ಪ್ರಮುಖ ಸುದ್ದಿ
ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ, ಗೌರವಿಸ್ತೀನಿ – ಸಿದ್ರಾಮಯ್ಯ
ಹಿಂದೂ ಧರ್ಮವನ್ನು ಗೌರವಿಸ್ತೀನಿ -ಸಿದ್ದು
ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ, ಹಿಂದೂ ಧರ್ಮದ ಮೇಲೆ ನಿಷ್ಠೆ ಇದೆ – ಸಿದ್ರಾಮಯ್ಯ
ಹಿಂದೂ ಧರ್ಮವನ್ನ ಗೌರವಿಸು, ಬೇರೆ ಧರ್ಮವನ್ನ ಹಿಯಾಳಿಸಬೇಡ – ಸಿದ್ದು
ವಿವಿ ಡೆಸ್ಕ್ಃ ನನ್ನ ಹೆತ್ತವರು ನನಗೆ ಸಿದ್ರಾಮಯ್ಯ ಎಂದು ಹೆಸರಿಟ್ಟಿದ್ದಾರೆ. ಆದರೆ ಅವನ್ಯಾವನೋ ಸಿಟಿ ರವಿ ನನಗೆ ಸಿದ್ರಾಮುಲ್ಲಾಖಾನ್ ಎಂದು ಕರೆಯುತ್ತಿದ್ದಾನೆ. ನಾನು ಹಿಂದೂ ಧರ್ಮದಲ್ಲಿಯೇ ಹುಟ್ಟಿದ್ದೀನಿ. ಹಿಂದೂ ಧರ್ಮದ ಮೇಲೆ ನಿಷ್ಠೆ ಇದೆ ಎಂದು ಸಿದ್ರಾಮಯ್ಯ ತಿಳಿಸಿದರು.
ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸಿ.ಟಿ.ರವಿ ವಿರುದ್ಧ ಹರಿಹಾಯ್ದರು.
ನಾನು ಹಿಂದೂ ಧರ್ಮದವನೇ ನಮ್ಮ ಧರ್ಮವನ್ನು ಗೌರವಿಸ್ತೀನಿ ಆದರೆ ನಿನ್ನ ಹಾಗೇ ಅನ್ಯ ಧರ್ಮದವರನ್ನು ಹಿಯಾಳಿಸಲ್ಲ. ರಾಜಕೀಯವಾಗಿ ಧರ್ಮವನ್ನು ಬಳಕೆ ಮಾಡೋದಲ್ಲ ಎಂಬ ದಾಟಿಯಲ್ಲಿ ಮಾತನಾಡಿದರು.