ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: HSRP ನಂಬರ್ ಪ್ಲೇಟ್ ನಿಯಮ ಬದಲಾವಣೆ

(HSRP REGISTRATION:) ರಾಜ್ಯದ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ವಾಹನ ಸವಾರರು ಈ HSRP ಅಳವಡಿಕೆಯ ಬಗ್ಗೆ ಹೆಚ್ಚು ಚಿಂತಿಸುವಂತಾಗಿದೆ. ಹೌದು, ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಎಲ್ಲ ವಾಹನ ಮಾಲೀಕರು ಕೂಡ HSRP REGISTRATION ಮಾಡಿಸುವಲ್ಲಿ ಬ್ಯುಸಿ ಆಗಿದ್ದಾರೆ.
ಈಗಾಗಲೇ ಸರ್ಕಾರ ಸಾಕಷ್ಟು ಬಾರಿ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಎರಡು ಬಾರಿ ಸರ್ಕಾರ ಗಡುವನ್ನು ವಿಸ್ತರಿಸಿದೆ. ನವೆಂಬರ್ 17, 2023 ರ ಕೊನೆಯ ದಿನಾಂಕವನ್ನು ವಿಸ್ತರಿಸುತ್ತ ಸದ್ಯ ಸರ್ಕಾರ ಸೆಪ್ಟೆಂಬರ್ 15, 2024 ನ್ನು ಕೊನೆಯ ದಿನಾಂಕವಾಗಿ ಘೋಷಿಸಿದೆ. ವಾಹನ ಮಾಲೀಕರು ಊSಖP ಅಳವಡಿಕೆಯಲ್ಲಿ ಯಶಸ್ವಿಯಾಗದ ಕಾರಣ ಇದೀಗ ಮತ್ತೆ ಸಮಯಾವಕಾಶವನ್ನು ಸರ್ಕಾರ ವಿಸ್ತರಿಸಿದೆ. ವಾಹನ ಮಾಲೀಕರು ಸೆಪ್ಟೆಂಬರ್ 15 ರೊಳಗೆ ತಮ್ಮ ವಾಹನಕ್ಕೆ HSRP NUMBER PLATE ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ.
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತೆ ಸರ್ಕಾರ ದಿನಾಂಕ ವಿಸ್ತರಣೆ ಮಾಡುತ್ತದೆ ಎಂದು ವಾಹನ ಮಾಲೀಕರು ನಿರಾಳಗುವಂತಿಲ್ಲ. ಸರ್ಕಾರ ಮತ್ತೆ ಗಡುವು ವಿಸ್ತರಿಸುವ ಯೋಜನೆ ಹಾಕಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 15 ರ ನಂತರ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 15 ರ ನಂತರ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳು ರಸ್ತೆಗಿಳಿದರೆ 1000 ದಂಡ ವಿಧಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.