ಪ್ರಮುಖ ಸುದ್ದಿ

ಸಿ.ಟಿ.ರವಿ ಬೆಳೆದು ಬಂದ ದಾರಿ ಯೂತ್‍ಗೆ ಮಾದರಿ-ಕಾಮಾ

ಹಣ್ಣು ಹಂಪಲು ವಿತರಿಸಿ ಸಿ.ಟಿ.ರವಿ ಜನ್ಮ ದಿನಾಚರಣೆ

yadgiri, ಶಹಾಪುರಃ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಅವರ ಜನ್ಮ ದಿನ ಅಂಗವಾಗಿ ರವಿವಾರ ಇಲ್ಲಿನ ಬಿಜೆಪಿ ಯುವ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೊರೊನಾ ವಾರಿಯರ್ಸ್‍ಗಳಿಗೆ ಪುಷ್ಪಾರ್ಚನೆ ಮಾಡಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು.

Jaahiratu

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಬಿಜೆಪಿ ಫೈರ್ ಬ್ರ್ಯಾಂಡ್ ಯೂತ್ ಐಕಾನ್ ಸಿ.ಟಿ.ರವಿ ಅವರು ಸಂಘದ ಕಾರ್ಯಕರ್ತರಾಗಿ ದೇಶ ಸೇವೆ ಮೊದಲು ಮಾಡಿ ಜನಸೇವೆಗೆ ಧುಮುಕಿದವರು. ಅವರ ರಕ್ತದಲ್ಲಿಯೇ ಸೇವಾ ಮನೋಭಾವ ತುಂಬಿದ್ದು, ಹಲವಾರು ಸಂಘ ಸಂಸ್ಥೆಗಳ ಪ್ರಮುಖ ಜವಬ್ದಾರಿ ಹೊತ್ತು ಜನಸೇವಕನಾಗಿ ಬೆಳೆದು ಬಂದಿದ್ದಾರೆ.

ಬೂತ್ ಮಟ್ಟದಿಂದ ಹಂತ ಹಂತವಾಗಿ ರಾಷ್ಟ್ರೀಯ ನಾಯಕರಾಗಿ ಜವಬ್ದಾರಿಯನ್ನು ನಿಭಾಯಿಸುತ್ತಿರುವ ಅವರು ಎಲ್ಲೂ ಕಪ್ಪು ಚುಕ್ಕೆಯನ್ನು ಹೊಂದದೆ, ಭ್ರಷ್ಟಾಚಾರದ ಸಣ್ಣ ವಾಸನೆಯೂ ಇಲ್ಲದೆ ಎಲ್ಲಾ ಜಾತಿಬಂಧುಗಳೊಂದಿಗೆ ಮೆಚ್ಚುಗೆ ಹೊಂದುವ ಮೂಲಕ ಪ್ರಖರ ಹಿಂದುತ್ವವಾದಿಯಾಗಿ ಬಿಜೆಪಿಯ ಯೂತ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಅವರ ಜನ್ಮ ದಿನವನ್ನು ನಾವೆಲ್ಲ ಅತ್ಯಂತ ಹೆಮ್ಮೆಯಿಂದ ಆಚರಿಸುತ್ತೇವೆ. ನಮಗೆಲ್ಲ ಮಾದರಿ ರಾಜಕಾರಣಿಯಾಗಿದ್ದಾರೆ ಎಂದರು.
ಈ ಶುಭಸಂದರ್ಭದಲ್ಲಿ ದೇವರು ಅವರಿಗೆ ಆಯುಷ್ಯ ಆರೋಗ್ಯ ಕೊಡಲಿ. ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ಒದಗಿಸಲಿ ಎಂದು ಹಾರೈಸಿದರು.

ಈ ವೇಳೆ ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿದ ಸರ್ಕಾರಿ ಆಸ್ಪತ್ರೆಯ ವೈದ್ಯರೂ ಮತ್ತು ಸಿಬ್ಬಂದಿಗೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿ ಧನ್ಯತಾ ಅರ್ಪಿಸಿದರು. ನಂತರ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ರಮೇಶ ಗುತ್ತೇದಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಕೂರ, ನಗರ ಅಧ್ಯಕ್ಷ ದೇವು ಕೋನೇರ, ಶಾಂತವೀರ ಪಾಟೀಲ್, ವೀರೇಶ ಅಡಕಿ, ಸಿದ್ದಯ್ಯಸ್ವಾಮಿ ಹಿರೇಮಠ, ರಾಜು ಪಂಚಭಾವಿ, ಭೀಮರಾಯ ಕೋಲ್ಕಾರ್, ಸೋಪಣ್ಣ ಸಗರ, ಅಪ್ಸರ್ ಜಮಖಂಡಿ, ವಿಖಾರ ಆಲಂ, ಶಿವರಾಜ ಜಂಗಳಿ, ಸಿದ್ದನಗೌಡ ತಂಗಡಗಿ, ಸಾಯಿಬಣ್ಣ ನಾಶಿ, ಅನಂತಯ್ಯ, ವೆಂಕಟೇಶ ಗೌನಳ್ಳಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button