ಶಹಾಪುರಃ ಕಬ್ಬು ಸಾಗಣೆ ಲಾರಿ ಪಲ್ಟಿ, ಗಾಯಾಳುವಿಗೆ ಕ್ಯಾರೆ ಅನ್ನದೆ ಕಬ್ಬು ಕದ್ದ ಜನ.!
ಶಹಾಪುರಃ ಕಬ್ಬು ಸಾಗಣೆ ಲಾರಿ ಪಲ್ಟಿ, ಕಬ್ಬು ಹೊತ್ತೊಯ್ದ ಜನ
ಯಾದಗಿರಿಃ ರೈತ ಬೆಳೆದ ಕಬ್ಬು ಮಾರಾಟಕ್ಕಾಗಿ ಯಾದಗಿರಿಯ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ತೆರುಳುತ್ತಿರುವ ಸಂದರ್ಭ ಕಬ್ಬು ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಸಮೀಪ ನಡೆದಿದೆ.
ಕಬ್ಬು ತುಂಬಿದ ಲಾರಿ ಸಮೇತ ಕೆಳಗಡೆ ಬಿದ್ದ ಚಾಲಕ ಮತ್ತು ಕ್ಲೀನರ್ ಸ್ಥಿತಿ ನೋಡದೇ ಜನ ರಸ್ತೆಗೆ ಬಿದ್ದ ಕಬ್ಬು ತೆಗೆದುಕೊಂಡು ಕಬ್ಬು ಸವಿಯುವಲ್ಲಿ ಬ್ಯುಸಿಯಾಗಿದ್ದರು. ಅಷ್ಟೆ ಅಲ್ಲದೆ ಬಿದ್ದ ಕಬ್ಬುಗಳನ್ನು ಬೈಕ್ ಮೇಲೆ, ಸೈಕಲ್ ಮತ್ತು ಎತ್ತಿನ ಬಂಡಿಯಲ್ಲಿ ಜನ ಮುಗಿಬಿದ್ದು ಒಂದು ಲಾರಿ ಲೋಡ್ ಕಬ್ಬುಗಳನ್ನು ಝಳಝಳ ಮಾಡಿದ್ದಾರೆ.
ಬೀದರ ಜಿಲ್ಲೆಯ ಹುಮನಾಬಾದ್ ಪಟ್ಟಣದಿಂದ ಯಾದಗಿರಿಯ ಕೋರ್ ಗ್ರೀನ್ ಸಕ್ಕರೆ ಫ್ಯಾಕ್ಟರಿಗೆ ಕಬ್ಬು ಸಾಗಣೆಗೆ ತೆರಳುತ್ತಿದ್ದ ಲಾರಿ ಪಲ್ಟಿಯಾಗಿದೆ. ಓವರ್ ಲೋಡ್ ಕಬ್ಬು ತುಂಬಲಾಗಿತ್ತು ಎಂದು ತಿಳಿದು ಬಂದಿದ್ದು. ಲಾರಿ ಪಲ್ಟಿಯಾಗುತ್ತಿದ್ದಂತೆ ಕ್ಲೀನರ್ ಮತ್ತು ಚಾಲಕನಿಗೆ ಏನಾಗಿದೆ ಎಂದು ನೋಡಬೇಕಾದ ಸಾರ್ವಜನಿಕರು ರಸ್ತೆಗೆ ಬಿದ್ದ ಒಂದು ಲಾರಿ ಕಬ್ಬಿನ ಲೋಡ್ ಜನರ ಪಾಲಾಗಿದೆ.
ರಸ್ತೆ ತುಂಬೆಲ್ಲಾ ಚಲ್ಲಿದ ಕಬ್ಬುಗಳನ್ನು ಜನ ಮುಗಿ ಬಿದ್ದು ಕಬ್ಬಿನ ಹೊರೆ ಕಟ್ಟಿಕೊಂಡು ಬೈಕ್, ಸೈಕಲ್, ಆಟೋ, ಎತ್ತಿನ ಬಂಡಿಯಲ್ಲಿ ಸಾಗಿಸುತ್ತಿರುವುದು ಕಂಡು ಬಂದಿತು.
ಲಾರಿ ಪಲ್ಟಿಯಾದ ತಕ್ಷಣ ಚಾಲಕ ಮತ್ತು ಕ್ಲೀನರ್ ರಕ್ಷಣೆಗೆ ಧಾವಿಸಬೇಕಾದ ಜನ ಕಬ್ಬು ಕದ್ದು ಒಯ್ಯುತ್ತಿರುವುದು ಮಾತ್ರ ದುರಂತ. ಕಷ್ಟಪಟ್ಟು ದುಡಿದ ರೈತನ ಕಬ್ಬು ಫ್ಯಾಕ್ಟರಿ ತಲುಪುವ ಮುನ್ನಾ ಜನರ ಪಾಲಾಗಿದೆ.
ಕಬ್ಬು ತುಂಬಿದ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತ
ಕಬ್ಬು ತುಂಬಿದ ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ ಎಂದು ಸುದ್ದಿ ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಪರಿಶೀಲನೆ ನಡೆಸಸುತ್ತಿದ್ದಾರೆ. ಆ ನಂತರ ಸಮರ್ಪಕ ಮಾಹಿತಿ ದೊರೆಯಲಿದೆ. ಕಬ್ಬುಗಳನ್ನು ಜನ ಹೊತ್ತೊಯ್ದಿರುವುದು ತಿಳಿದು ಬಂದಿಲ್ಲ. ನಮ್ಮ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಬೈಕ್ ಸವಾರ ತೀವ್ರ ಗಾಯಗೊಂಡಿರುವದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಪರಾಮರ್ಶಿಸಿ ಪ್ರಕರಣ ದಾಖಲಿಸಲಾಗುವುದು.
–ನಾಗರಾಜ ಜೆ. ಸಿಪಿಐ ನಗರ ಠಾಣೆ ಶಹಾಪುರ.