ನಿಮಗೂ ಹಾರ್ಟ್ ಇದೆ ಅಂತ ಗ್ಯಾರಂಟಿಯಾಯ್ತು.. ಸಿದ್ದು ಕಾಲೆಳೆದ ಈಶ್ವರಪ್ಪ
ಬೆಂಗಳೂರ:ಅನಾರೋಗ್ಯದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದಾರಾಮಯ್ಯ ಅವರನ್ನು ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಭೇಟಿ ಗುರುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ರಾಜಕೀಯವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಸಿದ್ದರಾಮಯ್ಯ-ಈಶ್ವರಪ್ಪ ಇಂದು ಆತ್ಮೀಯವಾಗಿ ಮಾತನಾಡಿದರು. ಪರಸ್ಪರರ ಆರೋಗ್ಯ ವಿಚಾರಿಸಿಕೊಂಡರು.
ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಕಂಡು ನಿಮಗೂ ಹಾರ್ಟ್ ಇದೆ ಅಂತ ಗ್ಯಾರಂಟಿ ಆಯಿತು ಎಂದು ಹೇಳಿದ ಸಚಿವ ಈಶ್ವರಪ್ಪ ಮಾಜಿ ಮುಖ್ಯಮಂತ್ರಿಗಳ ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನೀವೇನು ಇಲ್ಲ ಅಂತ ಅಂದ್ಕೊಂಡಿದ್ರಾ ಎಂದು ನಗೆ ಬೀರಿದ್ದಾರೆ.
ಉಪ ಚುನಾವಣೆಯಲ್ಲಿ ಸಮರ ನಡೆಸಿದ ಪರಸ್ಪರರು ಇಂದು ನಗುತ್ತಲೇ ಆರೋಗ್ಯ ವಿಚಾರ ವಿನಿಮಯ ಕಂಡು ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ಮತ್ತು ಈಶ್ವರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿರುವ ಫೋಟೊಗಳು ಎಲ್ಲಡೆ ಹರಿದಾಡುತ್ತಿವೆ.