Home
ಹಿಜಾಬ್ ಸಮಸ್ಯೆ ಉದ್ಭವಕ್ಕೆ ಕಾರಣರಾರು.? ತನಿಖೆಗೆ ಗೃಹ ಸಚಿವ ಆದೇಶ

ಹಿಜಾಬ್ ಸಮಸ್ಯೆ ಉದ್ಭವಕ್ಕೆ ಕಾರಣರಾರು.? ತನಿಖೆಗೆ ಗೃಹ ಸಚಿವ ಆದೇಶ
ವಿವಾದದ ಹಿಂದೆ ಯಾರ ಕೈವಾಡವಿದೆ ಪತ್ತೆಗೆ ಸೂಚನೆ
ಬೆಂಗಳೂರಃ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಸಮಸ್ಯ ಉಲ್ಬಣಕ್ಕೆ ದೊಡ್ಡ ಕೈವಾಡವಿದ್ದು, ತನಿಖೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತಿಳಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸಮವಸ್ತ್ರ ಸಮಾನತೆಯ ಸಂಕೇತ. ಅದನ್ನು ಬಿಟ್ಟು ಹಿಜಾಬ್ ಆಗಲಿ ಕೇಸರಿ ಶಾಲಾಗಲಿ ಧರಿಸಿ ಶಾಲಾ ಕಾಲೇಜಿಗೆ ಬರುವಂತಿಲ್ಲ.
ಶಿಕ್ಷಣ ಸಂಹಿತೆ ಅನ್ವಯ ನಡೆಯಬೇಕೆಂದು. ಈ ಸಮಸ್ಯೆ ಭುಗಿಲೇಳಲು ಇದರ ಹಿಂದೆ ಪಿತೂರಿ ನಡೆದಿದೆ. ಕೂಡಲೆ ತನಿಖೆ ಕೈಗೊಳ್ಳುವ ಮೂಲಕ ಅಂಥವರನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.