ಪ್ರಮುಖ ಸುದ್ದಿ
ರಾಜ್ಯದ 10 ಜಿಲ್ಲೆಗಳು ಸೇಫ್, 4631 ಜನರ ಪರೀಕ್ಷೆ ಒಂದೂ ಪಾಸಿಟಿವ್ ಇಲ್ಲ.!
ರಾಜ್ಯದ 10 ಜಿಲ್ಲೆಗಳು ಸೇಫ್, 4631 ಜನರ ಪರೀಕ್ಷೆ ಒಂದೂ ಪಾಸಿಟಿವ್ ಇಲ್ಲ.!
ಬೆಂಗಳೂರಃ ರಾಜ್ಯದ 10 ಜಿಲ್ಲೆಗಳಲ್ಲಿ ಇದುವರೆಗೂ ಒಂದು ಕೊರೊನಾ ಪಾಸಿಟಿವ್ ಪತ್ತೆಯಾಗಿರದ ಕಾರಣ 10 ಜಿಲ್ಲೆಗಳು ಸೇಫ್ ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ.
ಈ 10 ಜಿಲ್ಲೆಗಳ 4631 ಜನರನ್ನು ಪರೀಕ್ಷೆ ಮಾಡಲಾಗಿ, ಜನರ ಮಾದರಿ ರಕ್ತ, ಗಂಟಲುದ್ರವ ಸ್ಯಾಂಪಲ್ ಪಡೆದುಕೊಂಡು ಪರೀಕ್ಷಿಸಲಾಗಿ ಒಂದೂ ಪಾಸಿಟಿವ್ ಬಂದಿರುವದಿಲ್ಲ ಕೊರೊನಾ ಮುಕ್ತ ಜಿಲ್ಲೆಗಳಾಗಿಯೇ ಮುಂದುವರೆದಿವೆ ಎಂದು ಸಚಿವ ಸುರೇಶಕುಮಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3146 ಜನರ ಸ್ಯಾಪಲ್ ನೆಗೆಟಿವ್ ಬಂದಿದ್ದು, ಇನ್ನುಳಿದ ಸ್ಯಾಂಪಲ್ ಗಳ ವರದಿ ಬರಬೇಕಿದೆ. ಹೀಗಾಗಲೇ ಬಂದ ವರದಿ ಎಲ್ಲವೂ ನೆಗೆಟಿವ್ ಬಂದಿವೆ. ಹೀಗಾಗಿ 10 ಜಿಲ್ಲೆಗಳು ಸೇಫ್ ಆಗಿ ಕೊರೊನಾ ಮುಕ್ತವಾಗಿ ಮುಂದುವರೆದಿವೆ ಎಂದು ಸ್ಪಷ್ಟ ಪಡಿಸಿದ್ದಾರೆ.