ಪ್ರಮುಖ ಸುದ್ದಿ
ಜಂಗಮರಿಗೆ ಮೀಸಲಾತಿ ಸರಿಯಲ್ಲ- ಸಿದ್ರಾಮಯ್ಯ
ದಾವಣಗೆರೆಃ ಜಂಗಮ ಸಮುದಾಯದವರನ್ನು ನಾವೆಲ್ಲ ಪೂಜ್ಯರೆಂದು ಕರೆಯುತ್ತೇವೆ. ಹೀಗಾಗಿ ಅವರಿಗೆ ಮೀಸಲಾತಿ ನೀಡುವದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ರಾಮಯ್ಯ ತಿಳಿಸಿದರು.
ನಗರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಜಂಗಮರಿಗೆ ಎಸ್.ಸಿ.ಎಸ್.ಟಿ.ಮೀಸಲಾತಿ ನೀಡುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರಾದವರು ಅವಕಾಶವಾದಿಗಳು ಅವರಿಗೆ ರಾಜಕೀಯ ಸಿದ್ಧಾಂತ ಗೊತ್ತಿಲ್ಲ. ಸಚಿವ ಭೈರತಿ ಬಸವರಾಜ ಸೇರಿದಂತೆ ಅವರೆಲ್ಲರಿಗೂ ಟಿಕೆಟ್ ನೀಡಿ ನಾನೇ ಶಾಸಕರನ್ನಾಗಿ ಮಾಡಿದ್ದೆ ನನಗೆ ಅವರು ಕೈಕೊಟ್ಟು ಹೋದರು. ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯಧ್ಯಕ್ಷ ಸ್ಥಾನಕ್ಕೆ ಯಾವುದೇ ತೊಡಕು ಇಲ್ಲ. ನಾನು ಯಾರನ್ನು ವಿರೋಧಿಸಿಲ್ಲ. ಇನ್ನು ಎರಡು ದಿನದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಧ್ಯಕ್ಷರ ನೇಮಕವಾಗಲಿದೆ ಎಂದರು.