ಹಿಜಾಬ್ ವಿವಾದಃ ಮಂಗಳವಾರ ತೀರ್ಪು ಹಿನ್ನೆಲೆ ಜಿಲ್ಲಾದಾದ್ಯಂತ ಕಟ್ಟೆಚ್ಚರ
ಮಾ.15 ಜಿಲ್ಲಾದ್ಯಂತ ಕಟ್ಟೆಚ್ಚರ - SP ವೇದಮೂರ್ತಿ

ಹಿಜಾಬ್ ವಿವಾದಃ ಮಂಗಳವಾರ ತೀರ್ಪು ಹಿನ್ನೆಲೆ ಜಿಲ್ಲಾದಾದ್ಯಂತ ಕಟ್ಟೆಚ್ಚರ
ಯಾದಗಿರಿಃ ಹಿಜಾಬ್ – ಕೇಸರಿ ಶಾಲು ಧರಿಸುವ ವಿವಾದದ ಕುರಿತು ಮಂಗಳವಾರ ಮಾ.15 ರಂದು ಹೈಕೋರ್ಟ್ ದಿಂದ ಅಂತಿಮ ತೀರ್ಪು ಬರುವ ಪ್ರಯುಕ್ತ ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ಎಸ್ಪಿ ಡಾ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 300 ಶಾಲಾ ಕಾಲೇಜುಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 3 ಡಿಎಸ್ಪಿ, 15 ಜನ ಪಿಐ/ಸಿಪಿಐ, 30 ಪಿಎಸ್ಐ ಸೇರಿದಂತೆ 300 ಪೊಲೀಸ್ ಸಿಬ್ಬಂದಿ ಮತ್ತು 4 ಡಿಆರ್ ತುಕಡಿಗಳನ್ನು ಸೂಕ್ತ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ತೀರ್ಪು ಪರವಾಗಿ ಅಥವಾ ವಿರೋಧವಾಗಿಯಾದರೂ ಬರಲಿ ಯಾರೊಬ್ಬರು ವಿಜಯೋತ್ಸವ/ಪ್ರತಿಭಟನೆ ಮಾಡುವಂತಿಲ್ಲ. ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಮತ್ತು ಸಾಮಾಜಿಕ ಜಾಲತಾಣ ವದಂತಿಗಳನ್ನು ಹಬ್ಬಿಸಿದಲ್ಲಿ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.
ಎಲ್ಲರೂ ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಅಂತಿಮವಾಗಿದ್ದು, ಎಲ್ಲರು ಕಾನೂನಿಗೆ ಗೌರವ ನೀಡಬೇಕೆಂದು ಅವರು ತಿಳಿಸಿದ್ದಾರೆ.