ಪಿಯುಸಿ ಖಾಸಗಿ ಕಾಲೇಜು ಮಂಡಳಿ ವಿರುದ್ಧ ಪಾಲಕರ ಆಕ್ರೋಶ
ಶಿಕ್ಷಕನಿಂದ ಥಳಿತಗೊಂಡ ಪಿಯು ವಿದ್ಯಾರ್ಥಿ ಕಾಣೆ -ಪಾಲಕರ ಆಕ್ರೋಶ
ಖಾಸಗಿ ಕಾಲೇಜಿಗೆ ಮುತ್ತಿಗೆ – ಸಂಸ್ಥೆ ವಿರುದ್ದ ಆಕ್ರೋಶ
ಯಾದಗಿರಿಃ ನಗರದ ಕಾಲೇಜುವೊಂದರ ಶಿಕ್ಷಕನೊಬ್ಬ ವಿದ್ಯಾರ್ಥಿ ಯೋರ್ವನಿಗೆ ಅಮಾನುಷವಾಗಿ ಥಳಿಸಿದ್ದರಿಂದ ಅವಮಾನಗೊಂಡ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಇಲ್ಲಿನ ಖಾಸಗಿ ಕಾಲೇಜುವೊಂದರಲ್ಲಿ ನಡೆದಿದೆ ಎನ್ನಲಾಗಿದೆ.
ಸರಿಯಾಗಿ ಅಭ್ಯಾಸ ಮಾಡದ ಕಾರಣ ಕ್ಲಾಸ್ ನಲ್ಲಿಯೇ ಶಿಕ್ಷಕ ಅತ್ಯಂತ ಅಮಾನವೀಯವಾಗಿ ಬಡಿದಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.
ಅವಮಾನಗೊಂಡ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿ ಜೀವೇಶ್ವರ ನಗರದ (ಸಿಬಿ ಕಮಾನ) ನಿವಾಸಿ ಪವನಕುಮಾರ ತಂದೆ ಬಸವರಾಜ ದಿವಟೆ ಎಂಬಾತನೇ ಕಾಲೇಜಿನಿಂದ ಮನೆಗೂ ಬಾರದೆ ಕಾಣೆಯಾಗಿದ್ದಾನೆ.
ಮಗ ಮನೆಗೆ ಬಾರದ ಕಾರಣ ಪಾಲಕರು ಸ್ಥಳೀಯ ಪೊಲೊಸ್ ಠಾಣೆಗೆ ತೆರಳಿ ಇದೇ 2019 ಜೂನ್ 26 ರಂದು ದೂರು ಸಲ್ಲಿಸಿದ್ದಾರೆ.
ಎರಡು ದಿನ ಕಳೆದರು ಮನೆಗೆ ಬಾರದ ಮಗ ಎತ್ತ ತೆರಳಿದ್ದಾನೋ ಏನೋ ಎಂಬ ಚಿಂತೆಯಲ್ಲಿ ಪಾಲಕರಿದ್ದು, ಇಂದು ಸಂಬಂಧಿಕರು ಸಾರ್ವಜನಿಕರು ಕಾಲೇಜಿಗೆ ಹೋಗಿ ವಿಚಾರಿಸಲಾಗಿ, ಶಿಕ್ಷಕನೋರ್ವ ಅಮಾನುಷವಾಗಿ ಬಡಿದಿರುವುದು ಅಲ್ಲಿನ ವಿದ್ಯಾರ್ಥಿಗಳಿಂದ ತಿಳಿದು ಬಂದಿದೆ.
ಆಕ್ರೋಶಗೊಂಡ ಪಾಲಕರು ಮತ್ತು ಸಾರ್ವಜನಿಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆ್ರಕೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ವಿದ್ಯಾರ್ಥಿ ಯನ್ನು ಥಳಿಸಿದ ಶಿಕ್ಷಕನ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಮಕ್ಕಳಿಗೆ ಹೊಡೆಯುವ ಹಕ್ಕು ನೀಡಿದವರಾರು.? ವಿದ್ಯಾರ್ಥಿ ಗಳು ಅಭ್ಯಾಸ ಮಾಡದಿದ್ದರೂ ಹೊಡೆದು ಕಲಿಸುವ ಹಕ್ಕಿಲ್ಲ. ಪ್ರೀತಿಯಿಂದಲೇ ಅವರನ್ನು ಒಲಿಸಿಕೊಳ್ಳಬೇಕು ಎಂಬ ನಿಯಮಬಿದೆ ಎಂದು ನಾಗರಿಕರು ಗದರಿದ್ದಾರೆ.
ಮಗು ಏನಾದರೂ ಜೀವಕ್ಕೆ ಅಪಾಯ ಮಾಡಿಕೊಂಡಿದ್ದಲ್ಲಿ ಆಡಳಿತ ಮಂಡಳಿ ವಿದ್ಯಾರ್ಥಿ ಗೆ ಥಳಿಸಿದ ಶಿಕ್ಷಕನೇ ಹೊಣೆಯಾಗಲಿದ್ದಾನೆ ಎಂದು ಎಚ್ಚರಿಸಿದರು.
ಈ ನಡುವೆ ಪಾಲಕರು ವಾಗ್ವಾದ ನಡೆಸಿದ್ದು,ದುಖಃತಪ್ತರಾಗಿದ್ದಾರೆ, ತಾಯಿ ಮಗ ನಾಪತ್ತೆಯಾದಾಗಿನಿಂದ ಊಟ ಮಾಡಿಲ್ಲ ಚಿಂತೆಯಲ್ಲಿ ನಿತ್ರಾಣ ಸ್ಥಿತಿಗೆ ಬಂದಿದ್ದಾರೆ.
ಕಾಲೇಜು ಮುಂದೆ ಕೂಗಾಟ ಮಾಡಿದರೇನು ಫಲವಿಲ್ಲ. ಕಾಲೇಜು ಮಂಡಳಿ ಮತ್ತು ಅಮಾನುಷವಾಗಿ ನಡೆದುಕೊಂಡ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕೂಡಲೇ ವಿದ್ಯಾರ್ಥಿ ಪತ್ತೆಗೆ ಪೊಲೀಸರು ಸಹಕರಿಸಬೇಕು ಎಂಬುದು ಹಲವರ ಮನವಿಯಾಗಿದೆ.