ಶರಣಬಸವೇಶ್ವರ ದೇವಸ್ಥಾನದ ಪೀಠತ್ಯಾಗಕ್ಕೆ ಪೀಠಾಧಿಪತಿ ಮನವಿ ಸಲ್ಲಿಸಿದ್ಯಾಕೆ.?
ಶರಣಬಸವೇಶ್ವರ ದೇವಸ್ಥಾನದ ಪೀಠತ್ಯಾಗಕ್ಕೆ ಪೀಠಾಧಿಪತಿ ಮನವಿ ಸಲ್ಲಿಸಿದ್ಯಾಕೆ.?
ಶರಣಪ್ಪ ಶರಣರು ಪೀಠ ತ್ಯಾಗಕ್ಕೆ ನಿರ್ಧರಿಸಿದ್ಯಾಕೆ.?
ಯಾದಗಿರಿಃ 1998 ರಿಂದ ಇಲ್ಲಿವರೆಗೂ ಸುಮಾರು 23 ವರ್ಷಗಳಿಂದ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಯಾಗಿ, ಕಮಿಟಿ ಕಾರ್ಯದರ್ಶಿಯಾಗಿ ಮತ್ತು ದೇವಸ್ಥಾನದ ಅರ್ಚಕನಾಗಿ ಕಾರ್ಯ ನಿರ್ವಹಿಸಿದ್ದು, ಸಾಕಷ್ಟು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಶ್ರೀದೇವಸ್ಥಾನದ ಬೆಳವಣಿಗೆ ಜೊತೆಗೆ ಭಕ್ತಾಧಿಗಳ ಹಿತ ಬಯಸಿ ಶ್ರಮಿಸಿದ್ದೇನೆ ಇದೀಗ ವಯಸ್ಸಾದ ಹಿನ್ನೆಲೆ ಪೀಠ ತ್ಯಾಗ ಮಾಡಲು ನಿರ್ಧರಿಸಿದ್ದು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಜವಬ್ದಾರಿಯಿಂದ ಇಳಿಸುವಂತೆ ಕೋರಿದ್ದು ಮುಂದಿನ ಪೀಠಾಧಿಪತಿಯನ್ನಾಗಿ ಭಕ್ತಾಧಿಗಳ ಕೋರಿಕೆ ಮೇರೆಗೆ ಸೂಕ್ತರನ್ನು ನೇಮಿಸಿ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ನಿವೃತ್ತಿಗೆ ವಯೋಸಹಜ ಖಾಯಿಲೆ ಕಾರಣ ನೀಡಿರುವ ಅವರು ಶ್ರೀಮಠದ ಜವಬ್ದಾರಿ ಯಿಂದ ಹಿಂದೆ ಸರಿಯುವ ಮಾತನಾಡುತ್ತಿದ್ದಾರೆ.
ಸಾವಿರಾರು ಭಕ್ತರನ್ನು ಹೊಂದಿರುವ ಶರಣಪ್ಪ ಶರಣರು, ಏಕಾಏಕಿ ಶ್ರೀ ಮಠದ ಪೀಠ ತ್ಯಾಗಕ್ಕೆ ಸಿದ್ಧರಾಗಿರುವ ಕಾರಣವೇ ಬೇರೆಯದ್ದೆ ಇದೆ ಎನ್ನಲಾಗಿದೆ.
ಇವರಿಗೆ ನಾಲ್ಕು ಮಕ್ಕಳಿದ್ದು, ಶ್ರೀಗಳು ಕಳೆದ 23 ವರ್ಷದಿಂದ ದೇವಸ್ಥಾನದ ಜಾತ್ರೆ, ಸಾಮೂಹಿಕ ವಿವಾಹ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಮನದಲ್ಲಿ ದೈವ ಭಕ್ತಿಯನ್ನು ಮೂಡಿಸಿದ್ದರು.
ಉತ್ತಮ ಕಾರ್ಯ, ಉತ್ತಮ ಕಾಯಕ ತತ್ವವನ್ನು ಜನರಲ್ಲಿ ಬಿತ್ತಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಸಾಕಷ್ಟಿದೆ ಎಂದರೆ ತಪ್ಪಾಗಲಾರದು.
ಅಲ್ಲದೆ ಸುಮಾರು 1 ಕೋಟಿ ವೆಚ್ಚದಲ್ಲಿ ಶ್ರೀಶರಣಬಸವೇಶ್ವರ ರಥ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದರು. ಆ ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರು ಇಂದು ಏಕಾಏಕಿ ಪೀಠ ತ್ಯಾಗ ಮಾತಾಡುತ್ತಿರುವ, ಒಂದು ಹೆಜ್ಜೆ ಮುಂದೆ ಹೋಗಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿರುವ ಶ್ರೀಗಳು, ಯಾವುದೋ ವಿಷಯಕ್ಕಾಗಿ ನೊಂದಿದ್ದಾರೆ ಎನ್ನಲಾಗಿದೆ. ಅದು ಭಕ್ತರಿಂದ ಅಪ್ಯಾಯಮಾನವಾಗಿದೆಯೋ ಅಥವಾ ಯಾರಿಂದ ತಪ್ಪಾಗಿದೆಯೋ ತಿಳಿಯುತ್ತಿಲ್ಲ. ಅದು ಬಹಳ ಸೂಕ್ಷ್ಮತೆ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಶ್ರೀಶರಣಪ್ಪ ಶರಣರು ಯಾವದನ್ನು ಯಾರನ್ನು ದೂರದೆ ಪೀಠ ತ್ಯಾಗ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ವಯೋ ಸಹಜ ಖಾಯಿಲೆ ಬಗ್ಗೆ ಕಾರಣ ನೀಡುವ ಮೂಲಕ ಅವರು ಪೀಠಾಧಿಪತಿ ಸ್ಥಾನ ಸೇರಿದಂತೆ ಅರ್ಚಕ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ತಮ್ಮ ಅಪಾರ ಭಕ್ತ ವೃಂದದಲ್ಲಿ ತಳಮಳ ಉಂಟು ಮಾಡಿದ್ದಾರೆ.
ಪೀಠಾಧಿಪತಿಯಾಗಿದ್ದ ಶರಣಪ್ಪ ಶರಣರು ದೇವಸ್ಥಾನ ಜಾತ್ರೆಗೆ ಹೊಸ ರಥೋತ್ಸವ ಸಿದ್ಧತೆ ಗುರಿ ಹೊಂದಿದ್ದರು ಎನ್ನಲಾಗಿದ್ದು, ಪೀಠಾಧಿಪತಿ ಅವರನ್ನೆ ಬಿಟ್ಟು ಕೆಲ ಭಕ್ತಾಧಿಗಳು ಶ್ರೀಗಳಿಗೆ ವಯಸ್ಸಾಗಿದೆ ಎಂದು ಅವರ ಮಗನೊಬ್ಬರನ್ನು ಮುಂದೆ ಮಾಡಿ ದೇವಸ್ಥಾನ ಅಭಿವೃದ್ಶಿಗೆ ಯುವ ಪಡೆ ಸಚಾರ ಮಾಡುತ್ತಿದೆ.ಎನ್ನಲಾಗಿದೆ.