ಪ್ರಮುಖ ಸುದ್ದಿ
ಕೃಷ್ಣ-ಭೀಮಾ ನದಿ ತೀರದ ಜನತೆ ಎಚ್ಚರ..! – ಡಿಸಿ ಸೂಚನೆ
ಕೃಷ್ಣ-ಭೀಮಾ ತೀರದ ಜನರಲ್ಲಿ ಎಚ್ಚರಿಕೆ ಅಗತ್ಯ
ಯಾದಗಿರಿ: ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದು, ಉಕ್ಕಿ ಹರಿಯುತ್ತಿರುವ ಹಿನ್ನಲೆ ನದಿ ತೀರಕ್ಕೆ ನಾಗರಿಕರು ತೆರಳದಂತೆ ಎಚ್ಚರವಹಿಸಬೇಕು ಎಂದು ನದಿ ತೀರದ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ ಸೂಚನೆ ನೀಡಿದ್ದಾರೆ.
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನಲೆ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ನಡುಗಡ್ಡೆಯಾದ ಹಿನ್ನಲೆ ನೀಲಕಂಠರಾಯನಗಡ್ಡಿ ಗ್ರಾಮಸ್ಥರು ನದಿಗೆ ತೆರಳದೆ ಎತ್ತರದ ಭಾಗದಲ್ಲಿ ಸುರಕ್ಷಿತ ಸ್ಥಳದಲ್ಲಿ ಇರುವಂತೆ, ಗಡ್ಡಿ ಜನರಿಗೆ ತಿಳಿಸಿದ್ದಾರೆ.
ಇನ್ನು ಹೆಚ್ಚು ನೀರು ನದಿಗೆ ಹರಿದು ಬರುವ ಸಾಧ್ಯತೆಯಿದ್ದು, ನದಿ ತೀರದ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳು ಆಯಾ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಡಂಗೂರ ಬಾರಿಸುವ ಕ್ರಮಕೈಗೊಂಡು ಜನರಿಗೆ ಎಚ್ಚರಿಸಲಾಗುತ್ತೆ ಎಂದರು.
ಅಲ್ಲದೆ ಗ್ರಾಮಸ್ಥರು ನದಿ ತೀರಕ್ಕೆ ಮಕ್ಕಳು ಸೇರಿದಂತೆ ಜನ-ಜಾನುವಾರುಗಳ ಹೋಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.