ಪ್ರಮುಖ ಸುದ್ದಿ
ಗುಡ್ಡಗಾಡಿನಿಂದ ನಗರಕ್ಕೆ ಬಂದ ಹೆಬ್ಬಾವುಃ ಭಯಗೊಂಡ ಜನತೆ ಬೆಂಕಿ ಇಟ್ಟರಾ.?
ಯಾದಗಿರಿಃ ನಗರದ ಗುಡ್ಡಗಾಡಿನಿಂದ ಕೋಟಗಾರ ಬಡಾವಣೆಯ ಹೊರವಲಯದ ಮನೆಯೊಂದ ಸಮೀಪ ಮಂಗಳವಾರ ರಾತ್ರಿ ಕಾಣಿಸಿಕೊಂಡ ಹೆಬ್ಬಾವನ್ನು ಬಡಾವಣೆಯ ಜನರು ಭಯಭೀತರಾಗಿ ಅದಕ್ಕೆ ಬೆಂಕಿ ಇಟ್ಟು ಕೊಂದ ಘಟನೆ ನಡೆದಿದೆ.
ನಗರದ ಇದೇ ಬಡಾವಣೆಯಲ್ಲಿ ಎರಡನೇ ಬಾರಿ ಕಾಣಿಸಿಕೊಂಡ ಹೆಬ್ಬಾವನ್ನು ಕಂಡು ಜನ ಭಯಗೊಂಡಿದ್ದಾರೆ. ಸಮೀಪದ ಮನೆಯೊಂದರ ಹತ್ತಿರ ಬಂದ ಹೆಬ್ಬಾವು, ಆ ಮನೆಯಲ್ಲಿ ಚಿಕನ್ ಮಾಡಿರುವ ವಾಸನೆಗೆ ಬಂದಿರಬಹುದು ಎನ್ನಲಾಗಿದೆ.
ಗುಡ್ಡದಲ್ಲಿ ಹಸಿವು ತಣಿಸಿಕೊಳ್ಳಲಾಗದ ಹೆಬ್ಬಾವು ತನ್ನ ಹಸಿವು ತಣಿಸಿಕೊಳ್ಳಲು ಆಹಾರಕ್ಕಾಗಿ ಇತ್ತ ಬಂದಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿ ಸಮಯವಾದ್ದರಿಂದ ಜನತೆ ಭಯಗೊಂಡು ಹೆಬ್ಬಾವಿಗೆ ಡಿಸೇಲ್ ಹಾಕಿ ಬೆಂಕಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.