ಪ್ರಮುಖ ಸುದ್ದಿ
ಹೊಸ ವರ್ಷಃ ಕೋವಿಡ್ ತಡೆಗೆ ಕರ್ತವ್ಯನಿರತ ಪೊಲೀಸರಿಗೊಂದು ಸೆಲ್ಯೂಟ್
ಹೊಸ ವರ್ಷಃ ಕೋವಿಡ್ ತಡೆಗೆ ಕರ್ತವ್ಯನಿರತ ಪೊಲೀಸರು.!
ಶಹಾಪುರಃ ಎಲ್ಲಡೆ ಕೋವಿಡ್ ಆತಂಕದ ನಡುವೆಯು ಹೊಸ ವರ್ಷ ಸಂಭ್ರಮ ಮನೆ ಮಾಡಿದೆ.
ಡಿ.31 ಗುರುವಾರ ರಾತ್ರಿ 11 ಗಂಟೆಯಾಗುತ್ತಿದ್ದಂತೆ ಪೊಲೀಸರು ನಗರದಲ್ಲಿ ಅಲರ್ಟ್ ಆಗಿ ಗುಂಪು ಸೇರದಂತೆ ಟೈಂ ಮೀರಿದೆ ಮನೆಗೆ ನಡೆಯಿರಿ ಎಂದು ವಿಸಿಲ್ ಹಾಕುವ ಮೂಲಕ ಜನರನ್ನು ಎಚ್ಚರಿಸಿ ಕಳುಹಿಸುತ್ತಿರುವದು ಕಂಡು ಬಂದಿತು.
ಕೋವಿಡ್ ನಿಯಮ ಪಾಲಿಸಲು ಸೂಚನೆ ನೀಡಿದರು. ಮಾಸ್ಕ್ ಧರಿಸಿ ಕೋವಿಡ್ ಮಾರ್ಗಸೂಚಿ ಅನುಸರಿಸಲು ಎಚ್ಚರಿಕೆ ನೀಡಿ ಬೈಕ್ ಸವಾರ, ಇತರರನ್ನು ಚದುರಿಸುವಲ್ಲಿ ಯಶಸ್ವಿ ಕಾರ್ಯ ಮಾಡಿದರು.
ಹೊಸ ವರ್ಷ ಸಂಭ್ರಮಾಚರಣೆಗೆ ಯಾವುದೇ ಗದ್ದಲ, ಗಲಾಟೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಇಡಿ ಸಮಾಜ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡರೆ ಪೊಲೀಸರು ಮಾತ್ರ ಪಾಪ ಕರ್ತವ್ಯ ನಿಭಾಯಿಸುವ ಮೂಲಕ ಜನಹಿತ ಕಾರ್ಯದಲ್ಲಿ ತೊಡಗಿದ್ದರು.
ಹೀಗಾಗಿ ವಿನಯವಾಣಿ ಓದುಗ ಬಳಗದಿಂದ ಅವರಿಗೊಂದು ಬಿಗ್ ಸೆಲ್ಯೂಟ್.