ಪ್ರಮುಖ ಸುದ್ದಿ

ಕಲಬುರಗಿ: ಸ್ಟವ್ ಬ್ಲಾಸ್ಟ್, ನಾಲ್ವರು ಮಕ್ಕಳು ಸಾವು

ಕಲಬುರಗಿ: ಚಿಂಚೋಳಿ ತಾಲೂಕಿನ ಪತ್ತುನಾಯಕ ತಾಂಡಾದ ಹೋಟೆಲ್ ಒಂದರಲ್ಲಿ ಸೀಮೆಎಣ್ಣೆ ಸ್ಟವ್ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲಿದ್ದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು ಓರ್ವ ವ್ಯಕ್ತಿ ತೀವ್ರ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ರಿತೇಶ(3), ರಿತೀಕಾ (4) ಹಾಗೂ ಪ್ರೀತಂ (3) , ಅಕ್ಷತಾ (5) ಸ್ಥಳದಲ್ಲೇ ಅಸುನೀಗಿದ್ದಾರೆ. ವೀರಶೆಟ್ಟಿ ಎಂಬುವರು (40) ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ವೀರಶೆಟ್ಟಿ ಎಂಬುವರನ್ನು ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಿಟಗುಪ್ಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಭೇಟಿ ನೀಡಿ ಪರಿಶೀಲಬೆ ನಡೆಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸೀಮೆಎಣ್ಣೆ ಸ್ಟವ್ ಏಕಾಏಕಿ ಬ್ಲಾಸ್ಟ್ ಆಗಲು ಕಾರಣವೇನೆಂಬ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.

Related Articles

Leave a Reply

Your email address will not be published. Required fields are marked *

Back to top button