ಹೆಣ್ಮಕ್ಕಳಿದ್ದೀವಿ ಸದನ ಮುಂದೂಡಿ..!
ಸದನ ಮುಂದೂಡುವಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಗದ್ದಲ
ವಿಧಾನಸಭೆಃ ಸದನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ರಾತ್ರಿ 11 ಆಗ್ತಿದೆ ಊಟವಿಲ್ಲ ಸದನ ಮುಂದೂಡುವಂತೆ ಸಭಾಧ್ಯಕ್ಷರಿಗೆ ಒತ್ತಾಯಿಸುತ್ತಿದ್ದು, ಗದ್ದಲ ಮಾಡುತ್ತಿರುವದು ಒಂದಡೆಯಾದರೆ,
ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಪಕ್ಷದ ಎಲ್ಲಾ ಶಾಸಕರು ಮೌನವಾಗಿ ಕುಳಿತಿರುವದು ಅಲ್ಲದೆ ಯಡಿಯೂರಪ್ಪ ಮಾತ್ರ ಒಂದು ಮನವಿಮಾಡಿದ್ದಾರೆ,
ಬೆಳಗ್ಗೆ ಸಭಾಧ್ಯಕ್ಷರು ವಿಶ್ವಾಸಮತ ಸೋಮವಾರ ಶತಾಯುಗತ ಮುಗಿಸುತ್ತೇನೆ ಎಂದು ಹೇಳಿದ್ದೀರಿ, ಇವತ್ತೆಷ್ಟೊತ್ತೆ ಆಗಲಿ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಮುಗಿಸಬೇಕೆಂದು ಮನವಿ ಮಾಡಿದ್ದಾರೆ.
ಈ ನಡುವೆ ಕಾಂಗ್ರೆಸ್ ಮಹಿಳಾ ಶಾಸಕಿಯರು ರಾತ್ರಿ ತುಂಬಾ ತಡವಾಯಿತು ಹೆಣ್ಮಕ್ಕಳದ್ದೇವೆ ಇದುವರೆಗೂ ಊಟದ ವ್ಯವಸ್ಥೆಯು ಇಲ್ಲ. ಸಭಾಧ್ಯಕ್ಷರು ಸದನ ಮುಂದುಡಬೇಕೆಂದು ಕೂಗ್ತಾ ಇದ್ರೂ ಡೆಪ್ಯೂಟಿ ಸ್ಪೀಕರ್ ಎಂ ಕೃಷ್ಣಾ ರಡ್ಡಿ ಕ್ಯಾರೆ ಅನ್ನುತ್ತಿಲ್ಲ.
ಇದೀಗ ಮತ್ತೆ ಸಭಾಧ್ಯಕ್ಷ ರಮೇಶಕುಮಾರ ಅವರು ಆಗಮಿಸಿದ್ದಾರೆ ಮುಂದೆ ಕಾಯ್ದು ನೋಡಬೇಕು ಏನಾಗುತ್ತದೆ. ಸಭಾಧ್ಯಕ್ಷರು ಏನು ಸಂದೇಶ ನೀಡಲಿದ್ದಾರೆ ಎಂಬ ಕಾತುರದಲ್ಲಿದೆ ಇಡಿ ಸದನ.