ಗ್ರಾಪಂ ನೌಕರರಿಗೆ ವೇತನ ಹೆಚ್ಚಳ ಹರ್ಷ
ಶಹಾಪುರ ತಾಪಂ ಕಾರ್ಯನಿರ್ವಾಹಣಾಧಿಕಾರಿಗೆ ಸನ್ಮಾನ
ಯಾದಗಿರಿಃ ರಾಜ್ಯ ಸರ್ಕಾರ ಗ್ರಾಪಂ ನೌಕರರಿಗೆ ವೇತನ ನೀತಿ ಜಾರಿಗೊಳಿಸಿ ಆದೇಶ ಮಾಡಿದ ಹಿನ್ನೆಲೆಯಲ್ಲಿ ಸಂತಸಗೊಂಡ ಇಲ್ಲಿನ ತಾಲೂಕು ಗ್ರಾಮ ಪಂಚಾಯತ್ ನೌಕರರ ಸಂಘ ಸರ್ಕಾರದ ನಡೆಯನ್ನು ಸ್ವಾಗತಿಸಿ ತಾಪಂ ಇಓ ಎಸ್.ಕೆ.ಟಕ್ಕಳಿಕಿ ಮತ್ತು ತಾಪಂ ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಜಿಲ್ಲೆಯ ಶಹಾಪುರ ನಗರದ ತಾಪಂ ಕಚೇರಿ ಆವರಣದಲ್ಲಿ ತಾಲೂಕು ಗ್ರಾಪಂ ನೌಕರರ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಎಸ್.ಕೆ.ಟಕ್ಕಳಿಕಿ ಮತ್ತು ಕಚೇರಿ ಸಿಬ್ಬಂದಿ, ಅಧಿಕಾರಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್, ಉಪಾಧ್ಯಕ್ಷÀ ಮಲ್ಲಯ್ಯ ಪೋಲಂಪಲ್ಲಿ, ಸಿ.ಆಯ್.ಟಿ.ಯೂ. ಜಿಲ್ಲಾ ಕಾರ್ಯದರ್ಶಿ ಜೈಲಾಲ್ ತೋಟದಮನಿ ಸರ್ಕಾರ ಗ್ರಾಪಂ ನೌಕರರ ಬೇಡಿಕೆಗಳಿಗೆ ಸೂಕ್ತ ಸ್ಪಂಧಿಸಿ ಹಲವಾರು ನಿಯಮಗಳನ್ನು ರೂಪಿಸಿ ವೇತನ ಹೆಚ್ಚುವದರೊಂದಿಗೆ, ಕನಿಷ್ಡ ವೇತನ ನೀತಿ ಜಾರಿಗೊಳಿಸಿದ್ದಾರೆ.
ಆದರೆ ಆದೇಶದ ಪ್ರಕಾರ ಪ್ರತಿ ಪಂಚಾಯತ್ಗಳಿಗೂ ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಗ್ರಾಪಂ ನೌಕರರ ಇತರೆ ಬೇಡಿಕಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಮಲ್ಲಣಗೌಡ ಬಿರೆದಾರ, ಗಾಲಿಂಸಾಬ್ ಎಂ.ಬೆಳಗೇರಿ, ಮಲ್ಲಿಕಾರ್ಜುನ ಬಳಿಚಕ್ರ, ಮಲ್ಲಯ್ಯ ಪೋಲಂಪಲ್ಲಿ, ಸಿದ್ದು ಬಬಲಾದ್, ದೇವಿಂದ್ರಪ್ಪ ಹಂಪಳ್ಳಿ, ಭೀಮರಾಯ, ಬಸಣ್ಣ ಮುಡಬೂಳ, ಸಾದೇವಪ್ಪ ಬೀರನೂರ, ಮಲ್ಲಿಕಾರ್ಜುನ ನಾಗನಟಗಿ, ಮಾಳಪ್ಪ ಹೊಸಕೇರಾ, ನಿಂಗಣ್ಣ ಹೊರಟೂರ ಸೇರಿದಂತೆ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ರಾಜೇಶ್ವರಿ ಶಿರವಾಳ, ಮಡಿವಾಳಮ್ಮ ಹೂಗಾರ ಇತರರು ಭಾಗವಹಿಸದ್ದರು.