ರಾಷ್ಟ್ರವಾದದ ಅಬ್ಬರ ನಡುವೆ ಸ್ಥಳೀಯ ಭಾಷೆಗಳ ಹೋರಾಟ- ಸುಗುತ ಶ್ರೀನಿವಾಸ
ಬೆಂಗಳೂರು: ರಾಷ್ಟ್ರವಾದದ ಅಬ್ಬರದ ನಡುವೆ ಸಂಸ್ಕೃತಿಗಳ ಮತ್ತು ಸ್ಥಳಗಳ ಮಹತ್ವ ಸಾರುವ ಸ್ಥಳೀಯ ಭಾಷೆಗಳು ಹೋರಾಟ ನಡೆಸಬೇಕಾದ ಅನಿರ್ವಾಯತೆ ಸೃಷ್ಟಿಯಾಗಿದೆ ಎಂದು ಹಿರಿಯ ಪತ್ರಕರ್ತ ಸುಗುತ ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ನಡೆದ ಭಾಷೆ ಮತ್ತು ನಗರ ಕುರಿತು ಆಯೋಜಿಸಿದ್ದ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಭಾಷೆಯಾಗಲಿ ಅದು ಹೊಂದಿರಬಹುದಾದ ಉದ್ಯೋಗ ಅರ್ಹತೆಯ ಮೇಲೆ ಆ ಭಾಷೆಯ ಮಹತ್ವ ಅಳೆಯಲಾಗುತ್ತಿದೆ.
ಶಿವಾಜಿ ನಗರದ ಕಂಟೋನ್ಮೆಂಟ್ ಪ್ರದೇಶದ ಯುವಕನೋರ್ವ ಯಾವುದೇ ಶಿಕ್ಷಣ ಪಡೆಯದೆ ಬ್ರಿಟಿಷ್ ಶೈಲಿ ಇಂಗ್ಲೀಷ್ ಕಲಿತಿದ್ದರೆ, ನಗರದ ಬಹುರಾಷ್ಟ್ರೀಯ ಕಂಪನಿಯಲ್ಲಿ ಸುಲಭವಾಗಿ ಕೆಲಸ ಪಡೆಯಲಿದ್ದಾನೆ ಎಂದರು.
ಈಚೆಗೆ ಅಧಿವೇಶನ ದಲ್ಲಿ ಕರ್ನಾಟಕ್ ಎಂದ ಸಂಭೋಧನೆ ಮಾಡಿದ ಸಚಿವ ಪ್ರಭು ಚವ್ಹಾಣರನ್ನು ಮಾಜಿ ಸಿಎಂ ಸಿದ್ರಾಮಯ್ಯ ಅದು ಕರ್ನಾಟಕ್ ಅಲ್ಲಾ ಕರ್ನಾಟಕ ಸಚಿವರಾಗಿ ರಾಜ್ಯದ ಹೆಸರನ್ನು ಸರಿಯಾಗಿ ಉಚ್ಛರಿಸದೇ ಇರುವದು ಸರಿಯಲ್ಲ ಎಂದಿದ್ದರು.
ಆದರೆ ಗಮನಿಸಬೇಕಾದ ಅಂಶ ಏನೆಂದರೆ ಪ್ರಭು ಚವ್ಹಾಣ ಮಾತೃಭಾಷೆ ಕನ್ನಡವಲ್ಲ ಅಷ್ಟಕ್ಕೂ ಅವರು ಬೀದರದವರು, ಅಲ್ಲಿ ಕನ್ನಡ ಪ್ರಭಾವ ಕಡಿಮೆ ಆದಾಗ್ಯು ಅವರು ಕನ್ನಡ ಭಾಷೆಯಲ್ಲಿ ಮಾತನಾಡಲು ಪ್ರಯತ್ನ ಸಿರುವದನ್ನು ಶ್ಲಾಘಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು ಎನ್ನಲಾಗಿದೆ.
ಆದರೆ ರಾಜ್ಯ ಸಚಿವರಾದವರ ಮಾತೃಭಾಷೆ ಯಾವುದೇ ಆಗಿರಲಿ ಸ್ಪಷ್ಟ ಕನ್ನಡ ಕಲಿಯಬೇಕಾಗಿರುವದ ಅಗತ್ಯವಿದೆ ಅದು ಬೇರೆ ಮಾತೆಂಬಂತೆ ಆಶಯ ವ್ಯಕ್ತಪಡಿಸಿದರು ಎನ್ನಲಾಗಿದೆ.