ಭತ್ತ ನಿಷೇಧಿತ ಪ್ರದೇಶದಲ್ಲಿ ಭತ್ತದ ಬೆಳೆಗೆ ಸರ್ಕಾರದಿಂದಲೇ ಪ್ರೋತ್ಸಾಹ.!
ಕೃಷಿಯಲ್ಲಿ ಯಾಂತ್ರಿಕತೆ ಬಳಕೆ ಲೇಬರ್ ಸಮಸ್ಯೆ ದೂರಃ ಚೇತನ ಪಾಟೀಲ್
ಯಾದಗಿರಿಃ ಭತ್ತದ ಬೆಳೆ ಸೇರಿದಂತೆ ಸಮಗ್ರ ಕೃಷಿಯಲ್ಲಿ ಯಾಂತ್ರಿಕತೆ ಬಳಸಿಕೊಂಡಲ್ಲಿ ಲೇಬರ್ ಸಮಸ್ಯೆ ದೂರವಾಗಲಿದೆ. ಅಲ್ಲದೆ ಯಂತ್ರಗಳ ಸಹಾಯದಿಂದ ಕೆಲಸಗಳು ಅಲ್ಪ ಸಮಯದಲ್ಲಿ ಮಾಡಿ ಮುಗಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ್ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಹಾಗೂ ಭತ್ತದ ಬೆಳೆಯಲ್ಲಿ ಯಾಂತ್ರಿಕತೆ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭತ್ತದ ಕಟಾವು, ನಾಟಿ ಮತ್ತು ಭತ್ತದ ಬುಡ ಕುಡಚಿ ಪುಡಿ ಮಾಡಲು ಸೇರಿದಂತೆ ಪರತಿಯೊಂದಕ್ಕೂ ಯಂತ್ರಗಳ ಸಹಾಯ ಪಡೆಯಬಹುದು. ಇದಿರಂದ ರೈತರಿಗೆ ಕೂಲಿ ಆಳುಗಳ ಸಮಸ್ಯೆ ನೀಗಿಸುತ್ತದೆ. ಅಲ್ಲದೆ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಿಕೊಳ್ಳಲು ಅನುಕೂಲವಾಗಲಿದೆ.
ಕಟಾವು ಮಾಡಬೇಕಾದ ಸಮಯವಿದೆ. ಲೇಬರ್ ಸಮಸ್ಯೆ ಎಂದು ನಾಲ್ಕು ದಿನ ಮುಂದೂಡುವ ಪ್ರಶ್ನೆ ಬರುವದಿಲ್ಲ. ಲೇಬರ್ ಸಮಸ್ಯೆಯಿಂದ ನಾಲ್ಕು ದಿನ ತಡವಾಯಿತು. ಆದರೆ ಈಗ ಜೋರಾಇ ಮಳೆ ಸುರಿದ ಪರಿಣಾಮ ಫಸಲು ಹಾಳಾಯಿತು ಎಂಬ ಸಮಸ್ಯೆಗಳು ಬರುವುದಿಲ್ಲ. ಸಮರ್ಪಕ ವೇಳೆಗೆ ಯಂತ್ರಗಳ ಸಹಾಯದಿಂದ ಕೆಲಸ ಮಾಡಿಕೊಳ್ಳಬಹುದು. ಇಂತಹ ಯಂತ್ರಗಳನ್ನು ರೈತರು ಸದ್ಭಳಿಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಹೋಬಳಿಗೊಂದು ಕೃಷಿ ಯಂತ್ರಧಾರೆ
ಪ್ರತಿ ಹೋಬಳಿ ಮಟ್ಟದಲ್ಲಿ ಕೃಷಿ ಯಂತ್ರಧಾರೆ ಎಂದು ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಯಂತ್ರಪೋಕರಣಗಳು ಬಾಡಿಗೆಗೆ ಅಲ್ಪ ದರದಲ್ಲಿ ಬಾಡಿಗೆಗೆ ಸೊರೆಯಲಿದ್ದು, ರೈತರು ತಮಗೆ ಬೇಕಾದ ಯಂತ್ರಗಳನ್ನು ಬಾಡಿಗೆ ಪಡೆಯಬಹುದು ಎಂದು ಡಾ.ಚೇತನ ಪಾಟೀಲ್ ತಿಳಿಸಿದರು.
ಟ್ರ್ಯಾಕ್ಟರ್ ಟ್ರ್ಯಾಲಿ, ಸೇರಿದಂತೆ, ಭತ್ತ ಕಟಾವು ಯಂತ್ರ, ಕುಡಚಿ ಪುಟಿ ಮಾಡುವ ಯತ್ರ ಮತ್ತು ಭತ್ತದ ರವದಿ ಸುಡುವದಕ್ಕೆ ಬಳಸುವ ಬೈಲರ್ ಯಂತ್ರ ಹಾಗೂ ಭೂಮಿ ಸಮತಟ್ಟು ಮಾಡುವ ಲೇಸರ್ ಯಂತ್ರಗಳನ್ನು ರೈತರು ಅಲ್ಪದರದಲ್ಲಿ ಬಾಡಿಗೆಗೆ ಪಡೆಯಬಹುದು ಎಂದು ತಿಳಿಸಿದರು.
ಈ ಮೊದಲು ತಾಲೂಕಿನಲ್ಲಿ 4 ಹೋಬಳಿಯಲ್ಲಿ ಮಾತ್ರ ಈ ವ್ಯವಸ್ಥೆ ಇತ್ತು. ಪ್ರಸ್ತುತ ಕೃಷಿ ಯಂತ್ರ ಧಾರೆ ವ್ಯವಸ್ಥೆ ಇನ್ನೂ 9 ಹೋಬಳಿಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆ ಜರುಗಿದವು.
ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ನಗನೂರ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ಕಿಶನ್ ರಾಠೋಡ, ಬಸಣ್ಣಗೌಡ ಯಡಿಯಾಪುರ, ರಾಜಶೇಖರ ಪಾಟೀಲ್, ಅಶೋಕರಡ್ಡಿ ಗೋನಾಲ, ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋಟಪೇಟ, ಡಾ.ದಾನಪ್ಪ ಕತ್ನಳ್ಳಿ,ತೋಟಗಾರಿಕೆಯ ಹಿರಿಯ ಸಹಾಯಕ ನರಸಪ್ಪ ಸೇರಿದಂತೆ ಇತರರಿದ್ದರು. ರೈತರಿಗಾಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ.ರುದ್ರಮೂರ್ತಿ ಮಣ್ಣು ವಿಜ್ಞಾನಿ, ಡಾ.ಕುಮಾರಸ್ವಾಮಿ ಹಿರೇಮಠ ಬೇಸಾಯ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮವು ಜರುಗಿತು.
ಭತ್ತ ನಿಷೇಧಿತ ಪ್ರದೇಶದಲ್ಲಿ ಸರ್ಕಾರದಿಂದಲೇ ಭತ್ತದ ಬೆಳೆಗೆ ಪ್ರೋತ್ಸಾಹ
ಒಪ್ಪಿಕೊಂಡ ಜಂಟಿ ಕೃಷಿ ನಿರ್ದೇಶಕಿ,
ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಭತ್ತ ಬೆಳೆಗೆ ಒಂದಡೆ ನಿಷೇಧವಿದೆ. ಇನ್ನೊಂದಡೆ ಇದೇ ಪ್ರದೇಶದಲ್ಲಿ ಭತ್ತದ ಬೆಳೆಗೆ ಪ್ರೋತ್ಸಾಹಿಸುವ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಅದೇ ಕೃಷಿ ಇಲಾಖೆಯಿಂದ ಆಯೋಜಿಸಲಾಗುತ್ತಿದೆ.
ಈ ಕುರಿತು ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನ ಪಾಟೀಲ್ ಅವರನ್ನು ಪತ್ರಕರ್ತರು ಕೇಳಿದರೆ, ಭತ್ತದ ಪ್ಲಾಟ್ ಬೇರಡೆ ಸಿಗಲಿಲ್ಲ ಆ ಕಾರಣಕ್ಕೆ ಇಲ್ಲಿ ಆಯೋಜಿಸಬೇಕಾಯಿತು ಎಂದು ಸಮಜಾಯಿಸಿ ನೀಡಿದರು.
ಆದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಭತ್ತದ ಬೆಳೆಗೆ ನಿಷೇಧವಿದೆ ಎಂಬುದನ್ನು ಒಪ್ಪಿಕೊಂಡ ಅವರು, ಸಮಗ್ರ ಬೆಳೆಗೆ ಕೃಷಿ ಚಟುವಟಿಕೆಯಲ್ಲಿ ಯಾಂತ್ರಿಕತೆ ಅಳವಡಿಸಿಕೊಳ್ಳಲು ತಿಳಿಸಲಾಗುತ್ತಿದೆ. ಇದರಿಂದ ಸಮಯ, ಖರ್ಚು ಮುಖ್ಯವಾಗಿ ಲೇಬರ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಭತ್ತ ನಿಷೇದಿತ ಪ್ರದೇಶದಲ್ಲಿ ಭತ್ತ ಬೆಳೆಯವುದು ಅಪರಾಧ. ಆದರೆ ಇಂತಹ ಪ್ರದೇಶದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಭತ್ತ ಬೆಳೆಗೆ ಪ್ರೋತ್ಸಾಹಿಸುವ ಕಾರ್ಯಕ್ರಮ ಹಾಕಿಕೊಂಡಿರುವುದು ದುರಂತ. ಕಾನೂನು ಪಾಲಿಸಬೇಕಾದ ಅಧಿಕಾರಿಗಳೇ ಇಲ್ಲಿ ಕಾನೂನು ಮುರಿದರೆ ಹೇಗೆ ಎಂಬ ಪ್ರಶ್ನಗೆ ಮೌನವಹಿಸಿದ ಅವರು,
ಕೇಂದ್ರ ಸರ್ಕಾರದ ಯೋಜನೆ ಇದು, ಭತ್ತ ಬೆಳೆಗಾರರು ಸೇರಿದಂತೆ ಇತರೆ ಬೆಳೆ ಕೃಷಿಗೆ ಬೇಕಾದ ವ್ಯವಸ್ಥೆಯನ್ನು ಯಂತ್ರಗಳ ಸಹಾಯದಿಂದ ಪಡೆಯಬಹುದು ಎಂಬುದರ ಕುರಿತು ರೈತರಿಗೆ ತಿಳಿಸಬೇಕಾದ ಯೋಜನೆ ಇದಾಗಿದೆ. ಹೀಗಾಗಿ ಅನಿವಾರ್ಯವಾಗಿ ಹಾಕಿಕೊಂಡಿದ್ದೇವೆ. ಬೇರಡೆ ಭತ್ತದ ಪ್ಲಾಟ್ ದೊರಕಿಲ್ಲ ಎಂದು ಉತ್ತರಿಸಿದರು.