ನಷ್ಟವನ್ನು ಸಮರ್ಪಕ ಮಾಹಿತಿ ನಂತರ ಪರಿಹಾರ ಒದಗಿಸಲಿದೆ ಎಂದು ಭರವಸೆ ನೀಡಿದರು.

ನಿನ್ನೆ ರಾಯಚೂರ ಜಿಲ್ಲೆ ಪ್ರವಾಹ ಕುರಿತು ಅಧ್ಯಯನ ನಡೆಸಿದ್ದೇವೆ. ಇಂದು ಯಾದಗಿರಿ ನಾಳೆ ಬಳ್ಳಾರಿಗೆ ಭೇಟಿ ನೀಡಿ ನಂತರ ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಲಾಗುವುದು ಎಂದರು.

ಸಚಿವ ಪ್ರಭು ಚವ್ಹಾಣ, ಸಂಸದ ರಾಜಾ ಅಮರೇಶ ನಾಯಕ, ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಹೃಷಿಕೇಶ ಸೋನೆವಾಲ, ಜಿಪಂ ಸಿಇಓ ಶಿಲ್ಪಾ ಶರ್ಮಾ ಸೇರಿದಂತೆ ಇತರರಿದ್ದರು.

ಜೆಡಿಎಸ್-ಕಾಂಗ್ರೆಸ್ ನಾಟಕ ಕಂಪನಿ

ಜೆಡಿಎಸ್-ಕಾಂಗ್ರೆಸ್ ನಾಟಕ ಕಂಪನಿ ಈ ಮೊದಲೇ ಹೇಳಿದ್ದೇನೆ. ಅವರು ಜನರ ರೈತರ ಸಂಕಷ್ಟದಲ್ಲಿ ಭಾಗವಹಿಸುವದಿಲ್ಲ. ಕಣ್ಣೀರೊರೆಸುವ ನಾಯಕರಾರು ಅಲ್ಲಿಲ್ಲ. ಎಲ್ಲರೂ ನಾಟಕ ಕಂಪಿನಿ ಇದ್ದಂತೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.

ಜೆಡಿಎಸ್-ಕಾಂಗ್ರೆಸ್ ನಾಯಕರಾರಿಗೆ ರೈತರ, ಪ್ರವಾಹದಿಂದ ತತ್ತರಿಸಿದ ಜನರ ಕಷ್ಟ ಆಲಿಸುವ ಸಮಯ ಅವರಿಗಿಲ್ಲ. ಸಮಸ್ಯೆಗಳ ಪರಿಹಾರ ಅವರಿಗೆ ಬೇಕಿಲ್ಲ. ನಾವು ಸಚಿವರಾಗುತ್ತಿದ್ದಂತೆ, ನಮ್ಮ ಸಿಎಂ ನೀಡಿದ ಸೂಚನೆಯಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನ ಆಶೋತ್ತರಗಳಿಗೆ ಸ್ಪಂಧಿಸುವ ಕಾರ್ಯದಲ್ಲಿ ತೊಡಗಿದ್ದೇವೆ.

ಹಿಂದಿನ ಸಮ್ಮಿಶ್ರ ಸರ್ಕಾರಕ್ಕೆ ಈ ಕಾಳಜಿ ಇರಲಿಲ್ಲ. ಇದೇ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ನಾಟಕ ಕಂಪನಿಯ ಶಾಸಕರೇ ಈಗ ನಿಮ್ಮೆ ಪಕ್ಷಕ್ಕೆ ಬರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು, ಅದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕೆಂಬ ಇಚ್ಛೆ ಆ ಭಗವಂತನದ್ದ ಇತ್ತು ಆ ಕಾರಣಕ್ಕೆ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದಷ್ಟೆ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button