ಪ್ರಮುಖ ಸುದ್ದಿ

ವೀಕೆಂಡ್ ಕರ್ಫ್ಯೂ ಮುಂದುವರಿಕೆ‌ ಸಾಧ್ಯತೆ.? ಬೆಂಗಳೂರ ಲಾಕ್.?

ವೀಕೆಂಡ್ ಕರ್ಫ್ಯೂ ಮುಂದುವರಿಕೆ‌ ಸಾಧ್ಯತೆ.? ಬೆಂಗಳೂರ ಲಾಕ್.?

ಬೆಂಗಳೂರುಃ ಕೊರೊನಾ‌ ಆರ್ಭಟ ತಡೆಗಾಗಿ‌ ಸಂಪೂರ್ಣ ಲಾಕ್ ಡೌನ್ ಮಾಡಬೇಕಾ.? ಬೇಡ್ವಾ ಅಥವಾ ವೀಕೆಂಡ್ ಕರ್ಫ್ಯೂಗೆ‌ ಮಾತ್ರ ಜಾರಿಗೊಳಿಸಬೇಕಾ.? ಎಂಬ ಕುರಿತು ಕ್ಯಾಬಿನೆಟ್ ಮೀಟಿಂಗ್ ನಲ್ಲಿ‌ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಇಷ್ಟರಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ. ಒಂದು ವಾರ ಲಾಕ್ ಡೌನ್ ಗೊಳಿಸಬೇಕಾ‌.? ಅಥವಾ ಬರಿ ವೀಕೆಂಡ್ ಕರ್ಫ್ಯೂ ಮಾತ್ರ ಸಾಕಾ.? ಕೊರೊನಾ ತೀವ್ರತೆ ಕುರಿತು ಎಲ್ಲೆಡೆಯಿಂದ‌ ಅಮರ್ಪಕ ಮಾಹಿತಿಯನ್ನು ಸಿಎಂ ಪಡೆಯುತ್ತಿದ್ದು, ಬಹುತೇಕ ವಾರಪೂರ್ತಿ ಕರ್ಫ್ಯೂ ಜಾರಿಗೊಳಿಸುವ ಸಂಭವ‌ ಕಂಡು ಬರುತ್ತದೆ ಎನ್ನಲಾಗಿದೆ.

ಕಾರಣ ಆಕ್ಸಿಜನ್, ಐಸಿಯು, ಬೆಡ್ ಸಮಸ್ಯೆ ಹೆಚ್ಚಾಗಿದ್ದು ಅದೆಲ್ಲ‌ ನಿಯಂತ್ರಣಕ್ಕೆ‌ ವಾರಕಾಲ ಲಾಕ್ ಡೌನ ಸಾಧ್ಯ ಎಂಬ ವಿಚಾರಕ್ಕೆ ಬರುವ ಸಾಧ್ಯತೆ‌ ಇದೆ.

ಸಭೆಯಲ್ಲಿ‌ ಎಲ್ಲಾ ಅಂಗಡಿ‌‌ ಮುಂಗಟ್ಟು ಗಳು‌ಬಂದ್ ಮಾಡಿಸುವದು ಅಗತ್ಯ‌ವಸ್ತುಗಳ‌ ಖರೀದಿಗೆ ಕೇವಲ‌ಎರಡು ತಾಸು ಮೀಸಲಿಡಬೇಕು. ಆ ಸಮಯದಲ್ಲೂ ಜನರನ್ನು ಕಂಟ್ರೋಲ್‌ ‌ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಬೆಂಗಳೂರ ಪೂರ್ಣ ಲಾಕ್ ಮಾಡುವ ಸಾಧ್ಯತೆ. ಅಗತ್ಯ ವಸ್ತುಗಳ‌ ಖರೀದಿಗೆ ಎರಡು ತಾಸು ಅವಕಾಶ ಮಾತ್ರ.‌ ಬೆಂಗಳೂರಿನಲ್ಲಿ‌ ಬೆಳಗ್ಗೆ ಎಂಟುಗಂಟೆಯೊಳಗೆ ಮಾತ್ರ ಅಗತ್ಯ ವಸ್ತುಗಳ‌ ಖರೀದಿಗೆ ಅವಕಾಶ ಎನ್ನಲಾಗಿದೆ. ಕ್ಯಾಬಿನೆಟ್ ಮೀಟಿಂಗ್ ನಲ್ಲಿ‌ ಸಾಕಷ್ಟು ವಿಚಾರಗಳು ಕೇಳಿ ಬರುತ್ತಿದ್ದು,‌ವಿವಿಧ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ತಜ್ಞರ ಸಲಹೆ ಮೆರೆಗೆ ಕೊರೊನಾ ತೀವ್ರತೆ ತಡೆಗೆ ಸಮಗ್ರ ವಿಷಯಗಳನ್ನು ಚರ್ಚಿಸ ಸರ್ಕರ‌ ನಿರ್ಧಾರಕ್ಕೆ  ಬರಲಿದೆ.

ಸಾರ್ವಜನಿಕರ ಸಹಕಾರ ಇದಕ್ಕೆಲ್ಲ ಮುಖ್ಯವೆಂದು ಸಿಎಂ ಬಿಎಸ್ ವೈ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಾವುದೇ ನಿರ್ಧಾರ ನಾಗರಿಕರ ಆರೋಗ್ಯ ಕಾಪಾಡುವದಾಗಿದೆ ಎಲ್ಲರೂ ಸಹಕಾರ ನೀಡಬೇಕೆ ಜಾಗೃತಿವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ

Related Articles

Leave a Reply

Your email address will not be published. Required fields are marked *

Back to top button