ಅಲ್ಲಮರು ಹೇಳಿದ ಐದು ವಸ್ತುಗಳ ಬಗ್ಗೆ ಚಿಂತೆ ಬೇಡ..ಸಿದ್ದೇಶ್ವರಶ್ರೀ ಅಮೃತವಾಣಿ
ಬಲ್ಲವರ ಮಾತುಗಳಲ್ಲಿದೆ ಬದುಕಿನ ಸಾಮರ್ಥ್ಯ
ಕಲಬುರ್ಗಿಃ ಅಲ್ಲಮಪ್ರಭುಗಳು ಶ್ರೇಷ್ಠ ಯೋಗಿಗಳು. ಅನುಭಾವಿಗಳು ಭಾರತ ದೇಶವನ್ನೆಲ್ಲ ಸಂಚರಿಸಿದವರು. ಮಹಾ ಸ್ವಚ್ಛ ಜೀವನ. ಬಯಲು ಬಯಲಿನಂತೆ ಬಾಳಿದವರು. ಅವರ ಮಾತುಗಳು ಅಷ್ಟೆ ಸ್ವಚ್ಛ ಕಾವ್ಯಮಯ ಅರ್ಥಪೂರ್ಣ. ಆದ್ದರಿಂದಲೇ ಶರಣರೆಲ್ಲ ಅವರ ಮಾತುಗಳನ್ನು ಕೇಳುವಲ್ಲಿ ಎಷ್ಟು ತನ್ಮಯರಾಗುತ್ತಿದ್ದರು. ಅವರನ್ನ ಅತಿಯಾಗಿ ಗೌರವಿಸಿದರು. ಶೂನ್ಯಪೀಠದ ದೊರೆ ಎಂದು ವರ್ಣಿಸಿದರು. ಅಷ್ಟು ಸಮರ್ಥರು ಅಲ್ಲಮಪ್ರಭುದೇವರು.
ಅಂತವರ ಮಾತುಗಳಲ್ಲಿ ಎಂತಹ ಅರ್ಥವಿತ್ತು. ಅವುಗಳನ್ನ ನಾವು ಸುಮ್ನೆ ಮನಸ್ಸಿನಲ್ಲಿ ಇಡೋದು. ಒಂದು ಬುಟ್ಟಿಯಲ್ಲಿ ಹೂವುಗಳನ್ನು ತುಂಬುತ್ತೀವಿ. ಮನೆಯ ಮಧ್ಯದಲ್ಲಿ ಅದನ್ನು ಹೀಂಗ..ಇಡುತ್ತೀವಿ. ನಾವು ಏನು ಮಾಡಬೇಕಿಲ್ಲ. ಹೂವಿನ ಸುಗಂಧವನ್ನು ನಾವೇ ತಗೊಂಡು ಹರವುಬೇಕಾಗಿಲ್ಲ. ತಾನೇ ಹರಡುತ್ತೆ. ನಾವೇ ಸುಗಂಧವನ್ನು ತೆಗೆದುಕೊಳ್ಳುತ್ತೇವೆ. ಸುಮ್ನೆ ಇಡುವುದು ಅಷ್ಟೆ. ಏನು ಮಾಡೋದು ಬೇಕಿಲ್ಲ.
ಮನೆಯ ಯಾವ ಮೂಲೆಯಲ್ಲಿದೆ ಆ ಬುಟ್ಟಿ. ನಮ್ಮ ಹತ್ತಿರ ಆ ಸುಗಂಧ ನಮ್ಮ ಬಳಿ ಬರ್ತೀದೆ. ಇರಲಿ ನಮ್ಮ ಹತ್ತಿರ ಆ ಸುಗಂಧ ಹರಡುತ್ತದೆ. ನಿಸರ್ಗ, ಆದೇವನದ್ದು ಎಂತಹದ್ದು, ಸಹಜ ಸಹಜ ಜಗತ್ತನ್ನ ಸುಂದರಗೊಳಿಸುವ ಅರ್ಥವಿದು. ನಮ್ಮ ಜೀವನ ಸುಗಂಧ ಆಗಬೇಕಲ್ಲ. ಆದ್ದರಿಂದ ಅಂತವರ ಮಾತುಗಳನ್ನು ನಮ್ಮ ಮನಸ್ಸಿನಲ್ಲಿ ಹಾಕಿಡುವುದು ಬುಟ್ಟಿಯಲ್ಲಿ ಹೂವುಗಳನ್ನು ಹಾಕಿಟ್ಟಂತೆ ನಮ್ಮ ಹೃದಯದ ಮಧ್ಯದಲ್ಲಿ ಹಾಕಿಡಬೇಕು. ಇಂತಹ ಮಾತುಗಳು ಮನಸ್ಸಿನಲ್ಲಿ ಹಾಕಿಟ್ಟರೆ, ಸಾವಕಾಶ ಆ ಮಾತುಗಳಿಂದ ಮನಸ್ಸನ್ನು ತುಂಬುತ್ತದೆ. ಮನಸ್ಸಿನ ನೋವುನ್ನು ಕಡಿಮೆ ಮಾಡುತ್ತದೆ. ಶಾಂತಿ ಅನುಭವಕ್ಕೆ ಬರುವಂತೆ ಮಾಡುತ್ತದೆ. ಅಂತಹ ಸಾಮಥ್ರ್ಯ ಮಾತುಗಳಲ್ಲಿದೆ. ಅಂತಹ ಶಕ್ತಿ ಬಲ್ಲವರ ಮಾತಲ್ಲಿದೆ. ಅಂತಹ ಅಲ್ಲಮನ ಒಂದು ಸಣ್ಣ ಮಾತಿನಲ್ಲಿ ಎಂತಹ ಶಕ್ತಿ ಇದೆ.
ಎಷ್ಟು ಈ ಜಗತ್ತನ್ನು ನೋಡಿ ನೋಡಿ ಈ ಜಗತ್ತು ಹ್ಯಾಗ್ ಅದ ಜನ ಹ್ಯಾಗ ಬದ್ಕತಾ ಇದ್ದಾರ..ಹ್ಯಾಗ ಬದುಕಿದ್ರೆ ಯೋಗ್ಯ ಎಂಬುದನ್ನು ಅವರು ಮಾತಿನಲ್ಲಿ ಹೇಳ್ತಾರ.. ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದೈದಾವೆ (ಐದು) ಹೆಣ. ಬಂದು ಬಂದು ಅಳುವರು ಬಳಗ ಘನವಾದ ಕಾರಣ. ಕಾಡು ನನ್ನದು ಹೆಣವು ಬೇರೆಯೋದು ಬರೆ ಮಾಡುವರೆಂತು ಕಾಣ ಗುಹೇಶ್ವರ..! ಸರಳ ಅಲ್ಲ ಸ್ವಲ್ಪ ಕಠಿಣವಾದಂತ ರೂಪಕದ ವಚನ. ಬಹಳ ಅರ್ಥಪೂರ್ಣವಾದ ರೂಪಕದ ವಚನ. ಇದೇನ ಜಗತ್ತ ಅದ ಇಲ್ಲೊಂದು ಐದು ಹೆಣ ಬಿದ್ದಾವ..ಯಾರು ಈ ಜಗ್ಗತ್ತಿಗೆ ಬರ್ತಾರಲ್ಲ ಈ ಹೆಣಕ್ಕಾಗಿಯೇ ಅಳ್ತಾರ..ಆ ಕಾಡು ನಂದಲಿಲ್ಲ..ಹೆಣ ಬೆಂದಿಲ್ಲ ಸುಟ್ಟಿಲ್ಲ..ನೂರು ವರ್ಷ ಕಳೆದರೂ.. ಐದು ಹೆಣ ಅಂದ್ರೆ ನಾವು ಹಪಾಹಪಿಸುತ್ತೀವಿ ಅಂಥಹ ಐದು ವಸ್ತುಗಖ ಅದಾವಿಲ್ಲ. ಅವುಗಳ ಬಂಧೂಗಳ ಬಹಳ. ಬಂದು ಬಂದು ಅಳುವರು ಎಲ್ಲರೂ ಆ ಐದರ ಬಂಧುಗಳೇ..
ಯಾವುದಕ್ಕಾಗಿ ಮನುಷ್ಯ ನೂರು ವರ್ಷ ಅಳ್ತಾನ..ಚಿಂತಿ ಮಾಡ್ತಾನ.. ಮೊದಲನೇಯದು ರೊಕ್ಕ, ಎರಡನೇಯದು ಒಂದಿಷ್ಟು ಭೂಮಿ.. ಮೂರನೇಯದು ಐದು ಒಂದಿಷ್ಟು ಅಧಿಕಾರ.. ನಾಲ್ಕನೇಯದು ಒಂದಿಷ್ಟು ಕೀರ್ತಿ, ಐದನೇಯದು ಒಂದೀಟು ಸುಖ ಎಷ್ಟು ಮಸ್ತ್ ಅದಾವ್ ಇವು. ಈ ಐದಕ್ಕಾಗಿ ಇಲ್ಲಿ ಬಿದ್ದಿದ ಹೆಣ ಇಲ್ಲಿ ಬಂದಾವ ಪ್ರತಿಯೊಬ್ಬ ಇದಕ್ಕ ಬರ್ತಾನ..ಯಾರು ಬಂದ್ರು ಅದಕ್ಕೆ ಬಡದಾಡುತ್ತಾರೆ..ಅವರು ಬಂದ್ರೂ ಹೋದರು ಭೂಮಿ ಇಲ್ಲೆ ಅದ ಹೆಣ ಇದ್ದಂಗ, ರೊಕ್ಕ ಇಲ್ಲೆ ಅದ. ಬಂದವರು ಅತ್ತು ಅತ್ತು ಹೋದರು. ಯಾವುದಕ್ಕಾಗಿ ಸಿಗಲಾರದೆ ಹೋಗ್ಯಾರ..ಅದಕ್ಕ ನಾವು ಮತ್ ಬಡದಾಡ್ತಾ ಇದ್ದೀವಿ..ಅವರೆಲ್ಲ ಹೋಗ್ಯಾರ..ಕೊನೆಗೆ ಮಾಡುವರೆಂತೋ ಆಯುಷ್ಯ ಹೋಯ್ತು ವಿನಃ ಇವು ಯಾರ ಕೈಯ ವಶ ಆಗಲಿಲ್ಲ. ಲಕ್ಷ ಕೋಟಿ ಮಾಡಿದರು ನಮ್ಮ ಆಸೆ ತಪ್ಪಲಿಲ್ಲ. ಹಣ ಆಕರ್ಷಕವೇ ವಿನಃ ನಮ್ಮನ್ನು ತೃಪ್ತಿಕೊಡಿಸುವದಿಲ್ಲ. ಇದು ಜೀವನ. ಹಣ ಭೂಮಿಗಾಗಿ ಸತ್ತವರು ಕೋಟಿ. ಪ್ರೇಮಕ್ಕಾಗಿ ಸತ್ತವರು ಕೋಟಿ. ನಿನಗಾಗಿ ಸತ್ತವರು ಒಬ್ಬರೂ ಇಲಾ ಗುಹೇಶ್ವರ ಎಷ್ಟು ಚಂದ್ ಅದ ಅಲಾ.. ಯಾವ ಕೀರ್ತಿ ಉಳಿದಾವ ಯಾವ ಹಣ ಶಾಶ್ವತವಾಗಿ ನಮಗೆ ಧಕ್ಕೆದೆ.? ಯಾರು ಅಧಿಕಾರದ ಕುರ್ಚಿ ಮೇಳೆ ಖಾಯಂ ಆಗಿ ಕುಳಿತಿದ್ದಾರ..ಹೇಳಿ.
ಭೋಜ ಎಂಬ ಬಾಲಕನ ಕಥೆ
ಭೋಜ ಎಂಬ ಹುಡುಗ ಆತನ ತಂದೆ ಒಬ್ಬ ರಾಜ. ಭೋಜ ಅತ್ಯಂತ ಬುದ್ಧಿವಂತ ಹುಡುಗ ಮುಂದೆ ರಾಜನಾಗುವ ಎಲ್ಲಾ ಲಕ್ಷಣಗಳಿದ್ದವು. ಒಂದು ದಿನ ಆತನ ತಂದೆ ಮಹಾರಾಜ ಹಾಸಿಗೆ ಹಿಡಿದ. ಆಗ ಎಲ್ಲಾ ವೈದ್ಯರು ಬಂದ್ರು ಎಲ್ಲಾ ಔಷಧಿ ಕೊಟ್ಟರು ಏನು ಆಗಲಿಲ್ಲ. ಅವನಿಗೆ ತಿಳಿಯಿತು. ಈಗ ನಾನ ಜಗತ್ತು ಬಿಡಬೇಕಾಗುತ್ತದ. ತನ್ನ ಮಗ ಭೋಜ ಇನ್ನು ಸಣ್ಣವ. ಏನ ಮಾಡಬೇಕು. ನಾನು ಅಂತು ಉಳಿಯಲ್ಲ. ಎಂದು ಚಿಂತಿ ಬಿತ್ತು. ಆಗ ಹೊಳೆಯಿತ್ತು. ಆಗ ರಾಣಿಗೆ ಕರೆದು ತನ್ನ ಜೊತೆಗಾರನಿಗೆ ಹೇಳತಾನ ಇವನಿಗೆ 20 ವರ್ಷ ಆಗುವವರೆಗೆ ಈ ರಾಜ್ಯವನ್ನು ರಕ್ಷಿಸಬೇಕು ಎಂದು ಮಾತು ತಗೊಂಡ ರಾಜ.
ಮುಂದೆ ಭೋಜನನ್ನು ರಾಜನನ್ನಾಗಿ ಮಾಡಬೇಕು. ಭೋಜ ದೊಡ್ಡವವರಾಗುವರೆಗೂ ನೀನು ರಾಜ್ಯಭಾರ ನಡೆಸಬೇಕು. ಮುಂದೆ ಅಂವ ವಯಸ್ಸಿಗೆ ಬಂದ ನಂತರ ಭೋಜನನ್ನು ರಾಜನನ್ನಾಗಿ ಮಾಡಬೇಕು ಎಂದ. ರಾಜನಿಗೆ ಮಾತು ಕೊಟ್ಟ ಆ ಮುಂಜಾ ಎಂಬ ವ್ಯಕ್ತಿ ರಾಜ್ಯಭಾರ ನಡೆಸಲು ಆರಂಭಿಸಿದ, 12 ವರ್ಷ ಇಂತಹ ರಾಜ್ಯಭಾರ ನಡೆಸಿ ಆ ಮೇಲೆ ಆ ಹುಡುಗನಿಗೆ ಕೊಡಬೇಕಲ್ಲ. ಯಾಕೆ ಆ ಹುಡುಗನನ್ನೆ ತೆಗೆದು ಬಿಟ್ಟರೆ ನಾನೇ ಕೊನೆತನಕ ರಾಜ್ಯಭಾರ ನಡೆಸಬಹುದು ಎಂಬ ವಿಚಾರ ಬಂತು.
ಒಂದು ದಿನ ನಾಲ್ಕು ಜನ ಕರೆದು, ಹುಡುಗನಿಗೆ, ಹೇಳ್ತಾನ ನೀನು ಸರೋವರ ನೋಡಿಲ್ಲ. ಅಲ್ಲಿಯ ಸೌಂದರ್ಯ ನೋಡು ಎಂದು ಪುಸಲಾಯಿಸಿ ಕಳಸ್ತಾನ.
ಹಿಂದ ಆ ನಾಲ್ಕು ಜನರಿಗೆ ಹೇಳ್ತಾನ ಆ ಹುಡುಗನಿಗೆ ಅಲ್ಲಿಯೇ ಕೊಂದ ಬರಲಾಕ ಹೇಳಿರ್ತಾನ ಆ ಮುಂಜಾ ಎಂಬ ವ್ಯಕ್ತಿ. ಈ ಹುಡುಗನಿಗೆ ನೋಡಿ ಕೊಲೆ ಮಾಡಲು ನೇಮಕಗೊಂಡ ಆ ನಾಲ್ಕು ಜನರ ಈ ಹುಡುಗ ಚಲೋ ಅದಾನ ಇಂವನೇ ಮುಂದ ರಾಜನದ್ರೆ ಚಲೋ ಅದ ಅಂದು ಆ ಹುಡುಗನಿಗೆ ಅಲ್ಲೇ ಎಲ್ಲೋ ಮುಚ್ಚಿಡ್ತೀವಿ ಬದುಕುವ ವ್ಯವಸ್ತೆ ಮಾಡಿ.
ಆ ಹುಡುಗನಿಗೆ ಹೇಳ್ತಾರ. ನಿನ್ನ ಜೊತೆ ದಿವಸ ತುಂಬಾ ನಿನ್ನ ಜೊತೆ ಸಂಚರಿಸಿ ನಿನ್ನ ಮಾತು ಕೇಳಿದ್ರ ನಮ್ಮ ಮನಸ್ಸಿನಲ್ಲಿದ್ದ ಕ್ರೌರ್ಯ ಕಡಿಮೆಯಾಯಿತು. ನಿನ್ನಗೆ ಏನು ಮಾಡಲ್ಲ. ನೀನಗೆ ಇಲ್ಲೆ ಮಠದಲ್ಲಿ ವ್ಯವಸ್ಥೆ ಮಾಡ್ತಾವಿ ಎಂದರು. ಆಗ ಭೋಜ ಹುಡುಗ ಹೇಳ್ತಾನ ನೀವು ತಪ್ಪು ಮಾಡುತ್ತಿದ್ದೀರಿ. ನೀವು ರಾಜನ ಆಜ್ಞೆ ಪಾಲಿಸಬೇಕಲ್ಲ. ನನ್ನನ್ನು ನೀವು ಮುಗಿಸಬೇಕು. ನೀವು ರಾಜನ ಆಜ್ಞೆ ಪಾಲಿಸದಿದ್ದರೆ, ನೀವು ಉಳಿಯಬೇಕಲ್ಲ. ನಿಮ್ಮ ಕರ್ತವ್ಯ ನೀವು ಮಾಡಿ ಎಂದ. ಆಗ ಆ ಕಟುಕರು ಹೇಳ್ತಾರ..ನಾವು ಸತ್ತರು ರಾಜ ನಮಗೆ ಯಾವ ಶಿಕ್ಷೆ ಕೊಟ್ರು ಪರವಾಗಿಲ್ಲ. ನೀನು ಉಳಿಯಬೇಕು. ಅವರ ಭಾವ ನೋಡಿ..
ಅವಾಗ ಆ ಹುಡುಗ ಹೇಳಿದ ನಾನೊಂದು ಪತ್ರ ಕೊಡ್ತೀನಿ ಅದನ್ನು ಒಯ್ದು ಮುಂಜಾ ಮಹಾರಾಜರಿಗೆ ಕೊಡಿ ಎಂದ. ಆಯಿತು ಎಂದು ವಾಪಸ್ ರಾಜನ ಬಳಿ ಬಂದ್ರು. ಮುಂಜಾ ರಾಜ ಕೊನೆಗೂ ಹುಡುಗ ಕಥೆ ಮುಗಿಯಿತು ಎಂದ್ಕೊಂಡ. ನಾಲ್ಕು ಜನ ಬಂದು ರಾಜನ ಎದುರು ನಿಂತ್ರು. ಹೋದ ಕೆಲಸ ಆಯಿತು..ಏನ್ ಅಂತ ಕೇಳಿದ. ಆಯಿತು ಮಹಾರಾಜರೇ ಆದರೆ ಆ ಹುಡುಗ ಭೋಜ ನಿಮಗೊಂದು ಪತ್ರ ಕೊಟ್ಟಿದ್ದಾರೆ ತಗೊಳ್ಳಿ ಎಂದು ನೀಡಿದರು.
ಆ ಪತ್ರ ಓದಿದ ಮುಂಜಾ ರಾಜ, ಅದನ್ನು ಓದ್ತಾ ಓದ್ತಾ ಮುಂಜಾ ರಾಜನ ಕಣ್ಣಲ್ಲಿ ನೀರು ಬರ್ತಾ ಇದೆ. ಭೋಜ ಎಂಬ ಬಾಲಕ ಬರೆದಿದ್ದ ನಾಲ್ಕು ಸಾಲು ಮಾತು.. ಈ ರಾಜನ ಆಸೆಯನ್ನು ಘಾಸಿ ಮಾಡಿತ್ತು. ಕೃತಯುಗದಲ್ಲಿ ಸತ್ಯಯುಗದಲ್ಲಿ ಮಹಾರಾಜ ಇಡಿ ಜಗತ್ತನ್ನೆ ಆಲಿದ ಅದ್ಭುತ ರಾಜ ಆದರೂ ಹೋದ ಬಿಟ್ಟು. ಅಂತಹ ಕೀರ್ತಿವಂತ ಬಲಿಶಾಲಿಯಾದ ಆ ರಾಜ ಹೋದ. ಈ ಭೂಮಂಡಲದಲ್ಲಿ ಶ್ರೀರಾಮ ನಂತ ಮಹಾರಾಜರು ಬಂದ್ರು, ಇಂತಹ ಮಹಾರಾಜರು ಸಾಕಷ್ಟು ಜನ ಯುಗಯುಗಕ್ಕೆ ಬಂದು ಹೋದರು. ಆದರೆ ಭೂಮಿ ಎಲ್ಲೂ ಹೋಗಲ್ಲ. ನೀನು ಒಂದು ದಿನ ಹೋಗ್ತಿದಿ. ಆದರೆ ವಸುಮತಿ ಸಂಪದ್ಭರಿತ ಕೋಟ್ಯಂತರ ವರ್ಷಗಳಿಂದ ಇದು ಇಲ್ಲೆ ಇದ. ಎಂತಹ ಎಂತಹ ಪಾಂಡವರು, ರಾಮನಂತವರು ಹೋದರು. ನೀನು ಕೂಡ ಹಾಗೇ ಹೋಗ್ತೀಯ ಅಷ್ಟೆ..ಯಾರು ಇಲ್ಲಿ ಶಾಶ್ವತವಾಗಿ ಇರೋಕ ಬಂದಿಲ್ಲ.
ನಂದು ಅಂದೋರೆಲ್ಲ ಹೋಗ್ಯಾರ ಇದು ಇಲ್ಲೆ ಉಳಿದದ. ನಾಲ್ಕು ದಿವಸ ನಮ್ದು ಅನ್ನೋದ ಅದ ಆ ಮೇಲೆ ಖಾಲಿ ಮಾಡಿ ಹೋಗೋದ ಅದ. ಆಗ ಮುಂಜಾನ ಕಣ್ಣಿನಲ್ಲಿ ನೀರು ಬಂದು ಕೇಳ್ತಾನ..ಅಯ್ಯೋ ಆತನನ್ನು ಮುಗಿಸಿ ಬಂದ್ರೇನು ಅಂತ ಕೇಳ್ತಾನ.. ಆಗ ಇಲ್ಲಾ ಮಹಾರಾಜರೇ ನಮಗೆ ಶಿಕ್ಷೆ ಕೊಡಿ ಅಂತಾರ..ಇಲ್ಲಾ ಅವನನ್ನ ಕರೆದುಕೊಂಡು ಬನ್ನಿ ಆತ ನನ್ನ ಗುರು ಈಗ ಕಣ್ಣು ತೆರೆಸಿದ ಗುರು..ಎಂತಹ ಸತ್ಯ ಜ್ಞಾನ 8 ವರ್ಷಕ್ಕೆ ಎಂತಹ ನಿರ್ಲಿಪ್ತ ಮನೋಭಾವ, ಅಂತಾನೆ ಮುಂಜ ಮಹಾರಾಜ.. ಅದೇ ಭೋಜ ಮುಂದೆ ಕಾಳಿದಾಸ ಬೋಜ ವಿಕ್ರಮ ರಾಜನಾಗುತ್ತಾನೆ.
ಅದಕ ಬಹಳ ತಲೆ ಕೆಡಿಸಿಕೊಳ್ಳಬಾರದು ನಿರ್ಲಿಪ್ತತೆಯಿಂದ ನಿಶ್ಚಿಂತೆಯಿಂದ ಸಮಧಾನವಾಗಿ ಇರೋದನ್ನ ಕಲಿಯಬೇಕು. ಚಿಂತಾಮುಕ್ತಿಯಾಗಿರಬೇಕು. ತ್ಯಾಗಿ, ತಪಸ್ಸಾಗಿರಬೇಕು ಮನುಷ್ಯನ ಬದುಕು. ಬಂದದ್ದೆಲ್ಲ ಹೋಗುವುದು ಜಗತ್ತಿನ ಸ್ವರೂಪ ಎಂದು ಹೇಳಿದರು.