ಸುರಪುರಃ 198 ಕೋಟಿ ವೆಚ್ಚದ ಶಾಶ್ವತ ಕುಡಿಯುವ ನೀರು ಯೋಜನೆಗೆ ಸಚಿವ ಭೈರತಿ ಚಾಲನೆ
ಸುರಪುರಃ ಶಾಶ್ವತ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ
ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ -ರಾಜೂಗೌಡ ಸವಾಲ್
ನಗರಾಭಿವೃದ್ಧಿಗೆ 100 ಕೋಟಿ ಮಂಜೂರ – ರಾಜೂಗೌಡ
ಯಾದಗಿರಿಃ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು 198 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಗರ ಪ್ರದೇಶ ಸೇರಿದಂತೆ 3 ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.
ಜಿಲ್ಲೆಯ ಸುರಪುರ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನಡೆದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಗರಸಭೆ ವ್ಯಾಪ್ತಿಯ 31 ವಾರ್ಡ್ಗಳಿಗೆ ಕುಡಿಯುವ ನೀರಿನ ಅಭಾವವಿತ್ತು ಇದೀಗ ಈ ಯೋಜನೆ ಜಾರಿಯಿಂದ ಅನುಕೂಲವಾಗಲಿದೆ.
ಡಿಸೆಂಬರ್ 2022 ಅಂದ್ರೆ ಒಂದು ವರ್ಷದೊಳಗೆ ಈ ಕಾಮಗಾರಿ ಮುಗಿದು ಜನರಿಗೆ ಕುಡಿಯುವ ನೀರು ಸರಬರಾಜು ಆಗುವ ವ್ಯವಸ್ಥೆ ಆಗಲಿದೆ ಎಂದು ಭರವಸೆ ನೀಡಿದರು. ಶಾಸಕ ರಾಜೂಗೌಡ ಅಧ್ಯಕ್ಷತೆವಹಿಸಿದ್ದರು. ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಸಜ್ಜನ್, ರಾಜಾ ಹನುಮಪ್ಪ ನಾಯಕ, ಮಹೇಶ ಪಾಟೀಲ್, ಬಲಭೀಮನಾಯಕ ಬೈರಿಮಡ್ಡಿ, ಯಲ್ಲಪ್ಪ ಕುರಕುಂದಿ ಸೇರಿದಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ, ನರಸಿಂಹರಡ್ಡಿ ಇತರರಿದ್ದರು.
ನನ್ನ ವಿರೋಧಿಸುವರು ಅವರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಎಷ್ಟಾಗಿದೆ ನನ್ನ ಅವಧಿಯಲ್ಲಿಆದ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ.
ನಗರ ಜನತೆಯ ಕನಸಿನ ಯೋಜನೆಯಾದ ಶಾಶ್ವತ ಕುಡಿಯುವ ನೀರಿನ ಯೋಜನೆ ನನ್ನ ಜನ್ಮ ದಿನದಂದೇ ಶಂಕುಸ್ಥಾಪನೆ ನೆರವೇರಿಸಿರುವದು ಸಂತಸ ತಂದಿದೆ.
–ರಾಜೂಗೌಡ. ಶಾಸಕ ಸುರಪುರ.