ಪ್ರಮುಖ ಸುದ್ದಿ
ವಿಶ್ವ ಖ್ಯಾತಿಗಳಿಸಿದ ‘ಸ್ಟ್ಯಾಚು ಆಫ್ ಯುನಿಟಿ’ : ಮೋದಿ ದಿಲ್ ಖುಷ್
‘ಟೈಮ್’ ಮ್ಯಾಗಜಿನ್ ಬಿಡುಗಡೆಗೊಳಿಸಿದ 2019ರ 100 ಉತ್ತಮ ಸ್ಥಳಗಳಲ್ಲಿ ಗುಜರಾತಿನ ‘ದಿ ಸ್ಟ್ಯೂಚು ಆಫ್ ಯುನಿಟಿ’ ಸ್ಥಾನ ಪಡೆದಿದೆ. ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಗಳಿಸಿರುವ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ಇದಾಗಿದೆ. ನರ್ಮದಾ ನದಿ ಬಳಿ ನಿರ್ಮಾಣ ಆಗಿರುವ ಪ್ರತಿಮೆಯನ್ನು ಅಕ್ಟೋಬರ್ 31, 2018ರಂದು ಪಟೇಲ್ ಅವರ 143ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು. ಕಡಿಮೆ ಅವಧಿಯಲ್ಲೇ ‘ಸ್ಟ್ಯಾಚು ಆಫ್ ಯುನಿಟಿ’ ವಿಶ್ಯಖ್ಯಾತಿ ಪಡೆದಿರುವುದಕ್ಕೆ ಪ್ರಧಾನಿ ಮೋದಿ ಖುಷಿ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಒಂದೇ ದಿನ 34ಸಾವಿರ ಜನ ಭೇಟಿ ನೀಡಿದ್ದರು ಎಂದು ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.