ಪ್ರಮುಖ ಸುದ್ದಿಸಂಸ್ಕೃತಿ

ನಾಡಹಬ್ಬದ ಮೇಲೆ ಕೊರೊನಾ ಕರಿನೆರಳ ಛಾಯೆ-ರಾಜಾ ಮುಕುಂದ ನಾಯಕ

ಮುಂದಿನ ಸಲ ಅದ್ದೂರಿ ನಾಡಹಬ್ಬಃ ರಾಜಾ ಮುಕುಂದ ನಾಯಕ

yadgiri, ಸುರಪುರ: ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾಮಾರಿ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರನ್ನು ಪೀಡಿಸುತ್ತಿರುವ ಕಾರಣ, ಕೊರೊನಾ ನಿಯಮಾವಳಿ ಮೀರದಂತೆ ಎಚ್ಚರಿಕೆವಹಿಸಿ ಈ ಬಾರಿ ಸರಳವಾಗಿ ನಾಡಹಬ್ಬವನ್ನು ಆಚರಿಸಲಾಗುತ್ತಿದೆ. ಮುಂದಿನ ವರ್ಷ ಎಲ್ಲವೂ ಸರಿ ಹೋದ್ರೆ ಅದ್ಧೂರಿಯಾಗಿ ನಾಡಹಬ್ಬ ಆಚರಿಸಲಾಗುತ್ತದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ, ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ತಿಳಿಸಿದರು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಗುರುವಾರ ಸಂಜೆ ನಡೆದ ನಾಡಹಬ್ಬದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಹೋದರ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಸುರಪುರದಲ್ಲಿ ನಾಡಹಬ್ಬವನ್ನು ಮೈಸೂರಿನ ದಸರಾ ಮಹೋತ್ಸವಕ್ಕೆ ಕಡಿಮೆ ಇಲ್ಲದಂತೆ ಆಚರಿಸುವ ಮೂಲಕ ಭದ್ರ ಬುನಾದಿ ಹಾಕಿದ್ದರು ಎಂದು ಸ್ಮರಿಸಿದರು.
ಸಗರನಾಡು ಸಾಂಸ್ಕøತಿಕ ಲೋಕದಲ್ಲಿ ಸುರಪುರ ನಾಡಹಬ್ಬ ವಿಜೃಂಭಿಸುವಂತೆ ಮಾಡಿದ್ದರು. ಅಲ್ಲದೆ ಈ ಭಾಗದ ಅಪಾರ ಸಾಹಿತಿಗಳು, ಕಲಾವಿದರನ್ನು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡುವಲ್ಲಿ ಅವರ ಕೊಡುಗೆ ಜೊತೆಗೆ ಈ ಭಾಗದ ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯವನ್ನು ಮಾಜಿ ಸಚಿವರು ಮಾಡಿದ್ದಾರೆ. ಅವರ ತೋರಿದ ಮಾರ್ಗದಲ್ಲಿ ನಾವೆಲ್ಲ ಪರಂಪರೆಯನ್ನು ಬೆಳೆಸಲು ಸದಾ ಸಿದ್ಧನಿದ್ದು, ತಮ್ಮೆಲ್ಲರ ಸಹಕಾರವು ಬಹುಮುಖ್ಯವಿದೆ.

ರಾಜಾ ಪಾಮನಾಯಕ, ರಾಜಾಹರ್ಷವರ್ಧನ್ ನಾಯಕ, ಸೇರಿದಂತೆ ಎಲ್ಲ ಗಣ್ಯರ, ಕನ್ನಡ ಸಾಹಿತ್ಯ ಸಂಘದ ಸರ್ವ ಸದಸ್ಯರ ಸಹಕಾರ ಅಗತ್ಯವಿದೆ. ನೀವು ಕೈ ಹಿಡಿದರೆ ಮುಂದಿನ ವರ್ಷ ಮೈಸೂರು ದಸರಾ ಮಹೋತ್ಸವದಂತೆ ಸುರಪುರ ನಾಡಹಬ್ಬವನ್ನು ಅದ್ಧೂರಿಯಾಗಿ ನೆರವೇರಿಸಲಾಗುವುದು ಎಂದರು.

ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಡಾ. ಸುರೇಶ ಸಜ್ಜನ್ ಮತ್ತು ಜಿಪಂ ಮಾಜಿ ಸದಸ್ಯ ಎಚ್.ಸಿ.ಪಾಟೀಲ್ ಮಾತನಾಡಿದರು.

ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ್ ಜಮದ್ರಖಾನಿ ಅಧ್ಯಕ್ಷತೆವಹಿಸಿದ್ದರು. ರಾಜಾ ಪಾಮನಾಯಕ, ರಾಜಾ ಹರ್ಷವರ್ಧನ್ ನಾಯಕ, ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ, ಕಿಶೋರಚಂದ್ ಜೈನ್, ಪ್ರಕಾಶ್ ಆರ್. ಸಜ್ಜನ್, ಮಹೇಶ್ ಜಾಗೀರದಾರ್, ಅದ್ಬುಲ್ ಗಫೂರ ನಗನೂರಿ, ಸೋಮನಾಥ ನಾಯಕ ಡೊಣ್ಣಿಗೇರಾ, ಶಿವರಾಜಕುಮಾರ ಮಸ್ಕಿ, ರಾಜಶೇಖರ ದೇಸಾಯಿ, ಪ್ರಕಾಶ್ ಗುತ್ತೇದಾರ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡೊಳ್ಳು ಕುಣಿತ ಕಲಾವಿದರು, ಮೋಹರಂ ಕುಣಿತ ಕಲಾವಿದರು, ಜೋಗತಿಯರು, ಕುದರೆ ಕುಣಿತ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button