ಪ್ರಮುಖ ಸುದ್ದಿ

ಯಡಿಯೂರಪ್ಪ‌ ಕಥೆ ಗೋವಿಂದ ಗೋವಿಂದಾ – ಡಿಕೆಶಿ

ಬೆಂಗಳೂರು: ಅತೃಪ್ತ‌ಶಾಸಕರೆಲ್ಲರು ಅಬ್ಬಬ್ಬಾ ಅಸಾಧ್ಯರು. ಮಹೇಶ ಕುಮಟಳ್ಳಿ ಸ್ವಲ್ಪ‌ ಸೈಲೆಂಟ್ ಅಷ್ಟೇ. ಅಂಥವರನ್ನು ಕಟ್ಟಿಕೊಂಡು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲು ಹೊರಟಿದ್ದಾರೆ. ನಮ್ಮ ತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ.  ಯಡಿಯೂರಪ್ಪ ಕಥೆ ಗೋವಿಂದ ಗೋವಿಂದಾ ಎಂದು ಕಾಂಗ್ರೆಸ್ ನ ಟ್ರಬಲ್‌ ಶೂಟರ್ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ರಚನೆ ಬಗ್ಗೆ ಡಿ.ಕೆ.ಶಿ ಪ್ರತಿಕ್ರಿಯೆ ಭಾರೀ‌ ಕುತೂಹಲ ಮೂಡಿಸಿದೆ. ದೋಸ್ತಿ‌ಪಕ್ಷದ ನಾಯಕರು ಮತ್ಯಾವ ಬ್ರಹ್ಮಾಸ್ತ್ರ ಬಳಕೆ‌ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಬಿಜೆಪಿ‌ ನಾಯಕರು ತಲೆ ಕೆಡಿಸಿಕೊಳ್ಳುವಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button