ಪ್ರಮುಖ ಸುದ್ದಿ
ಹೈಟೆನ್ಷನ್ ವಿದ್ಯುತ್ ಕಂಬ ಏರಿ ಕುಳಿತ ವ್ಯಕ್ತಿ !
ಕಲಬುರಗಿ : ಜಿಲ್ಲೆಯ ಜೇವರಗಿ ತಾಲೂಕಿನ ಲಕಣಾಪುರ ಗ್ರಾಮದ ಬಳಿಯ ವಿದ್ಯುತ್ ಕಂಬ ಏರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಮಾರಡಗಿ ಗ್ರಾಮದ ನಿವಾಸಿ ಜಗನ್ನಾಥ್ ಹೂಗಾರ ಎಂಬ ವ್ಯಕ್ತಿ ಹೈ ಟೆನ್ಷನ್ ವಿದ್ಯುತ್ ತಂತಿ ಇರುವ ಕಂಬ ಏರಿ ಆತ್ಮಹತ್ಯೆಗೆ ಯತ್ನಸಿದ್ದು ಕೆಲ ಕಾಲ ಆತಂಕ ಸೃಷ್ಠಿಸಿದ್ದ. ಸ್ಥಳೀಯರು ಜಗನ್ನಾಥನನ್ನು ಕೆಳಗಿಳಿಸಲು ಪ್ರಯತ್ನಿಸಿ ಜೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳಿಹೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಜಗನ್ನಾಥನನ್ನು ಕೆಳಗಿಳಿಯುವಂತೆ ಮನವೊಲಿಸಿದ್ದಾರೆ. ಸುಮಾರು 2 ತಾಸುಗಳ ಪ್ರಹಸನದ ಬಳಿಕ ಜಗನ್ನಾಥನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.