ಶ್ರೀಶೈಲ ಜಗದ್ಗುರುಗಳ ಜನ್ಮ ಸುವರ್ಣಮಹೋತ್ಸವ-ಜೂ.11 ರಂದು ಪೂರ್ವಭಾವಿ ಸಮಾಲೋಚನಾ ಸಭೆ
ಜೂ.11 ರಂದು ಪೂರ್ವಭಾವಿ ಸಮಾಲೋಚನಾ ಸಭೆ
ಶ್ರೀಶೈಲ ಜಗದ್ಗುರುಗಳ ಜನ್ಮ ಸುವರ್ಣಮಹೋತ್ಸವ
ಜೂ.11 ರಂದು ಪೂರ್ವಭಾವಿ ಸಮಾಲೋಚನಾ ಸಭೆ
yadgiri, ಶಹಾಪುರಃಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣಮಹೋತ್ಸವ ಅಂಗವಾಗಿ ಜನ ಜಾಗೃತಿ ಪಾದಯಾತ್ರೆ ಮತ್ತು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಹಮ್ಮಿಕೊಂಡಿರುವ ಹಿನ್ನೆಲೆ ಇದೇ ಜೂ.11 ರಂದು ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಬೆಳಗ್ಗೆ 10 ಗಂಟೆಗೆ ಪೂರ್ವಭಾವಿ ಸಭೆ ಹಾಗೂ ಸಮಾಲೋಚನಾ ಸಭೆ ಕರೆಯಲಾಗಿದ್ದು ಸರ್ವ ಭಕ್ತಾಧಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ಕುಂಬಾರಗೇರಿ ಹಿರೇಮಠದ ಶ್ರೀಸೂಗೂರೇಶ್ವರ ಶ್ರೀಗಳು ತಿಳಿಸಿದ್ದಾರೆ.
ಅಂದು ಬೆಳಗ್ಗೆ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ವಿರಶೈವ ಸಮಾಜದ ಗಣ್ಯರು, ಹಿರಿಯರು, ಯುವಕರು ಉದ್ಯಮಿಗಳು ಭಾಗವಹಿಸಲಿದ್ದಾರೆ. ಶ್ರೀಶೈಲ ಜಗದ್ಗುರುಗಳ ಜನ್ಮ ಸುವರ್ಣಮಹೋತ್ಸವ ಇದಾಗಿರುವದರಿಂದು ವಿಶೇಷವಾಗಿ ಜನ ಜಾಗೃತಿ ಪಾದಯಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಸರ್ವ ಭಕ್ತರು ಭಾಗವಹಿಸಿ ತನಿಮನಧನದಿಂದ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕಂಕಣ ಬದ್ಧರಾಗಿರಬೇಕೆಂದು ಅವರು ಕೋರಿದ್ದಾರೆ.
ಸಭೆಯಲ್ಲಿ ಸಮಾಲೋಚನೆ ನಡೆಸಲಿದ್ದು, ಸಭೆಯ ನಿಭರ್ಣಯದಂತೆ ಕಾರ್ಯಕ್ರಮ ನಡೆಯಲಿದೆ ಹೀಗಾಗಿ ತಪ್ಪದೆ ಎಲ್ಲರೂ ಆಗಮಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ತಾಲೂಕು ವೀರಶೈವ ಘಟಕ ಸಭೆಯ ನೇತೃತ್ವವಹಿಸಿದೆ ಎಂದು ಅವರು ತಿಳಿಸಿದ್ದಾರೆ.