ಸಿದ್ರಾಮಯ್ಯರನ್ನೆ ಕಳ್ಳ ಎಂದರೇ..ಮುನಿಯಪ್ಪ..?
ಕಾಂಗ್ರೆಸ್ ಚುನಾವಣೆ ಸಮಿತಿ ಸಭೆಯಲ್ಲಿ ಗದ್ದಲ ಗೊಂದಲ
ಸಿದ್ರಾಮಯ್ಯರನ್ನೆ ಕಳ್ಳ ಎಂದರೇಕೇ.? ಮುನಿಯಪ್ಪ..!
ಬೆಂಗಳೂರಃ ಬೈ ಎಲೆಕ್ಷನ್ ನಿಮಿತ್ತವಾಗಿ ಕಾಂಗ್ರೆಸ್ ಕರೆಯಲಾಗಿದ್ದ ಚುನಾವಣೆ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಗುಂಡುರಾವ್ ಹಾಗೂ ಹರಿಪ್ರಸಾದ ನಡುವೆ ಯಾವುದೋ ವಿಷಯಕ್ಕೆ ವಾಗ್ವಾದ ನಡೆಯುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಹರಿಪ್ರಸಾದರನ್ನು ಮಾಜಿ ಸಿಎಂ ಸಿದ್ರಾಮಯ್ಯ ಇದು ಮಾತನಾಡುವ ಜಾಗವಲ್ಲ ಸುಮ್ನಿರ್ರಿ ಎಂದಿದ್ದಾರೆ ಎನ್ನಲಾಗಿದೆ.
ಆಗ ಏರು ಧ್ವನಿಯಲ್ಲಿ ಮಾತಾನಾಡಿದ ಕೆ.ಎಚ್.ಮುನಿಯಪ್ಪ, ಇಲ್ಲಿ ನಾಲ್ಕು ಗೋಡೆ ಮಧ್ಯೆ ಮಾತಾಡಲಿಲ್ಲ ಎಂದರೆ ಎಲ್ಲಿ ಮಾತನಾಡಬೇಕು ಎಂದು ಸಿದ್ರಾಮಯ್ಯ ನವರಿಗೆ ಪ್ರಶ್ನೆ ಮಾಡುತ್ತಾ, ಮಾತಾಡಲಿ ಬಿಡಿ ನಿಮ್ಮಂತವರಿಂದಲೇ ಎಲ್ಲಾ ಹಾಳಾಗಿದೆ ಎಂದಿದ್ದಾರಂತೆ.
ಆಗ ಸಿದ್ರಾಮಯ್ಯ ಏನ್ಮಾತಾಡತ್ತಿದ್ದೀರಿ ಎನ್ನುತ್ತಿದ್ದಂತೆ, ನೀವೆ ಕಳ್ಳರನ್ನು ಸುತ್ತುವರೆಸಿಕೊಂಡು ತಿರುಗುತ್ತೀರಿ ನೀವೂ.. ಕಳ್ಳರೆ ಎಂದು ಮುನಿಯಪ್ಪನವರು ಸಿದ್ರಾಮಯ್ಯ ರಿಗೆ ಜರಿದಿದ್ದಾರಂತೆ.
ಆಗ ಗರಂ ಆದ ಸಿದ್ರಾಮಯ್ಯ ಎನ್ಮಾತು ಆಡುತಿದ್ದೀರಿ ಎಂದು ಸಭೆಯಿಂದ ಎದ್ದು ನಡೆಯಲು ಅಣಿಯಾಗಿದ್ದಾರೆ.
ತಕ್ಷಣ ಮುನಿಯಪ್ಪನವರು ಏ..ಕೂಡಿ ಎಂದು ಹೇಳುತ್ತಿದ್ದಂತೆ, ಕಾಂಗ್ರೆಸ್ ಪಕ್ಷದ ನಾಯಕ ವೇಣುಗೋಪಾಲ ಸಿದ್ರಾಮಯ್ಯ ಯು ಸಿಟ್ ಡೌನ್ ಎಂದು ಸಮಾಧಾನ ಪಡಿಸಿದ ಘಟನೆ ಕಾಂಗ್ರೆಸ್ ಸಭೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಎಲ್ಲರನ್ನು ಸಮಾಧಾನಿಸುವಲ್ಲಿ ಕೆ.,ಸಿ.ವೇಣುಗೋಪಾಲ ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಚುನಾವಣೆ ಸಭೆ ಗೊಂದಲದ ಗದ್ದಲದ ಗೂಡಾಗಿ ಪರಿಣಮಿಸಿದೆ. ಸಭೆ ಮೊಟಕುಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.