ಮಗು ಹೆತ್ತ ಕ್ವಾರಂಟೈನ್‍ನಲ್ಲಿದ್ದ ಗರ್ಭೀಣಿ ಮಹಿಳೆ
ಶಹಾಪುರಃ ಮಗುವಿಗೆ ಜನ್ಮ ನೀಡಿದ ವಲಸೆ ಮಹಿಳೆ
ಶಹಾಪುರಃ ಗೂಳೆ ಹೋಗಿದ್ದ ಮಹಿಳೆಯೋರ್ವಳು ಈಚೆಗೆ ಸ್ವಗ್ರಾಮಕ್ಕೆ ಬಂದಿದ್ದು, ಕೊರೊನಾ ತಪಾಸಣೆ ಮುಗಿಸಿ ತಾಲೂಕಿನ ಚಾಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್‍ನಲ್ಲಿದ್ದ ಗರ್ಭೀಣಿ ಮಹಿಳೆ ಮಗುವನ್ನು ಹೆತ್ತಿದ್ದಾಳೆ. ಮಗು ಮತ್ತು ತಾಯಿ ಇಬ್ಬರ ಆರೋಗ್ಯ ಸದೃಢವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ.
ಕಳೆದ ನಾಲ್ಕೈದು ವರ್ಷದಿಂದ ಹೊಟ್ಟೆ ಪಾಡಿಗಾಗಿ ತಾಲೂಕಿನ ದೊರಿಗುಡ್ಡ ತಾಂಡಾದ ಮಹಿಳೆ ಶಿವುಬಾಯಿ ಗಂಡ ಸುನೀಲ್ ಮಹಾರಾಷ್ಟ್ರದ ಬಾಂಬೆಯಲ್ಲಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ ಕೊರೊನಾ ಹಾವಳಿಯಿಂದಾಗಿ ಪರಿತಪಿಸಿದ್ದು, ವಾಪಸ್ ಸ್ವಗ್ರಾಮಕ್ಕೆ ಆಗಮಿಸಿದ್ದರು. ಮರಳಿ ಗೂಡಿಗೆ ಆಗಮಿಸುವ ವೇಳೆ ತಾಲೂಕಿನ ಆರೋಗ್ಯ ಇಲಾಖೆಯ ಕೊರೊನಾ ತಪಾಸಣೆಗೆ ಒಳಪಟ್ಟಿದ್ದು, ಮಹಿಳೆ ಶಿವುಬಾಯಿ ಗರ್ಭೀಣಿ ಇರುವದರಿಂದ ಚಾಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಮಹಿಳೆ ಹೆರಿಗೆಯಾಗಿದ್ದು, ಹೆರಿಗೆಯನ್ನು ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಅನಿತಾ ಹಾಗೂ ಆಶಾ ಕಾರ್ಯಕರ್ತೆ ತಾರಾಬಾಯಿ ಹಾಗೂ ಸಿಬ್ಬಂದಿ ವೈದ್ಯಾಧಿಕಾರಿಗಳ ಸೂಕ್ತ ಮಾರ್ಗದರ್ಶನದ ಮೇಲೆ ಹೆರಿಗೆ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯದಿಂದದ್ದಾರೆ ಎಂದು ಅವರು ತಿಳಿಸಿದ್ದಾರೆ.