ಪ್ರಮುಖ ಸುದ್ದಿ
ಸುರಪುರಃ ರಾತ್ರಿ ಸಿಡಿಲು ಬಡಿದು 25 ಕುರಿಗಳ ಸಾವು
ಸುರಪುರಃ ರಾತ್ರಿ ಸಿಡಿಲು ಬಡಿದು 25 ಕುರಿಗಳ ಸಾವು
ಯಾದಗಿರಿಃ ನಿನ್ನೆ ರಾತ್ರಿ ಹೊಲವೊಂದರಲ್ಲಿ ವ್ಯಕ್ತಿಯೋರ್ವ ಹಾಕಿಕೊಂಡಿದ್ದ ಕುರಿ ದೊಡ್ಡಿಗೆ ಸಿಡಿಲು ಬಡಿದ ಪರಿಣಾಮ ಸುಮಾರು 25 ಕ್ಕು ಅಧಿಕ ಕುರಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮ ವ್ಯಾಪ್ತಿಯ ಸೀಮಾಂತರದಲ್ಲಿ ನಡೆದಿದೆ.
ಅದೃಷ್ಟವಶಾತ್ ಕುರಿಗಾಯಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿಗಳು ಸಣ್ಣ ತಿಪ್ಪಣ್ಣ ಪುರ್ಲೆ ಎಂಬುವರಿಗೆ ಸೇರಿದ್ದಾಗಿವೆ.