ಶರಣರ ಸಾಂಸ್ಕøತಿಕ ಚಿಂತಕ-ಮಹಾತ್ಮ ಶ್ರೀಚರಬಸವೇಶ್ವರ
–ರಾಘವೇಂದ್ರ ಹಾರಣಗೇರಾ
ಕರ್ನಾಟಕದಾದ್ಯಂತ ಬಹಳಷ್ಟು ಸಂಖ್ಯೆಯಲ್ಲಿಮಠಗಳನ್ನು, ಗುರುಗಳನ್ನು ಕಾಣುತ್ತೇವೆ. ಜನ ಸೇವೆಯೇಪರಮಾತ್ಮನ ಸೇವೆ ಎಂಬುದು ಮಠ ಮಾನ್ಯಗಳ ಉದ್ದೇಶ. ಮಠ ಮಾನ್ಯಗಳು ನಡೆಸಿದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಜಾಗೃತಿಯ ಕಾರ್ಯ ಅತ್ಯಂತ ಪ್ರಮುಖವಾಗಿದೆ. ಮಾನವ ಸಮಾಜದಲ್ಲಿ ಯಾವ ತಾರುತಮ್ಯ ಭಾವವಿಲ್ಲದೆ ಸರ್ವರಿಗೂ ಸರ್ವವೂ ಪ್ರಾಪ್ತವಾಗಬೇಕೆಂಬ ಮಹಾದಾಸೆಯಿಂದ ಸಮಾಜದಲ್ಲಿ ನವಚೇತನವನ್ನು ನೀಡಿದ ಶ್ರೇಯಸ್ಸು ಮಠ ಮಾನ್ಯಗಳಿಗೆಸಲ್ಲಬೇಕು.
ಇಂತಹಆಧ್ಯಾತ್ಮಿಕ ಮಠ, ಮಾನ್ಯಗಳು ಧಾರ್ಮಿಕ,ಸಾಂಸ್ಕøತಿಕ ಮೌಲ್ಯಗಳ ಬೋಧನೆ ಮತ್ತುಜ್ಞಾನ ಪ್ರಸಾರಮಾಡುವ ಆಧ್ಯಾತ್ಮಿಕಕೇಂದ್ರವಾಗಿರುತ್ತವೆ. ಇವು ಶರಣರ,ಸಂತರ, ಆಧ್ಯಾತ್ಮಿಕ ಸಾಧಕರಆಶ್ರಯತಾಣವಾಗಿರುವಂತೆ, ಹಸಿದುಬಂದಜನರಿಗೆ, ಯಾತ್ರಾರ್ಥಿಗಳಿಗೆ, ಅನಾಥರಿಗೆ, ನಿರ್ಗತಿಕರಿಗೆಅನ್ನಛತ್ರವೂ ಹೌದು. ವಿದ್ಯಾರ್ಥಿಗಳ ಪಾಠ ಶಾಲೆಯೂ ಹೌದು.ಇಂತಹಹತ್ತು ಹಲವು ಸಾಂಸ್ಕøತಿಕ ಪರಂಪರೆಯ ಮುಂದುವರಿಕೆಯಹಾಗೂ ಉಳಿಸಿ ಬೆಳೆಸುವ ಮಹತ್ತರಉದ್ದೇಶಕ್ಕಾಗಿಯೇಮಠಮಾನ್ಯಗಳು ಹುಟ್ಟಿಕೊಂಡುಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾದುದ್ದು.
ಈ ಹಿನ್ನೆಲೆಯಆಧ್ಯಾತ್ಮಿಕ ತಾಣಗಳಲ್ಲಿ, ಮಠಗಳಲ್ಲಿ ಯಾದಗಿರಿಜಿಲ್ಲೆಯ ಸಗರನಾಡಿನ ಮುಕುಟ ಮಣಿಯಾಗಿರುವ ಶಹಾಪುರದ ಶ್ರೀ ಚರಬಸವೇಶ್ವರಗದ್ದುಗೆಯುಒಂದಾಗಿದೆ.ಚರಬಸವೇಶ್ವರರನೇತೃತ್ವದಲ್ಲಿಆಧ್ಯಾತ್ಮಿಕ, ಧಾರ್ಮಿಕ, ಶರಣರ ಸಾಂಸ್ಕøತಿಕಪರಂಪರೆಗೆ ನಾಂದಿ ಹಾಡಿದ ಈ ಆಧ್ಯಾತ್ಮಿಕಕ್ಷೇತ್ರ ನಾಡಿನ ಪುಣ್ಯಕ್ಷೇತ್ರವಾಗಿ ಪರಣಮಿಸಿದೆ.
ಸೋಹಂ ಎಂದೆನಿಸದೆ, ದಾಸೋಹಂಎಂದೆನಿಸಯ್ಯ ಎಂಬ ಶರಣರ ವಾಣಿಯನ್ನುಅಕ್ಷರಶ: ಪಾಲಿಸುತ್ತಿರುವಈ ಆಧ್ಯಾತ್ಮಿಕಕೇಂದ್ರದಲ್ಲಿ ಬಂದ ಭಕ್ತರಿಗೆ ನಿತ್ಯಅನ್ನದಾಸೋಹಮತ್ತುಜ್ಞಾನದಾಸೋಹ ನಡೆಯುತ್ತಿದೆ. ಆಚಾರ ನಿಷ್ಠೆಯನ್ನುತರುವಲ್ಲಿ ಪ್ರಮುಖ ಪಾತ್ರವಹಿಸಿದೆ.ಈ ಕಾಯಕ, ಆಧ್ಯಾತ್ಮಿಕ,ಅನ್ನದಾಸೋಹದ ಶರಣ ಸಂಸ್ಕøತಿಯ ಪರಂಪರೆಗೆನಾಂದಿಯಾಡಿದವರುಆಧ್ಯಾತ್ಮಿಕಚೇತನ, ಶರಣ ಸಂಸ್ಕ್ರತಿಯಮೌಲ್ಯಗಳ ಪ್ರಚಾರಕ ಮಹಾತ್ಮಚರಬಸವೇಶ್ವರರು.
ಎನಗಿಂತಕಿರಿಯರಿಲ್ಲ, ಶಿವಭಕ್ತರಗಿಂತಹಿರಿಯರಿಲ್ಲ ಎಂಬಹಿರಿಗುಣವನ್ನು ಹೊಂದಿದ್ದ ಶ್ರೀ ಚರಬಸವೇಶ್ವರರು ಸರ್ವವೂಶಿವಾರ್ಪಣಮಸ್ತು ಎಂಬ ಭಾವ, ನಡೆ-ನುಡಿ, ನಂಬಿಕೆ ಈ ಮೂರರತ್ರೀವೇಣಿ ಸಂಗಮವಾಗಿದ್ದರು.ಭಕ್ತರ ಬದುಕಿನ ಸಾರ್ಥಕತೆಗಾಗಿ,ಉದ್ದಾರಕ್ಕಾಗಿ, ಅವರ ಒಳತಿಗಾಗಿ ತಮ್ಮಬದುಕನ್ನುಮುಡುಪಾಗಿಟ್ಟಿದ್ದಚರಬಸವರು ಶಹಾಪುರತಾಲ್ಲೂಕಿನ ಅನವಾರ ಗ್ರಾಮದಲ್ಲಿ ಶೀಲವಂತಯ್ಯ ಹಾಗೂ ಶ್ರಿಮತಿ ಅವ್ವಮ್ಮ ಎಂಬಸುಸಂಸ್ಕøತ ಶರಣ ದಂಪತಿಗಳ ಉದರದಲ್ಲಿಕ್ರಿ.ಶ. 1822 ರಲ್ಲಿಜನಿಸಿದರು.
ಬಾಡಿಯಾಳದ ಚನ್ನ ಶಿವಾಚಾರ್ಯರು ಮಗುವಿಗೆ ಬಸ್ಸಯ್ಯಎಂದು ನಾಮಕರಣ ಮಾಡಿ ಮಗುವಿನ ಶ್ರೇಷ್ಠ ಬೆಳವಣಿಗೆಗೆಆಶೀರ್ವದಿಸಿದರು.ಬಾಲ್ಯದಲ್ಲಿಯೇಧಾರ್ಮಿಕ, ಆಧ್ಯಾತ್ಮಿಕ, ಪುರಾಣ,ಪೂಜೆ, ಪುನಸ್ಕಾರಗಳಿಗೆ, ಶರಣರ ವಿಚಾರಗಳಿಗೆ ಹೆಚ್ಚುಒಲವನ್ನು ಹೊಂದಿದ್ದ ಬಸ್ಸಯ್ಯನವರು ಬದುಕಿಗಾಗಿ ಜವಳಿವ್ಯಾಪಾರದಲ್ಲಿ ತೊಡಸಿಕೊಂಡಿದ್ದರು.
ಈ ವ್ಯಾಪಾರದಿಂದ ಬಂದಆದಾಯದಲ್ಲಿತನ್ನ ಸಂಸಾರಿಕಜೀವನಕ್ಕಾಗಿ ಸ್ವಲ್ಪ ಉಳಿಸಿಕೊಂಡುಉಳಿದಿದ್ದನ್ನು ದಾಸೋಹಕಾರ್ಯಕ್ಕೆ ವ್ಯಯ ಮಾಡುತ್ತಿದ್ದರು.ಪತ್ನಿ ಶ್ರೀಮತಿ ಸೂಗಮ್ಮ ಪತಿಯಎಲ್ಲಾಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದಳು.ವಿಚಾರದಲ್ಲಿ ಶುದ್ದಿ, ಆಚರದಲ್ಲಿ ಭಕ್ತಿ, ಕೃತಿಯಲ್ಲಿ ನಿಷ್ಠೆ,ಫಲದಲ್ಲಿ ನಿರಾಪೇಕ್ಷೆಯನ್ನು ತಾಳುತ್ತ ಆಧ್ಯಾತ್ಮಿಕಕಾಯಕದಾಸೋಹ ಸೇವೆಯ ದಿಕ್ಷೆಯನ್ನುತೊಟ್ಟಿದ್ದ ಬಸಯ್ಯ ಶರಣರು ಶಹಾಪುರ, ಸುರಪುರ, ಜೇವರ್ಗಿತಾಲ್ಲೂಕಿನ ಹಲವಾರುಹಳ್ಳಿಗಳನ್ನು ಸುತ್ತುತ್ತ ಜವಳಿ ವ್ಯಾಪಾರ ಮಾಡಿತ್ತಿದ್ದರು.ಆದರಿಂದ್ದ ಬಸಯ್ಯ ಶರಣರಿಗೆಜನರುಚರಬಸವ ಎಂದು ಕರೆಯತೊಡಗಿದ್ದರು. ಮುಂದೆ ಇದೆ ಹೆಸರೇ ಜನಪ್ರಿಯವಾಯಿತು.
ಜವಳಿ ವ್ಯಾಪಾರ ಮಾಡಲು ಹಳ್ಳಿಗಳಿಗೆ ಹೋದಾಗಜನರಿಗೆ ಶರಣರ ವಿಚಾರಗಳನ್ನು ಹಾಗು ಆಧ್ಯಾತ್ಮಿಕಚಿಂತನೆಗಳನ್ನು ಅಳವಡಿಸಿಕೊಂಡು ಬದುಕು ಸಾರ್ಥಕಮಾಡಿಕೊಳ್ಳಬೇಕೆಂದು ಬೋಧಿಸುತ್ತಿದ್ದರು. ಲಿಂಗ, ಜಂಗಮದಾಸೋಹ ಕಾರ್ಯಗಳನ್ನು ನಡೆಸುತ್ತಾಧರ್ಮಜಾಗೃತಿಯನ್ನು ಮೂಡಿಸುತ್ತಿದ್ದರು. ಇದರಿಂದಚರಬಸವೇಶ್ವರರು ಭಕ್ತರಅಪಾರ ಪ್ರೀತಿ ವಿಶ್ವಾಸಗಳಿಗೆಪಾತ್ರರಾದರು, ಎಲ್ಲರಿಗೂ ಬೇಕಾದ ಶರಣ, ಸಂತರಾದರು.
ಯಾವುದೇಜಾತಿ, ಜನಾಂಗ, ಪಂಥ, ಪಂಗಡಬೇದ ಮಾಡದೇ‘ಮನುಷ್ಯಜಾತಿಒಂದೇವಲಂ’ಎಂಬಂತಹವಾತಾವರಣವನ್ನುನಿರ್ಮಾಣಮಾಡಿದರು.ಭಕ್ತರ ವಾತ್ಸಲ್ಯ ಮೂರ್ತಿಗಳಾಗಿ, ಶ್ರೇಷ್ಠಕಾಯಕಯೋಗಿಯಾದರು.ಭಕ್ತರೊಂದಿಗೆ ಸಮರಸವಾಗಿಬೆರೆಯುವ ಸ್ವಭಾವ, ನೊಂದವರ ಬಗ್ಗೆ, ದುರ್ಬಲರ ಬಗ್ಗೆ,ಧೀನದಲಿತರಕುರಿತುಅಪಾರಕರುಣೆ ಹೊಂದಿದ್ದಚರಬಸವರುಸರಳ ಸಜ್ಜನಿಕೆಯ, ವಿನಯಶೀಲ, ಸೌಜನ್ಯಮೂರ್ತಿಗಳಾಗಿದ್ದರು. ಭಕ್ತರಯೋಗಕ್ಷೇಮವನ್ನು ವಿಚಾರಿಸುತ್ತ ಮಾತೃಹೃದಯದಿಂದಕರುಣೆಯಿಂದ ಸಂತೈಸುತ್ತಿದ್ದರು.
‘
ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ ಎಂದೆನಸಯ್ಯ ಎನ್ನುವ ಬಸವಣ್ಣನವರ ಹೃದಯ ವೈಶಾಲ್ಯವನ್ನು ಹೊಂದಿದ್ದರು. ಎಲ್ಲರನ್ನು ಮಾತೃ ವಾತ್ಸಲ್ಯದಿಂದ, ಮಮತೆಯಿಂದಕಾಣುತ್ತಿದ್ದಚರಬಸವೇಶ್ವರರುತಮ್ಮಆಧ್ಯಾತ್ಮಿಕ ವಿಚಾರಗಳ ಮೂಲಕಭಕ್ತರ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ನಾಡಿನಲ್ಲಿಆಧ್ಯಾತ್ಮಿಕಜ್ಞಾನಜ್ಯೋತಿಯಾಗಿ ಬೆಳಗಿದ ಚರಬಸವೇಶ್ವರರುಶರಣರಕಾಯಕ, ದಾಸೋಹ ಪರಂಪರೆಯನ್ನು,ತತ್ವಗಳನ್ನು, ಮೌಲ್ಯಗಳನ್ನು ತಮ್ಮ ಬದುಕು ಮತ್ತುಕಾರ್ಯಗಳಲ್ಲಿ ಒಂದಾಗಿಸಿದ್ದ ಅವರು 1922 ರಲ್ಲಿ ಇಹ ಲೋಕವನ್ನುತ್ಯಜಿಸಿ ಲಿಂಗೈಕ್ಯರಾದರು.
ಬಡವ ಬಲ್ಲಿದರಾಗಿ ಸಂಸ್ಕಾರಗೊಂಡು ಭಕ್ತರಕುಲದಶ್ರೇಷ್ಠತೆಗೆ ಶ್ರಮಿಸಿದ ಶ್ರೀ ಚರಬಸವೇಶ್ವರರ ಹೆಸರಿನಲ್ಲಿಯೇಇಂದಿಗೂ ಚರಬಸವೇಶ್ವರರಗದ್ದುಗೆಎಂದು ಸಗರನಾಡಿನಲ್ಲಿಮಹತ್ವದಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕøತಿಕತಾಣವಾಗಿ ಪರಿಣಮಿಸಿದೆ.ಚರಬಸವೇಶ್ವರರತತ್ವ ವಿಚಾರಗಳನ್ನು, ಕಾರ್ಯಗಳನ್ನುಮುಂದುವರಿಸಿಕೊಂಡು ಬಂದ ಶ್ರೀ ಮಹಾಲಿಂಗಯ್ಯ ಶರಣರು ಸರಳ ಸದುವಿನಯ ಶೀಲಸಂಪನ್ನರಾಗಿದ್ದರು.
ಮನೆಗೆದ್ದು ಮಾರುಗೆಲ್ಲುಎನ್ನುವಮಾತಿನಂತೆಅರ್ಥಪೂರ್ಣ ಸಂಸಾರಿಕಜೀವನವನ್ನು ಸಾಗಿಸುತ್ತಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುತ್ತ ಚರಬಸವೇಶ್ವರ ಗದ್ದುಗೆಯಧಾರ್ಮಿಕ, ಕಾಯಕ, ದಾಸೋಹಕಾರ್ಯದಲ್ಲಿಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಮಹಾಲಿಂಗಯ್ಯ ಶರಣರು ಲಿಂಗೈಕ್ಯೆಯ ನಂತರಅವರ ಸುಪುತ್ರ ಬಸಯ್ಯ ಶರಣರು ಚರಬಸವೇಶ್ವರಗದ್ದುಗೆ ಸಂಸ್ಥಾನದ ಜವಾಬ್ದಾರಿಯನ್ನು ಹೊತ್ತುಕೊಂಡರು.
ತಂದೆಯಿಂದ ಉತ್ತಮ ಸಂಸ್ಕಾರವನ್ನುಪಡೆದುಕೊಂಡಿದ್ದ ಶ್ರಿ ಬಸವಯ್ಯ ಶರಣರು ಹಿರಿಯರು ಮಾಡಿದಶ್ರೇಷ್ಠ ಕಾರ್ಯಗಳಿಗೆ, ಸಾಧನೆಗಳಿಗೆ ದಕ್ಕೆ ಬಾರದಂತೆಗದ್ದುಗೆಯಧಾರ್ಮಿಕ, ಸಾಂಸ್ಕøತಿಕ, ಸಾಹಿತ್ಯಿಕ, ಸಂಗೀತ,ಶೈಕ್ಷಣಿಕ ಚಟುವಟಿಕೆಗಳ ಮೂಲಕ ರಚನಾತ್ಮಕಕಾರ್ಯಗಳಿಗೆ ನಾಂದಿಯಾಡಿದರು.
‘ಧರ್ಮದ ಕಾರ್ಯಗಳನ್ನುಸಾಂಗವಾಗಿ ನೆರೆವೇರಿಸಿರಿ. ನಾವುನಿಮ್ಮ ನಾಲಿಗೆಯತುದಿಯಲ್ಲಿ ನಿಂತು ನೀವು ಹೇಳಿದ ಮಾತನ್ನು ನಡೆಸಿಕೊಡುತ್ತವೆ’ಎಂದೇನೇಮದಹೊತ್ತಿನಲ್ಲಿ ಧರ್ಮದೇವತೆಗಳು ಹೇಳುತ್ತೇವೆ ಎಂಬ ಆಧ್ಯಾತ್ಮಿ ಕಚಿಂತನೆಯ ಹಿನ್ನಲೆಯಲ್ಲಿ ಶ್ರೀ ಬಸವಯ್ಯ ಶರಣರಿಗೆ ಚರಬಸವ ಹಾಗೂ ಮಹಾಲಿಂಗ ಶರಣರ ಚಿಂತನೆಯ ತಪಸ್ಸುಅವರಲ್ಲಿ ಲಭಿಸಿದೆ.
ಬಸವಯ್ಯ ಶರಣರಲ್ಲಿ ಭಕ್ತಿ, ಅತಿಥಿ ಸತ್ಕಾರ ಪ್ರೀಯತೆ,ಮುತ್ಸಧಿತನ, ಸ್ಪಂದನಾಶೀಲತೆ, ನಿಷ್ಕಾಮಕರ್ಮಸಿದ್ದಿಮುಂತದವುಗಳನ್ನು ಕಾಣಬಹುದು.ಸೌಮ್ಯ ಸ್ವಭಾವದ, ಶಾಂತಮನಸ್ಸಿನ ವಿಶಾಲ ಹೃದಯದಆಧ್ಯಾತ್ಮಿಕಚಿಂತಕರಾದ ಬಸವಯ್ಯಶರಣರುತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ಬಡವ,ಧೀನದಲಿತರ ವೇದನೆಗೆ ಸಂವೇದಿಸುವ, ಜಾತಿ, ಮತ, ಪಂಥಗಳಬೇದ ಮಾಡದೆ“ಸರ್ವೆಜನ; ಸುಖಿನೋಭವಂತು”ಎಂದುಹರುಸುತ್ತಿದ್ದಾರೆ.
ಭಕ್ತಿ ಸಂಪನ್ನವಾದ ಬದುಕುಆಧ್ಯಾತ್ಮಿಕಸಾಧನೆಯ ಹಂಬಲ, ಭಕ್ತ ಸಮೂಹದಜೀವನಉನ್ನತಿಯ ಕಾಳಜಿಹೊಂದಿರುವ ಬಸವಯ್ಯ ಶರಣರುಗದ್ದುಗೆ ಸಂಸ್ಥಾನವನ್ನುಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಈ ಚರಬಸವೇಶ್ವರರ ಗದ್ದುಗೆ ಸಂಸ್ಥಾನದಲ್ಲಿ ಬಸವಯ್ಯ ಶರಣರ ಆಶಯದಂತೆ ಪುತ್ರ ಶರಣು ಗದ್ದುಗೆಯವರು ಅನೇಕ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದಾರೆ.
ಪ್ರತಿವರ್ಷ ಯುಗಾದಿಯ ಪಂಚಮಿಯಂದು ಚರಬಸವೇಶ್ವರರ ಜಾತ್ರೆ ಬಸವಯ್ಯ ಶರಣರ ನೇತೃತ್ವದಲ್ಲಿಹಾಗೂ ಭಕ್ತ ಸಮೂಹದೊಂದಿಗೆ ಬಹು ವಿಜೃಂಬಣೆಯಿಂದ ಜರುಗುತ್ತದೆ. ಈ ಜಾತ್ರೆಯಲ್ಲಿ ರಥೋತ್ಸವ, ಪಲ್ಲಕ್ಕಿಉತ್ಸವ, ಪುರವಂತಿಕೆ, ದನಗಳ ಜಾತ್ರೆ, ಗ್ರಾಮೀಣ ಆಟಗಳ ಸ್ಪರ್ಧೆ ಮುಂತಾದವು ವಿಶಿಷ್ಟವಾಗಿ ನಡೆಯುತ್ತವೆ.
ಸಗರನಾಡಿನ ಮಹತ್ವದ ಆಧ್ಯಾತ್ಮಿಕ ಕ್ಷೇತ್ರವಾಗಿರುವ ಚರಬಸವೇಶ್ವರರ ಗದ್ದುಗೆಯು ತನ್ನ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕøತಿಕ ಸಿದ್ದಿ ಸಾಧನೆಗಳ ಮೂಲಕ ಬೆಳೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
–ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು
ಶಹಾಪುರ. ಮೊ 9901559873.