ಪ್ರಮುಖ ಸುದ್ದಿ

ಚಂಡ ಮಾರುತ ತೌತೆಗೆ ಮುಂಬೈ ತತ್ತರ, 22 ಸಾವು, 53 ಜನರ ಸುಳಿವಿಲ್ಲ

ಚಂಡ ಮಾರುತ ತೌತೆಗೆ ಮುಂಬೈ ತತ್ತರ, 22 ಸಾವು, 53 ಜನರ ಸುಳಿವಿಲ್ಲ

ಮುಂಬೈಃ ತೌತೆ ಚಂಡಮಾರುತ ಅಬ್ಬರಕ್ಕೆ ಮುಂಬೈ ನಲುಗಿ ಹೋಗಿದೆ. ಪಿ-305 ಬಾರ್ಜ್(ನೌಕೆ) ನಲ್ಲಿದ್ದ 22 ಮಂದಿ ಮೃತಪಟ್ಟಿದ್ದಾರೆ.‌ ಇನ್ನೂ 53 ಜನರು‌ ಸುಳಿವೆ ಸಿಕ್ಕಿಲ್ಲ. 22 ಸಿಬ್ಬಂದಿಯ‌ ಮೃತದೇಹಗಳನ್ನು ಕೊಚ್ಚಿ‌ ಸಮರ ನೌಕೆಯು ಬುಧವಾರ ಮುಂಬೈ ಬಂದರಿಗೆ ತಂದಿದೆ.

ಭಾರತದ ಸಾರ್ವಜನಿಕ ವಲಯದ ತೈಲಶೋಧ ಕಂಪನಿ ಒಎನ್ ಜಿಸಿ ನಾಲ್ಕು ಹಡಗುಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿತ್ತು. ಈ ನಾಲ್ಕು ನೌಕೆಗಳು ಅಪಾಯಕ್ಕೆ ಸಿಲುಕಿದ್ದವು. ಇದರಲ್ಲಿ ಪಿ-303 ನೌಕೆಯಲ್ಲಿದ್ದ 261 ಸಿಬ್ಬಂದಿ ಪೈಕಿ 186 ಜನರನ್ನು ರಕ್ಷಣೆ ಮಾಡಲಾಗಿದೆ ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ತೌತೆ ಮಾರುತ ಹೊಡೆತಕ್ಕೆ ಮುಂಬೈ ತತ್ತರ

ಚಂಡ ಮಾರುತ ಹೊಡೆತಕ್ಕೆ ಇಡಿ ಮುಂಬೈ ನಲುಗಿದೆ. ಗಾಳಿ,‌ ಮಳೆ ರಭಸಕ್ಕೆ ಸಾವಿರಾರು ಗಿಡಮರಗಳು ನೆಲಕ್ಕುರುಳಿವೆ. ಸಾವಿರಾರು ಮನೆಗಳು ನೆಲಕಚ್ಚಿವೆ. ನೂರಾರು ಸಾವು ನೋವುಗಳು ಸಂಭವಿಸಿವೆ. ಸಮುದ್ರ ದಡ‌ ಸಣ್ಣ ಸಣ್ಣ ವ್ಯಾಪಾರಿಗಳ‌ ಗೂಡಂಗಡಿಗಳು ನೀರು-ಗಾಳಿ ಪಾಲಾಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button