ಮಿಥುನ ರಾಶಿಗೆ ಚಂಚಲತೆ ಕನ್ಯಾಗೆ ಕಾರ್ಯವಿಳಂಬ
ಶ್ರೀ ದತ್ತಾತ್ರೇಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ವಿಶಾಖ
ಋತು : ವರ್ಷ
ರಾಹುಕಾಲ 14:08 – 15:43
ಗುಳಿಕ ಕಾಲ 09:24 – 10:59
ಸೂರ್ಯೋದಯ 06:14:24
ಸೂರ್ಯಾಸ್ತ 18:52:16
ತಿಥಿ : ಅಷ್ಟಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಆರೋಗ್ಯಕರ ದಿನವಾಗಿದ್ದು ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಿರಿ. ವ್ಯವಹಾರದಲ್ಲಿ ಶುಭಫಲಗಳನ್ನು ಕಾಣಬಹುದಾಗಿದೆ. ದಂಪತಿಗಳ ಭಿನ್ನಾಭಿಪ್ರಾಯ ಸರಿಹೋಗುವ ಸಾಧ್ಯತೆಗಳನ್ನು ಕಾಣಬಹುದು. ಹೊಸ ಹುಮ್ಮಸ್ಸಿನಿಂದ ಜವಾಬ್ದಾರಿಗಳನ್ನು ಸ್ವೀಕರಿಸುವ ಸಾಧ್ಯತೆ ಕಂಡುಬರುತ್ತದೆ. ವೃತ್ತಿ ಬದುಕಿನಲ್ಲಿ ಅವಿಸ್ಮರಣೀಯ ಘಟನೆಗಳು ನಡೆಯಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ಕೆಲಸದ ಗತಿ ವೇಗ ಪಡೆಯಲಿದ್ದು ಆ ವೇಗಕ್ಕೆ ನೀವು ಸ್ಪಂದನೆ ನೀಡಬೇಕಾಗಿದೆ. ಆಲಸ್ಯತನ ವನ್ನು ತೆಗೆದುಹಾಕಿ ಮುನ್ನಡೆಯಿರಿ. ಯೋಜಿತ ಮೂಲಗಳಿಂದ ಆರ್ಥಿಕ ಅಭಿವೃದ್ಧಿ ಕಂಡುಬರಲಿದೆ, ಆದರೆ ದುಂದುವೆಚ್ಚವನ್ನು ಆದಷ್ಟು ನಿಯಂತ್ರಣ ಮಾಡುವುದು ಒಳಿತು. ಕೆಲವು ಹೂಡಿಕೆಗಳು ನಿಮ್ಮ ಯೋಚನೆಯ ರೀತಿಯಲ್ಲಿ ಆಗದಿರುವುದು ಬೇಸರ ತರಿಸುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮನಸ್ಸು ಮರ್ಕಟದಂತೆ ನಿಮ್ಮಲ್ಲಿ ಚಂಚಲತೆ ಆವರಿಸಬಹುದು ಆದಷ್ಟು ಧ್ಯಾನದ ಮೊರೆ ಹೋಗಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ. ಪತ್ನಿಯ ಬೇಡಿಕೆಗಳಿಂದ ವೈಯಕ್ತಿಕವಾಗಿ ಬೇಸರವಾಗಬಹುದು. ಆರ್ಥಿಕ ಹಿನ್ನಡೆ ನಿಮಗೆ ಕೆಲವು ಸತ್ವಪರೀಕ್ಷೆ ತಂದೊಡ್ಡಲಿದೆ. ಬಂಧುವರ್ಗದವರು ನಿಮ್ಮ ಮನೆಗೆ ಭೇಟಿ ನೀಡುವ ಸಾಧ್ಯತೆಯನ್ನು ಕಾಣಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಮುನ್ನಡೆ ಸಾಧಿಸುವ ಯಶಸ್ವಿ ಯೋಜನೆಗಳನ್ನು ಕೈಗೊಳ್ಳಲಿದ್ದೀರಿ. ವ್ಯವಹಾರದಲ್ಲಿ ಬಾಲಿಶವಾಗಿ ವರ್ತಿಸುವುದು ಸರಿ ಕಂಡುಬರುವುದಿಲ್ಲ. ಕುಟುಂಬ ಸಮೇತ ಪ್ರವಾಸದ ಚಿಂತನೆ ಮಾಡುವ ಸಾಧ್ಯತೆ ಕಾಣಬಹುದು. ಹಿರಿಯರನ್ನು ಆದಷ್ಟು ಗೌರವದಿಂದ ಕಾಣುವುದು ಒಳ್ಳೆಯದು. ದೈವಿಕ ಕಾರ್ಯಕ್ರಮಗಳಿಗೆ ಯೋಜನೆಯನ್ನು ರೂಪಿಸುತ್ತೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ದೈವಿಕ ಕಾರ್ಯಗಳಿಗೆ ಮುಹೂರ್ತ ನಿಗದಿ ಮಾಡಲಿದ್ದೀರಿ. ಆಧ್ಯಾತ್ಮದ ತಳಹದಿಯಲ್ಲಿ ಚಿಂತನೆ ನಡೆಸುವ ಸಾಧ್ಯತೆ ಕಾಣಬಹುದು. ಹೊಸತನದ ಯೋಜನೆಯನ್ನು ಪ್ರಾರಂಭ ಮಾಡುವ ಉತ್ಸಾಹ ನಿಮ್ಮಲ್ಲಿದೆ. ಹಣಕಾಸಿನ ವ್ಯವಹಾರಗಳು ನಿಗದಿತ ಸಮಯದಲ್ಲಿ ಉತ್ತಮ ರೀತಿಯಿಂದ ನಡೆಯಲಿದೆ. ಉದ್ಯೋಗದ ವಿಷಯದಲ್ಲಿ ನೀವು ಹೆಚ್ಚಿನ ಸ್ಥಾನಮಾನವನ್ನು ಅಪೇಕ್ಷಿಸುತ್ತಿದ್ದೀರಿ. ಮಕ್ಕಳ ನಿರುದ್ಯೋಗದ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಬಲು ಯೋಜಿತ ಕಾರ್ಯವು ನಿರುತ್ಸಾಹದಿಂದ ಕೂಡಿರುವ ಸಾಧ್ಯತೆ ಇರಲಿದೆ. ಆರ್ಥಿಕ ಸಮಸ್ಯೆಗಳಿಗೆ ನೀವು ಪರಿಹಾರ ಹುಡುಕುವುದು ಸೂಕ್ತ. ಬರಬೇಕಾಗಿರುವ ಹಣಕಾಸುಗಳು ವಿಳಂಬವಾಗುವ ಸಾಧ್ಯತೆ ಇದೆ. ಸಂಕೋಚವನ್ನು ತೆಗೆದುಹಾಕಿ ಕುಟುಂಬದ ಬೆಂಬಲವನ್ನು ಪಡೆಯುವುದು ಒಳಿತು. ಆತ್ಮೀಯರೊಡನೆ ವಿನಾಕಾರಣ ಹಗೆ ಸಾಧಿಸುವುದು ಒಳಿತಲ್ಲ. ನಿಮ್ಮ ತೀಕ್ಷ್ಣ ಮಾತುಗಳನ್ನು ಆದಷ್ಟು ಹತೋಟಿಯಲ್ಲಿಡಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಮನೋಬಯಕೆಗಳು ಸಾಕಾರವಾಗಲು ನೀವು ಧೈರ್ಯ ಮತ್ತು ಶಕ್ತಿಯನ್ನು ಒಗ್ಗೂಡಿಸಿಕೊಂಡು ರಚನಾತ್ಮಕ ದೃಷ್ಟಿಕೋನದಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ಹಿರಿಯರ ಅನುಗ್ರಹ ನಿಮ್ಮ ಮೇಲಿದ್ದು ಅವರ ಮಾತುಗಳನ್ನು ಸಮಾಧಾನಚಿತ್ತದಿಂದ ಕೇಳಿರಿ. ಸಾಲಬಾದೆ ನಿಮಗೆ ಹೆಚ್ಚು ಒತ್ತಡ ನೀಡಬಹುದಾಗಿದೆ. ಸಂಗಾತಿಯಿಂದ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಲಭಿಸುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಕೆಲಸದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಬಹು ದಿನಗಳಿಂದ ಕನಸಾಗಿಯೇ ಉಳಿದಿರುವ ಕೆಲಸವು ಈದಿನ ಒಂದು ಹಂತಕ್ಕೆ ಬರುವ ಸಾಧ್ಯತೆ ಕಾಣಬಹುದು. ಮಕ್ಕಳ ಪ್ರಗತಿಗೆ ನಿಮ್ಮಿಂದ ಸಹಕಾರ ದೊರೆಯುವುದು ನಿಶ್ಚಿತ. ಶುಭ ಸುದ್ದಿಗಳು ನಿಮಗೆ ಮತ್ತಷ್ಟು ಸಂತೋಷ ನೀಡುತ್ತದೆ. ಉದ್ಯೋಗದಲ್ಲಿನ ಸಹವರ್ತಿಗಳ ಜೊತೆಗೆ ಉತ್ತಮ ರೀತಿಯಾಗಿ ಬೆರೆಯುವಿಕೆ ಕಂಡುಬರುತ್ತದೆ. ಬಂಡವಾಳದ ಸಮಸ್ಯೆಯಿಂದ ನಲುಗಿರುವ ನಿಮಗೆ ಪರಿಹಾರ ದೊರೆಯುವ ಸಾಧ್ಯತೆ ಕಾಣಬಹುದು. ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಅತ್ಯವಶ್ಯಕ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಮರಳಿ ಯತ್ನವ ಮಾಡು ಮುಂದೆ ಫಲ ನೀಡುವುದು, ಕೆಲಸದಿಂದ ಹಿಂದೆ ಸರಿಯಬೇಡಿ ಮತ್ತು ಹಿಂದಿನದನ್ನು ಯೋಚಿಸುತ್ತಾ ಕೂರಬೇಡಿ, ಸಾಧಿಸಲು ಹಲವಾರು ಮಾರ್ಗಗಳಿವೆ ನಿಮ್ಮ ಮನಸ್ಸನ್ನು ಪರಿಪಕ್ವಗೊಳಿಸಿಕೊಳ್ಳಿ. ಕಷ್ಟದಾಯಕ ಕೆಲಸವನ್ನು ನಿಮ್ಮ ಪ್ರಯತ್ನ ಶೀಲತೆಯಿಂದ ನಿಮ್ಮಂತೆ ಮಾಡಿಕೊಳ್ಳುವಿರಿ. ಕೆಲವರ ಮಾತುಗಳು ನಿಮ್ಮ ಹುಮ್ಮಸ್ಸನ್ನು ಕೆಳಹಂತಕ್ಕೆ ತಳ್ಳಬಹುದು ಯಾವುದೇ ವಿಚಾರಗಳಿಗೂ ತಲೆಕೆಡಿಸಿಕೊಳ್ಳಬೇಡಿ, ಮುಂದೆ ಸಾಗುವುದನ್ನು ನೋಡಿ. ಕುಟುಂಬದ ಅಗತ್ಯಗಳನ್ನು ಪೂರೈಸುವ ವ್ಯವಧಾನ ನಿಮ್ಮಲ್ಲಿರಲಿ. ಖರ್ಚುಗಳನ್ನು ಹತೋಟಿಯಲ್ಲಿಟ್ಟರೆ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಅವಕಾಶಗಳು ಉದ್ಯೋಗರಂಗದಲ್ಲಿ ಹೆಚ್ಚಳವಾಗುವ ಸಾಧ್ಯತೆ ಕಾಣಬಹುದು. ನಿಮ್ಮ ಕೆಲಸದಲ್ಲಿ ಹೆಚ್ಚಿನ ಪೈಪೋಟಿ ಬರಲಿವೆ ಅದಕ್ಕೆ ಸಜ್ಜಾಗಿರಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಯೋಜನೆಗಳನ್ನು ಪಡೆಯುವಾಗ ನಿಮ್ಮ ವಿಚಾರಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿ. ಹೊಗಳಿಕೆಗೆ ಬೆರಗಾಗಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ. ಆರ್ಥಿಕವಾಗಿ ಬೆಳೆಯಲು ಆದಷ್ಟು ಉತ್ತಮ ಮಾರ್ಗದಲ್ಲಿ ನಡೆಯಿರಿ. ಸಹವಾಸ ದೋಷ ನಿಮ್ಮನ್ನು ಹಾಳು ಮಾಡಬಹುದು ಎಚ್ಚರ. ಕುಟುಂಬದಲ್ಲಿ ವಿವಾಹದ ಕಾರ್ಯಗಳು ನೆರವೇರಿಸುವ ತವಕ ಕಾಣಲಿದೆ. ಭವಿಷ್ಯದ ಹಿತದೃಷ್ಟಿಯಿಂದ ಕೆಲಸವನ್ನು ಉನ್ನತೀಕರಣ ಮಾಡಿ ಸಾಗಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ನಿಮ್ಮ ಸಹಾಯ ಅಪೇಕ್ಷಿಸಿ ಕೆಲವರು ನಯವಾಗಿ ಮಾತನಾಡಬಹುದು ಆದಷ್ಟು ಹಣಕಾಸಿನ ಸಹಾಯವನ್ನು ಹೊರತುಪಡಿಸಿ ಬೇರೆಲ್ಲವೂ ಮಾಡಿಕೊಡಿ. ಲೇವಾದೇವಿ ವ್ಯವಹಾರ ಈ ದಿನ ಮಾಡುವುದು ಸೂಕ್ತವಲ್ಲ. ಕೆಲವರ ಮಾತುಗಳು ನಿಮಗೆ ಹುಮ್ಮಸ್ಸು ನೀಡಲಿದೆ ಹಾಗೂ ನವೀನ ಆಲೋಚನೆ ಬೆಳೆಸುತ್ತದೆ. ಸಂಪೂರ್ಣ ವಿಷಯವನ್ನು ಅರಿತು ಕೆಲಸದಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಆರ್ಥಿಕವಾಗಿ ಹಿನ್ನಡೆ ಅನುಭವಿಸುವಿರಿ ಆದರೆ ಈದಿನ ಮಾಡಿದ ಕಾರ್ಯ ಮುಂದೆ ಉತ್ತಮ ಫಲಿತಾಂಶ ನೀಡುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ವಿದ್ಯಾರ್ಥಿಗಳಿಗೆ ಓದಿನ ಜ್ಞಾನ ಹೆಚ್ಚಾಗಲಿದೆ. ಅಂದುಕೊಂಡಿರುವ ಕೆಲಸವನ್ನು ಪಡೆಯಲು ಹೆಚ್ಚಿನ ಶ್ರಮ ಮತ್ತು ಅಗತ್ಯ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ರೂಪಿಸಿಕೊಳ್ಳಲಿದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ನಿಮ್ಮ ವಿಷಯವನ್ನು ಮತ್ತೊಬ್ಬರ ಮೇಲೆ ಹೇರುವುದು ಸಮಂಜಸವಲ್ಲ. ವ್ಯವಹಾರದ ಕೌಶಲ್ಯತೆಯನ್ನು ಈದಿನ ಉತ್ತಮವಾಗಿ ಕಳೆಯಲಿದ್ದೀರಿ. ಕ್ರಯವಿಕ್ರಯಗಳಲ್ಲಿ ಶುಭಫಲಗಳು ಕಂಡುಬರುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262