ಪ್ರಮುಖ ಸುದ್ದಿ

ಸುರಪುರಃ ತಹಶೀಲ್ದಾರ ಹೆಸರಲ್ಲಿ‌ 75,59,900/- ರೂ. ಅಕ್ರಮ ವರ್ಗಾವಣೆ – ಪ್ರಕರಣ ದಾಖಲು

ಸುರಪುರಃ ತಹಶೀಲ್ದಾರ ಹೆಸರಲ್ಲಿ‌ 75,59,900/- ರೂ. ಅಕ್ರಮ ವರ್ಗಾವಣೆ – ಪ್ರಕರಣ ದಾಖಲಿಸಿದ ತಹಶೀಲ್ದಾರ

ಯಾದಗಿರಿಃ ತಹಶೀಲ್ದಾರರ ಫೋರ್ಜರಿ ಸಹಿ ಮಾಡಿ, ತಹಶೀಲ್ದಾರರ ಹೆಸರಿನಲ್ಲಿರುವ ವಿಪತ್ತು ನಿರ್ವಹಣೆ ಖಾತೆಯಿಂದ ಅಕ್ರಮವಾಗಿ 75,59,900/- ರೂಪಾಯಿ ಹಣವನ್ನು ಶ್ರೀ‌ ಮಹಾಲಕ್ಷ್ಮೀ ಎಂಟರ್ ಪ್ರೈಸಸ್ ಇವರ ಹೆಸರಿನ‌ ಖಾತೆಗೆ ವರ್ಗಾವಣೆ‌ಯಾಗಿದ್ದು ತಿಳಿದು ತಹಶೀಲ್ದಾರರು ಬ್ಯಾಂಕ್ ಗೆ ಹೋಗಿ ಪರಿಶೀಲಿಸಿ ದಿಗ್ಭ್ರಮೆಗೊಂಡು‌ ನಗರ ಠಾಣೆಗೆ ಬಂದು ದೂರು ದಾಖಲಿಸಿದ ಘಟನೆ ಜಿಲ್ಲೆಯ ಸುರಪುರದಲ್ಲಿ ನಡೆದಿದೆ.

ನಿನ್ನೆ ಮಂಗಳವಾರ (ಸೆ.22) ಸಂಜೆ ತಹಶೀಲ್ದಾರ‌ ಅವರ ಫೋರ್ಜರಿ ಸಹಿ ಮಾಡಿ ಲಕ್ಷಾಂತರ ರೂಪಾಯಿ ವರ್ಗಾವಣೆಯಾದ ಕುರಿತು ಪ್ರಕರಣ ಬಯಲಿಗೆ ಬಂದಿದೆ.
ಶಿರಸ್ತೆದಾರ ನಸೀರ ಅಹ್ಮದ್ ಮತ್ತು ನೈಸರ್ಗಿಕ ವಿಕೋಪ ಸಂಕಲನದ ವಿಷಯ ನಿರ್ವಾಹಕ ಸಿ.ಎಸ್.ರಾಜಾ ಇವರಿಗೆ ಇಲ್ಲಿವರೆಗೆ ನೈಸರ್ಗಿಕ ವಿಕೋಪದಡಿ ಖರ್ಚಾದ ಅನುದಾನ ಬಗ್ಗೆ ವಿವರಣೆ ಕೇಳಿದಾಗ, ಸದರಿ ಅವರು ಆಕ್ಸಿಸ್ ಬ್ಯಾಂಕಿಗೆ ಹೋಗಿ ಖಾತೆ ಸಂಖ್ಯೆ 91901008033954 ಸ್ಟೇಟ್ ಮೆಂಟ್ ತಂದು ಹಾಜರು ಪಡಿಸಿದರು.

ಆಗ ಸದರಿ ಬ್ಯಾಂಕ್ ‌ಸ್ಟೇಟ್ ಮೆಂಟ್‌ ಪರಿಶೀಲಿಸಲಾಗಿ 2020 ಜೂನ್ 1 ರಂದು ಮದ್ಯಾಹ್ನ 12-25 ಗಂಟೆಗೆ ಸದರಿ ಖಾತೆಯಿಂದ ‌ಶ್ರೀಮಹಾಲಕ್ಷ್ಮೀ ಎಂಟರ್ ಪ್ರೈಸೆಸ್ ಮಾಲೀಕರ ಹೆಸರಿಗೆ 75,59,900/- ರೂ.ಗಳು ವರ್ಗಾವಣೆ ಆಗಿರುವದು ಕಂಡು ದಾಂಗಾಗಿದ್ದೇನೆ. ನಾನ್ಯಾವ್ ಎಂಟರ್ ಪ್ರೈಸೆಸ್ ಗೆ ಹಣ ವರ್ಗಾವಣೆ ಮಾಡಲು‌ ಚಕ್ ನೀಡಿರುವದಿಲ್ಲ.

ತಕ್ಷಣವೇ ಬ್ಯಾಂಕಿಗೆ ಸಿಬ್ಬಂದಿ ಜೊತೆ ಹೊಗಿ ವ್ಯವಸ್ಥಾಪಕರನ್ನು ಭೇಟಿ‌ಮಾಡಿ ವಿಚಾರಿಸಲಾಯಿತು. ಆದರೆ ವ್ಯವಸ್ಥಾಪಕರು ತಹಶೀಲ್ದಾರರು ಹಣ ವರ್ಗಾವಣೆ ಮಾಡಲು ಚಕ್ ನೀಡಿರುವದರಿಂದಲೇ ಮಹಾಲಕ್ಷ್ಮೀ ಎಂಟರ್ಪ್ರೈಸಸ್ ಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಹೀಗಾಗಿ ನಾನು ಹಣ ವರ್ಗಾವಣೆ ಮಾಡಲು ಚಕ್ ನೀಡಿರುವದಿಲ್ಲ. ಇಲ್ಲಿ ಫೋರ್ಜರಿ ಮಾಡಲಾಗಿದೆ.‌ ವಿಷಯ ನಿರ್ವಾಹಕರ‌ ನಕಲಿ ಸಹಿ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.‌ ಎಂಟರ್ ಪ್ರೈಸಸ್ ತಾಳಿಕೋಟಿಯವರದು ಎಂದು ತಿಳಿದು ಬಂದಿದ್ದು, ಮಾಲೀಕರ ಹೆಸರು ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಸಾ.ವಜ್ಜಲ್ ತಾ.ಹುಣಸಗಿ ಎಂದು ಇದೆ. ಎಂದು  ತಹಶೀಲ್ದಾರರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

IPC ಕಲಂ 419, 420, 465, 468, 472 ರನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button