ಸಾಧನೆಗೆ ನಿರಂತರ ಪ್ರಯತ್ನ ಅಗತ್ಯ- ಡಾ.ದರ್ಶನಾಪುರ
ಮೌಲ್ಯ ಶಿಕ್ಷಣ ಪ್ರೇರಣಾ ಕಮ್ಮಟ-2019 ಕಾರ್ಯಕ್ರಮ
ಯಾದಗಿರಿ, ಶಹಾಪುರಃ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ತಲುಪಲು ನಿರಂತರ ಪ್ರಯತ್ನ ಅಗತ್ಯವಿದೆ. ಅಭೂತಪೂರ್ವ ಸಾಧನೆ ಮಾಡಲು ಪ್ರೇರಣೆಯೇ ಮೂಲ ಕಾರಣ. ಅಂತಹ ಪ್ರೇರಣೆಯನ್ನು ಈ ಕಾರ್ಯಕ್ರಮ ನೀಡಲಿ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಸುದತ್ ದರ್ಶನಾಪುರ ಹೇಳಿದರು.
ನಗರದ ಸಾಯಿ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ್, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಯಾದಗಿರಿ, ಶಹಾಪುರ ಘಟಕ ಮತ್ತು ದಿ.ಬಾಪೂಗೌಡ ದರ್ಶನಾಪುರ ಎಜ್ಯುಕೇಶನ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಸಂಪನ್ಮೂಲ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ವಿಷಯಗಳ ಬೋಧನಾ ಶಿಬಿರ ಹಾಗೂ ಮೌಲ್ಯ ಶಿಕ್ಷಣ ಪ್ರೇರಣಾ ಕಮ್ಮಟ-2019ನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಠಿಣವೆನಿಸುವ ವಿಷಯಗಳನ್ನು ಸಂಪನ್ಮೂಲ ಶಿಕ್ಷಕರು ಸರಳ ವಿಧಾನಗಳನ್ನು ಬಳಸಿ ಬೋಧನೆ ಮಾಡಿದಾಗ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಪೂರಕವಾಗುತ್ತದೆ ಎಂದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾಪನ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ತೊರೆದು ಉತ್ಮ ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ನಿಶ್ಚಿತ.
ವಿದ್ಯಾರ್ಥಿಗಳು ಯೋಗ, ಧ್ಯಾನಗಳನ್ನು ರೂಢಿಸಿಕೊಂಡು ಏಕಾಗ್ರತೆಯಿಂದ ನಿರಂತರವಾಗಿ ಅಭ್ಯಾಸಗೈದರೆ ಅತ್ಯುತ್ತ, ಫಲಿತಾಂಶ ಗಳಿಸಬಹುದು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ .ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ‘ಆಸರೆ’ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಖಾಜಾ ಖಲೀಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ವೀರಣ್ಣ ಕುಂಬಾರ, ನೋಡಲ್ ಅಧಿಕಾರಿ ಮಲ್ಲಪ್ಪ ಯರಗೋಳ, ತಾ.ಪಂ.ಕಾರ್ಯನಿರ್ವಾಕ ಅಧಿಕಾರಿ ಪಂಪಾಪತಿ ಹಿರೇಮಠ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಭಿಮನಗೌಡ ತಳೇವಾಡ, ಕೆಕೆಪಿಯ ಕಲಬುರ್ಗಿ ಜಿಲ್ಲಾಧ್ಯಕ್ಷ ಡಿ.ಎನ್.ಪಾಟೀಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಖಂಡ ವಿಶ್ವನಾಥರೆಡ್ಡಿ ದರ್ಶನಪೂರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಯಪ್ಪಗೌಡ ಹುಡೇದ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕಾವಲಿ, ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಪಾಟೀಲ್, ಪ್ರಾಚಾರ್ಯ ಸಿ.ಎಸ್.ದೇಸಾಯಿ, ಸಹ ಶಿಕ್ಷಕರಾದ ಶಿವಾನಂದ ಜಮಾದಾರ, ಭವನಗೌಡ ಬೆಳ್ಳಿಕಟ್ಟಿ, ನಾಗಪ್ಪ ಪ್ರಭು, ರವಿ ಚಿನ್ನುಗುಡಿ, ವೀರಣ್ಣ ಕೊಳ್ಳಿ, ಶಿವಾನಂದ ಜಾಯಿ, ಪ್ರಕಾಶ ದೇಶಮುಖ, ಸಂತೋಷಕುಮಾರ ಖಾನಾಪೂರೆ ಇತರರು ಉಪಸ್ಥಿತರಿದ್ದರು.
ಶಿಕ್ಷಕ ರಾಜಾಸಾಹೇಬ ಬಳಿಗಾರ ನಿರೂಪಿಸಿದರು. ಪ್ರಶಾಂತ ಯಾಳಗಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ವೀರಭದ್ರ ಬಡಿಗೇರ ವಂದಿಸಿದರು. ಸುಮಾರು 50 ಪ್ರೌಢ ಶಾಲೆಗಳ 245 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಒಂದು ವಾರ ತರಬೇತಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.