ಸಂಕ್ರಾಂತಿ ಹಬ್ಬ ಶಾಂತಿಯುತ ಆಚರಣೆಗೆ ಸಿಪಿಐ ನಾಗರಾಜ ಕರೆ
ಸೌಹಾರ್ಧತೆ ಸಹಕಾರಗಳಿಂದ ಹಬ್ಬ ಆಚರಣೆಗೆ ಕರೆ
ಯಾದಗಿರಿಃ ಮಕರ ಸಂಕ್ರಾತಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಣೆ ಮಾಡುವ ಕಾರ್ಯ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಗರ ನಾಡಿನ ಆರಾಧ್ಯ ದೈವರೆಂದೆ ಖ್ಯಾತಿ ಪಡೆದ ಭೀ.ಗುಡಿ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆ ಸಂಕ್ರಾತಿ ಹಬ್ಬದಂದು(ಜ.14) ನಗರದಲ್ಲಿ ರಾತ್ರಿಪೂರ್ಣ ಮೆರವಣಿಗೆ ನಡೆಯಲ್ಲಿದೆ ಅಂದು ಸರ್ವರು ಸಹಕರಿಸುವ ಮೂಲಕ ಹಬ್ಬಕ್ಕೆ ಕಳೆ ತುಂಬಬೇಕಿದೆ ಎಂದು ಸಿಪಿಐ ಜೆ.ನಾಗರಾಜ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಸಂಕ್ರಾತಿ ಹಬ್ಬದ ನಿಮಿತ್ತ ಕರೆದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು.
ಅಂದು ಇನ್ನೊಂದು ಕೋಮಿನವರು ಆಚರಣೆಗೆ ಪ್ರೋತ್ಸಾಹ ನೀಡುವ ಮೂಲಕ ಪರಸ್ಪರರು ಸೌಹಾರ್ಧಯುತ ಆಚರಣೆಗೆ ಮಾದರಿಯಾಗಬೇಕು. ಯಾವುದೇ ಕೋಮಿನ ಹಬ್ಬ, ಹರಿದಿನ ಆಚರಣೆ ಇರಲಿ ಪರಸ್ಪರರು ಸಹೋದರ ಭಾವನೆಯಿಂದ ನಡೆದುಕೊಳ್ಳಬೇಕು.
ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅಂತಹ ಸುದ್ದಿ ರೂಮರ್ಗಳು ತಿಳಿದು ಬಂದಲ್ಲಿ ತಕ್ಷಣ ಪೊಲೀಸರನ್ನು ಸಂಪರ್ಕಿಸಿ. ಶಾಂತಿ ಸುವ್ಯವಸ್ಥೆಗೆ ಪೊಲೀಸ್ ಬಂದೋಬಸ್ಥ್ ಮಾಡಲಾಗಿದೆ. ದೇವರ ದರ್ಶನಕ್ಕೆಂದು ಗ್ರಾಮೀಣ ಭಾಗದಿಂದ ಸಾವಿರಾರು ಜನ ಹೆಣ್ಣು ಮಕ್ಕಳು ಬಂದಿರುತ್ತಾರೆ. ಯುವಕರು ರೋಡ ರೋಮಿಯೋ ತರಹ ವರ್ತನೆ ಕಂಡು ಬಂದಲ್ಲಿ ಪೊಲೀಸರು ಲಾಠಿ ರುಚಿ ನೋಡಬೇಕಾದಿರು ಎಚ್ಚರವೆಂದು ದುರ್ವರ್ತನೆ ನಡೆಯ ಯುವಕರಿಗೆ ಎಚ್ಚರಿಕೆಯ ಸಂದೇಶ ರವಾನಿಸದ್ದಾರೆ.
ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಅಸಡ್ಡೆ ಮತ್ತು ಇನ್ನೊಂದು ಕೋಮಿನವರ ಭಾವನೆಗಳಿಗೆ ಧಕ್ಕೆ ಬರುವಂತಾ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೆ ಪೊಲೀಸರಿಗೆ ತಿಳಿಸತಕ್ಕದ್ದು. ಯಾವುದೇ ಸಂದರ್ಭದಲ್ಲಿ ಪೊಲೀಸ ಇಲಾಖೆಯವರು ನೀಡುವ ಸೂಕ್ತ ಸಲಹೆಗಳಿಗೆ ಸರ್ವರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿಎಸ್ಪಿ ಪಾಂಡುರಂಗ ಎಸ್.ಜಯಶ್ರೀ ಓಡಲ್, ನಗರ ವಿವಿಧ ಸಮುದಾಯ ಮುಖಂಡರಾದ ನಾಗಪ್ಪ ತಹಸೀಲ್ದಾರ, ಸಿದ್ದು ಆರಬೋಳ, ಬಸವರಾಜ ಆನೇಗುಂದಿ, ಮಾನಪ್ಪ ದೊಡ್ಡಮನಿ, ಸಣ್ಣ ನಿಂಗಣ್ಣ ನಾಯ್ಕೋಡಿ, ಗುಂಡಪ್ಪ ತುಂಬಗಿ, ಹಣಮಂತ್ರಾಯ ಯಕ್ಷಿಂತಿ ಹಳಿಸಗರ, ಭಗವಂತ್ರಾಯ ಬಳ್ಳುಂಡಗಿ, ಭೀಮರಾಯ ಮಮದಾಪುರ, ಶಿವುಕುಮಾರ ತಳವಾರ, ಶಿವಪುತ್ರ ಜವಳಿ, ಸೈದುದ್ದೀನ್ ಖಾದ್ರಿ, ಎಸ್ಡಿಪಿಐ ಖಾಲೀದ್, ವಿಜಯಕುಮಾರ ಎದುರುಮನಿ, ಭೀಮರಾಯ ದೊಡ್ಮನಿ, ರುದ್ರಪ್ಪ ಹುಲಿಮನಿ ಇತರರಿದ್ದರು.