ಈ MLC ಹೇಳಿದ್ದೆಂಥಾ ಮಾತು ನೋಡಿ : ಗಂಡಾದರೂ, ಹೆಣ್ಣಾದರೂ ಇವರೆ ಕಾರಣ ಅಂತಾರಂತೆ!
ಬೀದರ : ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ವಿರುದ್ಧ ಭಗವಂತ ಖುಬಾ ಅಂತ ಹೊಸ ಯುವಕ ಸ್ಪರ್ದಿಸುವಲ್ಲಿ ರಘುನಾಥ್ ಮಲ್ಕಾಪುರೆ ಪಿತೂರಿ ಇದೆ. ಮಾಜಿ ಮುಖ್ಯಮಂತ್ರಿ ವಿರುದ್ಧ ಹೊಸ ಯುವಕ ಸ್ಪರ್ದಿಸಲು ಸಾಧ್ಯವೇ ಎಂದು ಹಗುರವಾಗಿ ಮಾತನಾಡುತ್ತಿದ್ದರು. ಹೀಗೆ ಎಲ್ಲದಕ್ಕೂ ಮಲ್ಕಾಪುರೆನೇ ಕಾರಣ ಅನ್ನೋದು ಫ್ಯಾಷನ್ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಹೇಳಿದರು.
ಎಲ್ಲದಕ್ಕೂ ನನ್ನ ಕಡೆಗೆ ಬೆರಳು ತೋರಿಸಲಾಗುತ್ತಿದೆ ಎಂದು ವಿರೋಧಿಗಳ ವಿರುದ್ಧ ಗುಡುಗುವ ಭರದಲ್ಲಿ ”ಯಾರಿಗಾದರೂ ಗಂಡು ಹುಟ್ಟಿದರೂ, ಹೆಣ್ಣು ಹುಟ್ಟಿದರೂ ಮಲ್ಕಾಪುರೆನೇ ಕಾರಣ ಅಂತ ಹೇಳಲಾಗುತ್ತಿದೆ. ಅಂಥವರಿಗೆ ಭಗವಂತ ಸದ್ಭುದ್ಧಿ ಕೊಡಲಿ ಅಂತ ಪ್ರಾರ್ಥಿಸುತ್ತೇನೆ” ಎಂದು ವಿಧಾನಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಹೇಳಿದರು.
ಬೀದರ್ – ಪಂಡರಾಪುರ ನೂತನ ರೈಲು ಉದ್ಘಾಟನೆ ಕಾರ್ಯಕ್ರಮದಲ್ಲಿ ರಘುನಾಥ್ ಮಲ್ಕಾಪುರೆ ಮಾತನಾಡಿದರು. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತುಂಬಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ವಿವಾದಾತ್ಮಕ ಹೇಳಿಕೆ ನೀಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.