ಪ್ರಮುಖ ಸುದ್ದಿ
ಶಹಾಪುರಃ ರೇಣುಕಾ ವೈನ್ಸ್ ಸೆಟರ್ ಮುರಿದು ಅಪಾರ ಮದ್ಯ ಕಳವು
ಶಹಾಪುರಃ ರೇಣುಕಾ ವೈನ್ಸ್ ಕಳವು ಅಪಾರ ಹಾನಿ
ಯಾದಗಿರಿಃ ಜಿಲ್ಲೆಯ ಶಹಾಪೂರ ನಗರದ ಸುರಪುರ ರಸ್ತೆಯ ಕಡಗಂಚಿ ಕಾಂಪ್ಲೆಕ್ಸ್ ನಲ್ಲಿರುವ ರೇಣುಕಾ ವೈನ್ಸ್ (ಮದ್ಯಮಾರಾಟ ಅಂಗಡಿ) ಸೆಟರ್ ಮುರಿದ ಕಳ್ಳರು ಅಪಾರ ಪ್ರಮಾಣ ಮದ್ಯ ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ವೈನ್ಸ್ ಸೆಟರ್ ಮುರಿದು ಒಳ ನುಗ್ಗಿದ ಕಳ್ಳರು ಸಿಸಿ ಟಿವಿಯನ್ನು ಹೊಡೆದು ಹಾಕಿದ್ದು, ಅಲ್ಲದೆ ಸಿಸಿ ಟಿವಿ ಫೂಟೇಜ್ ತೆಗೆದುಕೊಂಡು ಹೋಗಿದ್ದಾರೆ.
ಮದ್ಯದ ಬಾಟಲ್ ಬಾಕ್ಸ್ ಗಳನ್ನು ಎತ್ತಾಕೊಂಡು ಹೋಗಿದ್ದು, ಅದರಲ್ಲಿ ಹೈ ಲಿಕ್ಕರ್ ಜಾಸ್ತಿ ಒಯ್ದಿದ್ದಾರೆ ಎಂದು ಮಾಲೀಕ ಉಮೇಶ ಮದ್ರಿಕಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಡ್ ಕಾನ್ಸ್ ಟೇಬಲ್ ಹುಸೇನಪ್ಪ ಕೆ.ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಸಿಪಿಐ ಹನುಮರಡ್ಡೆಪ್ಪನವರಿಗೆ ಮಾಹಿತಿ ನೀಡಿದರು. ಅಲ್ಲದೆ ವೈನ್ಸ್ ಒಳಗಡೆ ಯಾರೊಬ್ಬರು ಹೋಗದಿರಲು ತಿಳಿಸಿದರು.